WhatsApp User Alert: ಪದೇ ಪದೇ ಮೊಬೈಲ್ ನಂಬರ್ ಬದಲಾಯಿಸುವವರಿಗೆ ಸುಪ್ರೀಂ ಕೋರ್ಟ್ ನಿಂದ ನಿಯಮ, ಖಡಕ್ ಎಚ್ಚರಿಕೆ.
ಮೊಬೈಲ್ ನಂಬರ್ ಅನ್ನು ಬದಲಾಯಿಸುವ ಮುನ್ನ ಸುಪ್ರೀಂ ಕೋರ್ಟ್ ನ ಈ ನಿಯಮದ ಬಗ್ಗೆ ತಿಳಿಯಿರಿ.
Supreme Court Warning for WhatsApp Users: ಪ್ರಸ್ತುತ ದೇಶದಲ್ಲಿ ಮೊಬೈಲ್ ಫೋನ್ (Mobile Phone) ಗಳನ್ನೂ ಬಳಕೆ ಮಾಡದೇ ಇರುವವರಿಗಿಂತ ಮೊಬೈಲ್ ಫೋನ್ ಗಳನ್ನೂ ಬಳಕೆ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ. ಫೋನ್ ಗಳನ್ನೂ ಬಳಕೆ ಮಾಡಲು ಸಿಮ್ ಕಾರ್ಡ್ ಬಹಳ ಅವಶ್ಯಕವಾಗಿದೆ. ಇತ್ತೀಚಿಗೆ ಸರ್ಕಾರ ಸಿಮ್ ಕಾರ್ಡ್ (Sim Card) ಗಳ ಮೇಲೆ ಹೊಸ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ.
ಈಗಿನ 5G ಯುಗದಲ್ಲಿ ಸ್ಮಾರ್ಟ್ ಫೋನ್ ಗಳಲ್ಲಿ ಡುಯೆಲ್ ಸಿಮ್ ಆಯ್ಕೆ ಇರುತ್ತದೆ. ಕೆಲವರು ಪದೇ ಪದೇ ಸಿಮ್ ಕಾರ್ಡ್ ಗಳನ್ನೂ ಬದಲಾಯಿಸುತ್ತಿರುತ್ತಾರೆ. ಅಂತವರಿಗೆ ಸುಪ್ರೀಂ ಕೋರ್ಟ್ (Supreme Court) ಇದೀಗ ಮಹತ್ವದ ಆದೇಶವನ್ನು ಹೊರಡಿಸಿದೆ. ಇದೀಗ ನೀವು ನಿಮ್ಮ ಮೊಬೈಲ್ ನಂಬರ್ ಅನ್ನು ಬದಲಾಯಿಸುವ ಮುನ್ನ ಸುಪ್ರೀಂ ಕೋರ್ಟ್ ನ ಈ ನಿಯಮದ ಬಗ್ಗೆ ತಿಳಿದುಕೊಳ್ಳುದು ಬಹಳ ಅವಶ್ಯಕವಾಗಿದೆ.
ಮೊಬೈಲ್ ನಂಬರ್ ಬದಲಾಯಿಸುವವರಿಗೆ ಸುಪ್ರೀಂ ಕೋರ್ಟ್ ನಿಂದ ಹೊಸ ನಿಯಮ
ಮೊಬೈಲ್ ಫೋನ್ ಸೇವಾ ಪೂರೈಕೆದಾರರು ನಿರ್ದಿಷ್ಟ ಅವಧಿಯ ನಂತರ ನಿಷ್ಕ್ರೀಯಗೊಂಡ ನಂಬರ್‌ಗಳನ್ನು ಹೊಸ ಚಂದಾದಾರರಿಗೆ ನೀಡಬಹುದು. ಆದರೆ ನೀವು ಹಳೆಯ ನಂಬರ್‌ನಲ್ಲಿ ವಾಟ್ಸಾಪ್ ಬಳಸುತ್ತಿದ್ದು, ಆ ನಂಬರ್ ನಿಂದ ಹೊಸ ಗ್ರಾಹಕ ಕೂಡ ವಾಟ್ಸಪ್ ಖಾತೆ ತೆರೆದರೆ ನಿಮ್ಮ ಡೇಟಾ ಹೊಸದಾಗಿ ಹಂಚಿಕೆಯಾದ ಗ್ರಾಹಕರ ಕೈ ಸೇರುತ್ತದೆ. ಹಾಗಾಗಿ ನಿಮ್ಮ ಡೇಟಾವನ್ನು ಡಿಲೀಟ್ ಮಾಡಬೇಕಾಗುವುದು ನಿಮ್ಮದೇ ಕರ್ತವ್ಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನಿಷ್ಕ್ರಿಯಗೊಳಿಸಿದ ಸಂಖ್ಯೆಗಳ ಡೇಟಾದ ಬಗ್ಗೆ ವಾಟ್ಸಾಪ್ ಹೇಳೋದೇನು…?
