Suzuki Avenis: ಈ ಸುಜುಕಿ ಸ್ಕೂಟರ್ ಮುಂದೆ ಬೇಡಿಕೆ ಕಳೆದುಕೊಂಡ ಹೊಸ ಆಕ್ಟಿವಾ, ಕಡಿಮೆ ಬೆಲೆ ಮತ್ತು ಗರಿಷ್ಟ ಮೈಲೇಜ್.

55 ಕಿಲೋಮೀಟರ್‌ ಮೈಲೇಜ್ ನೀಡುವ ಈ ಸುಜುಕಿ ಸ್ಕೂಟರ್ ಮುಂದೆ ಬೇಡಿಕೆ ಕಳೆದುಕೊಂಡ ಹೊಸ ಆಕ್ಟಿವಾ

Suzuki Avenis Price And Feature: ಪ್ರಸ್ತುತ ಮಾರುಕಟ್ಟೆಯಲ್ಲಿ ಬೈಕ್ ಗಳಷ್ಟೇ ಸ್ಕೂಟರ್ ಗಳು ಕೂಡ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ವಿವಿಧ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಹಲವು ಮಾದರಿಯ ಅತ್ಯಾಧುನಿಕ ಫೀಚರ್ ಇರುವಂತಹ ಸ್ಕೂಟರ್ ಗಳನ್ನೂ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿವೆ.

ಸ್ಕೂಟರ್ ಗಳು ಹೆಚ್ಚು ಮೈಲೇಜ್ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜನರು ಹೆಚ್ಚಾಗಿ ಹೆಚ್ಚು ಮೈಲೇಜ್ ನೀಡುವ ಸ್ಕೂಟರ್ ಗಳನ್ನೂ ಖರೀದಿಸಲು ಬಯಸುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ನೀಡುವಂತಹ Suzuki Avenis Scooter ಲಾಂಚ್ ಆಗಿದೆ. ಈ Suzuki Avenis ಸ್ಕೂಟರ್ ನ ವೈಶಿಷ್ಟ್ಯಗಳ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

Suzuki Avenis Price And Features
Image Credit: Bikewale

ಈ ಸುಜುಕಿ ಸ್ಕೂಟರ್ ಮುಂದೆ ಬೇಡಿಕೆ ಕಳೆದುಕೊಂಡ ಹೊಸ ಆಕ್ಟಿವಾ
Suzuki Avenis ಗೆ ಆಕರ್ಷಕವಾಗಿ ಸ್ಪೋರ್ಟಿ ಲುಕ್ ಹೊಂದಿದೆ. ಎಲ್‌ ಇಡಿ ಹೆಡ್‌ ಲೈಟ್‌ ಗಳು, ಸ್ಪೋರ್ಟಿ ಅಲಾಯ್ ವೀಲ್‌ ಗಳು ಮತ್ತು ಆಕರ್ಷಕ ಬಾಡಿ ಗ್ರಾಫಿಕ್ಸ್ ಇನ್ನಿತರ ಸ್ಕೂಟರ್ ಗಳಿಗೆ ಠಕ್ಕರ್ ನೀಡುವಂತೆ ಬಹಳ ಆಕರ್ಷಣೀಯವಾಗಿದೆ.

ಹಾಗೆಯೆ ಇದರಲ್ಲಿ ನೀವು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ನ್ಯಾವಿಗೇಷನ್ ಸೌಲಭ್ಯ, ಮುಂಭಾಗದ ಬಾಕ್ಸ್‌ ನಲ್ಲಿ ಯುಎಸ್‌ಬಿ ಸಾಕೆಟ್, ಎಂಜಿನ್ ಕಿಲ್ ಸ್ವಿಚ್ ಮತ್ತು ಬಾಹ್ಯ ಬಾಳಿಕೆ ಬರುವ ಇಂಧನ ಕ್ಯಾಪ್ ಮುಂತಾದ ವೈಶಿಷ್ಟ್ಯಗಳನ್ನು ಪಡೆಯಬಹುದು. ಈಗಾಗಲೇ ಮಾರುಕಟ್ಟೆಯಲ್ಲಿ Activa ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಸದ್ಯ ಈ Suzuki Avenis Scooter ಮಾರುಕಟ್ಟೆಯಲ್ಲಿ ತನ್ನ ಅತ್ಯಾಧುನಿಕ ವೈಶಿಷ್ಟ್ಯಗಳು ಹಾಗೂ ಅಧಿಕ ಮೈಲೇಜ್ ವಿಚಾರವಾಗಿ ಆಕ್ಟಿವವನ್ನು ಹಿಂದಿಕ್ಕಲಿದೆ.

Suzuki Avenis Price In India
Image Credit: Bikewale

ಕಡಿಮೆ ಬೆಲೆ ಮತ್ತು ಗರಿಷ್ಟ ಮೈಲೇಜ್
ಇನ್ನು Avenis ಶಕ್ತಿಯುತ 124.3 cc ಎಂಜಿನ್‌ ನೊಂದಿಗೆ ಬರುತ್ತದೆ. ಇದು 8.7 PS ಪವರ್ ಮತ್ತು 10 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಅವೆನಿಸ್ ನಿಮಗೆ ಪ್ರತಿ ಲೀಟರ್‌ ಗೆ 55 ಕಿಲೋಮೀಟರ್‌ಗಳ ಅತ್ಯುತ್ತಮ ಮೈಲೇಜ್ ನೀಡುತ್ತದೆ. ಇನ್ನು ಸುಜುಕಿ ಅವೆನಿಸ್‌ನ ಎಕ್ಸ್ ಶೋ ರೂಂ ಬೆಲೆ ರೂ. 92,000 ರಿಂದ ರೂ. 92,800 ರ ನಡುವೆ ಇದೆ. ಈ ಸ್ಕೂಟರ್‌ನ ವೈಶಿಷ್ಟ್ಯಗಳು ಮತ್ತು ಕಾರ್ಯಕ್ಷಮತೆಯನ್ನು ಪರಿಗಣಿಸಿ ಈ ಬೆಲೆಯನ್ನು ಸಾಕಷ್ಟು ಸಮಂಜಸವೆಂದು ಪರಿಗಣಿಸಬಹುದು. ಬಜೆಟ್ ಬೆಲೆಯಲ್ಲಿ ಸಿಗುವ ಸ್ಕೂಟರ್ ಗಳ ಪಟ್ಟಿಯಲ್ಲಿ Suzuki Avenis ಕೂಡ ಒಂದಾಗಿದೆ.

Join Nadunudi News WhatsApp Group

Suzuki Avenis Scooter Mileage
Image Credit: Bikewale

Join Nadunudi News WhatsApp Group