Sports Hernia: ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿ, ಗಂಭೀರ ಖಾಯಿಲೆಗೆ ತುತ್ತಾದ ಸೂರ್ಯಕುಮಾರ್ ಯಾದವ್
ಖಾಯಿಲೆಗೆ ತುತ್ತಾದ ಸೂರ್ಯಕುಮಾರ್ ಯಾದವ್, ಆತಂಕ ವ್ಯಕ್ತಪಡಿಸಿದ ಅಭಿಮಾನಿಗಳು
Suryakumar Yadav Health Condition: ಆರೋಗ್ಯ ಚೆನ್ನಾಗಿದ್ದರೆ ಯಾವುದೇ ವ್ಯಕ್ತಿಯು ಏನು ಬೇಕಾದರೂ ಸಾಧಿಸಬಹುದು. ಯಾವುದೇ ಸಾಧನೆಯನ್ನು ಮಾಡಲು ಮಾನವನ ಆರೋಗ್ಯ ಮುಖ್ಯವಾಗಿರುತ್ತದೆ. ಆರೋಗ್ಯ ಸ್ಥಿತಿ ಸ್ವಲ್ಪ ಮಟ್ಟಿಗೆ ಹದೆಗೆಟ್ಟರು ಕೂಡ ಜೀವನದಲ್ಲಿ ಸಾಕಷ್ಟು ತೊಂದರೆಯನ್ನು ಎದುರಿಸಬೇಕಾಗುತ್ತದೆ.
ಇನ್ನು ಸಿನಿಮಾ ತಾರೆಯರಿಗೆ, ಕ್ರಿಕೆಟ್ ಆಟಗಾರರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಅದು ಅವರ ವೃತ್ತಿ ಜೀವನಕ್ಕೆ ಮುಳುವಾಗುತ್ತದೆ. ಇನ್ನು ಭಾರತೀಯ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ ಮ್ಯಾನ್ Suryakumar Yadav ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. Suryakumar Yadav ಅವರು ಆರೋಗ್ಯ ಸ್ಥಿತಿ ಹದೆಗೆಟ್ಟಿರುವುದರಿಂದ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಖಾಯಿಲೆಗೆ ತುತ್ತಾದ ಸೂರ್ಯಕುಮಾರ್ ಯಾದವ್
ಸೂರ್ಯ ಕುಮಾರ್ ಯಾದವ್ ಸ್ಪೋರ್ಟ್ಸ್ ಹರ್ನಿಯಾದಿಂದ (Sports Hernia) ಬಳಲುತ್ತಿದ್ದಾರೆ. ಈ ರೋಗವು ಹರ್ನಿಯಾದಂತೆಯೇ ಇರುತ್ತದೆ ಆದರೆ ಕ್ರೀಡಾ ಹರ್ನಿಯಾ ಹೆಚ್ಚಾಗಿ ಕ್ರೀಡಾಪಟುಗಳಲ್ಲಿ ಕಂಡುಬರುತ್ತದೆ. ಸ್ಪೋರ್ಟ್ಸ್ ಹರ್ನಿಯಾ ಒಂದು ವಿಶೇಷ ರೀತಿಯ ವೈದ್ಯಕೀಯ ಸ್ಥಿತಿಯಾಗಿದೆ. ಇದು ವಿಶೇಷವಾಗಿ ಕ್ರೀಡಾಪಟುಗಳಲ್ಲಿ ಅಂದರೆ ಕ್ರೀಡಾ ವ್ಯಕ್ತಿಗಳಲ್ಲಿ ಕಂಡುಬರುತ್ತದೆ.
ಈ ಸಮಸ್ಯೆಯು ಕ್ರೀಡಾ ವ್ಯಕ್ತಿಗೆ ಸಂಭವಿಸಿದರೆ ಅದು ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ವಾಸ್ತವದಲ್ಲಿ, ಓಟದಂತಹ ದೈಹಿಕ ಚಟುವಟಿಕೆಯು ಸ್ನಾಯುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಸ್ನಾಯುಗಳು ಹಾಗೂ ಕೀಲಿಗಳು ತೀವ್ರವಾಗಿ ಘಾಸಿಗೊಳ್ಳುತ್ತದೆ. ಇದನ್ನೇ ಸ್ಪೋರ್ಟ್ಸ್ ಹರ್ನಿಯಾ ಎಂದು ಕರೆಯಲಾಗುತ್ತದೆ.
ಆತಂಕ ವ್ಯಕ್ತಪಡಿಸಿದ ಅಭಿಮಾನಿಗಳು
ಸ್ಪೋಟಕ ಬ್ಯಾಟ್ ಮ್ಯಾನ್ Suryakumar Yadav ಅವರಿಗೆ ಸ್ಪೋರ್ಟ್ಸ್ ಹರ್ನಿಯಾ ಖಾಯಿಲೆ ಇರುವುದು ಇತ್ತೀಚಿಗೆ ತಿಳಿದುಬಂದಿದೆ. ಇದರಿಂದಾಗಿ ಅವರು ಹೆಚ್ಚಿನ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. Suryakumar Yadav ಅವರ ಖಾಯಿಲೆಯ ಬಗ್ಗೆ ಸುದ್ದಿ ವೈರಲ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಈ ಖಾಯಿಲೆಯ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಸದ್ಯ Suryakumar Yadav ಅವರು ಅನಾರೋಗ್ಯದ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಈ ಕಾರಣಕ್ಕೆ ಅವರು ಸ್ವಲ್ಪ ಸಮಯದವರೆಗೆ ಮೈದಾನಕ್ಕೆ ಬರುವುದು ಕಷ್ಟ ಎನ್ನಬಹದು. ಈ ಕಾರಣಕ್ಕೆ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.