ವಾಟ್ಸಾಪ್ ಬಳಕೆದಾರರ ಸುರಕ್ಷತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ವಾಟ್ಸಾಪ್ ಖಾತೆಗಳನ್ನು ಸಾಮಾನ್ಯವಾಗಿ 120 ದಿನಗಳ ನಿಷ್ಕ್ರಿಯತೆಯ ನಂತರ ಡಿಲೀಟ್ ಮಾಡಲಿದೆ. ಅಂದರೆ ಸತತ 120 ದಿನಗಳ ವರೆಗೆ ಬಳಕೆ ಮಾಡದೇ ಇದ್ದರೆ ಅದು ನಿಷ್ಕ್ರಿಯವಾಗಲಿದೆ. ವಾಟ್ಸಾಪ್ ಅಕೌಂಟ್ ಅನ್ನು ಡಿಲೀಟ್ ಮಾಡುವ ಮೊದಲು ಬಳಕೆದಾರರ ಸಾಧನದಲ್ಲಿ ಸ್ಥಳೀಯವಾಗಿ ಸಂಗ್ರಹಿಸಲಾದ ವಿಷಯವು ವಾಟ್ಸಾಪ್ ಅನ್ನು ಡಿಲೀಟ್ ಮಾಡುವ ತನಕ ಉಳಿಸಿರುತ್ತದೆ. ಒಂದು ವೇಳೆ ಬಳಕೆದಾರರು ಅದೇ ಡಿವೈಸ್ ನಲ್ಲಿ ವಾಟ್ಸಾಪ್ ಅಕೌಂಟ್, ಅದೇ ಸಂಖ್ಯೆಯಿಂದ ರಿಜಿಸ್ಟರ್ ಮಾಡಿಕೊಂಡರೆ ಲೋಕಲ್ ಡಿವೈಸ್ ನಲ್ಲಿ ಸೇವ್ ಆದ ಮಾಹಿತಿಗಳು ಕಾಣಿಸಿಕೊಳ್ಳುತ್ತವೆ.
ನಿಮ್ಮ ಡೇಟಾವನ್ನು ನೀವೇ ಡಿಲೀಟ್ ಮಾಡಿ
ಇನ್ನು ನಿಷ್ಕ್ರೀಯಗೊಂಡ ನಂಬರ್‌ಗಳನ್ನು ಹೊಸದಾಗಿ ಮರು ಹಂಚಿಕೆ ಮಾಡಿದರೆ ಹಳೆ ಬಳಕೆದಾರರ ಗೌಪ್ಯತೆ ಉಲ್ಲಂಘನೆ ಆಗಲಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಮಾಹಿತಿ ನೀಡಿದೆ. ಅದೇನೆಂದರೆ ಚಂದಾದಾರರು ಹಿಂದಿನ ಫೋನ್ ಸಂಖ್ಯೆಯೊಂದಿಗೆ ಲಗತ್ತಿಸಲಾದ ವಾಟ್ಸಾಪ್ ಖಾತೆಯನ್ನು ಅಳಿಸುವ ಮೂಲಕ ಮತ್ತು ಸ್ಥಳೀಯ ಡಿವೈಸ್ ನಲ್ಲಿ ಸಂಗ್ರಹವಾಗಿರುವ ವಾಟ್ಸಾಪ್ ಡೇಟಾವನ್ನು ಡಿಲೀಟ್ ಮಾಡುವ ಮೂಲಕ ವಾಟ್ಸಾಪ್ ದುರ್ಬಳಕೆಯನ್ನು ತಡೆಗಟ್ಟಬಹುದು ಎಂದು ಹೇಳಿದೆ.