Burgman EV: ಓಲಾ ಮತ್ತು ಅಥೇರ್ ಸ್ಕೂಟರ್ ಗೆ ಪೈಪೋಟಿ ಕೊಡಲು ಬಂತು ಇನ್ನೊಂದು ಸುಜುಕಿ Ev, ಕಡಿಮೆ ಬೆಲೆ 100 Km ರೇಂಜ್.

ಅಗ್ಗದ ಬೆಲೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಸುಜುಕಿ, ಸಂಕಷ್ಟದಲ್ಲಿ ಓಲಾ.

Suzuki Burgman Street Electric 125: ಸದ್ಯ ಮಾರುಕಟ್ಟೆಯಲ್ಲಿ Electric ವಾಹನಗಳ ಸಂಖ್ಯೆ ಹೆಚ್ಚಿದೆ ಎನ್ನಬಹುದು. ಜನರು ಹೆಚ್ಚಾಗಿ ಎಲೆಟ್ರಿಕ್ ವಾಹನಗಳ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ. ಕಚ್ಚಾ ತೈಲಗಳ ಬೆಲೆ ಏರಿಕೆಯು ಒಂದು ರೀತಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆಯನ್ನು ಹೆಚ್ಚಿಸಿದೆ ಎನ್ನಬಹುದು. ಸದ್ಯ ಗ್ರಾಹಕರಿಗೆ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಾಕಷ್ಟು ಆಯ್ಕೆ ಇದ್ದು, ಇದೀಗ ಗ್ರಾಹಕರ ಆಯ್ಕೆಗೆ ಇನ್ನೊಂದು ಹೊಸ Electric Scooter ಸೇರ್ಪಡೆಯಾಗಿದೆ.

Burgman Street Electric 125
Image Credit: Hindustantimes

New Suzuki Bergman EV
ಆಟೋಮೊಬೈಲ್ ಕಂಪನಿಗಳು ತಮ್ಮ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ ಗಳನ್ನು ಬಿಡುಗಡೆ ಮಾಡುತ್ತಿವೆ. ಸದ್ಯ ಜಪಾನ್ ಕಂಪನಿ ಸುಜುಕಿ, ಅಕ್ಟೋಬರ್ ಅಂತ್ಯದ ವೇಳೆಗೆ ನೂತನ Suzuki Bergman EV ಪರಿಚಯಿಸಲಿದೆ. ಜಪಾನ್ ಮೊಬಿಲಿಟಿ ಶೋ 2023 ಅಕ್ಟೋಬರ್ 26 ರಿಂದ ನವೆಂಬರ್ 5 ರ ವರೆಗೆ ಟೋಕಿಯೊದಲ್ಲಿ ನಡೆಯಲಿದೆ. ಈ ವೇಳೆ Suzuki ತನ್ನ Bergman Street Electric 125 ರೂಪಾಂತವನ್ನು ಪರಿಚಯಿಸಲಿದೆ.

Bergman Street Electric 125
ಇನ್ನು ಮಾರುಕಟ್ಟೆಯಲ್ಲಿ Ola S1 Pro, Ather 450X, Hero Vida V1 ಮತ್ತು Bajaj Chetak ಎಲೆಕ್ಟ್ರಿಕ್ ಮಾದರಿಯ ಜೊತೆ ಈ ನೂತನ Bergman Street Electric 125 ಸ್ಕೂಟರ್ ಸ್ಪರ್ದಿಸಲಿದೆ. ಜಪಾನ್‌ನಲ್ಲಿ ನಡೆಯಲಿರುವ ಪ್ರದರ್ಶನದಲ್ಲಿ ಕಂಪನಿಯು ಈ ಹೊಸ ಬರ್ಗ್‌ಮ್ಯಾನ್ ಎಲೆಕ್ಟ್ರಿಕ್ ಸ್ಕೂಟರ್‌ ನ ಪರಿಕಲ್ಪನೆಯ ಮಾದರಿಯನ್ನು ಪರಿಚಯಿಸಿದೆ.

Burgman Street Electric 125 Price
Image Credit: Bikewale

ಆದರೆ ಇದರ ಸಂಪೂರ್ಣ ವಿನ್ಯಾಸವು ICE ಮಾದರಿಯಂತೆಯೇ ಇರುತ್ತದೆ ಎಂದು ಕಂಪನಿ ಹೇಳಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ ನಲ್ಲಿ ನೀವು 4kW ಎಲೆಕ್ಟ್ರಿಕ್ ಮೋಟರ್ ಅನ್ನು ಪಡೆಯಬಹುದು ಅದು 18NM ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಶಕ್ತಿಶಾಲಿ ಬ್ಯಾಟರಿಯನ್ನು ಅಳವಡಿಸಿದ್ದು, ಫಾಸ್ಟ್ ಚಾರ್ಜರ್ ನ ಮೂಲಕ 2 ರಿಂದ 3 ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇನ್ನು ಒಂದೇ ಚಾರ್ಜ್ ನಲ್ಲಿ Burgman EV ಸ್ಕೂಟರ್ ಬರೋಬ್ಬರಿ 90 ರಿಂದ 100 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.

Bergman Street Electric 125 ಬೆಲೆ ಮತ್ತು ವಿಶೇಷತೆ
ಇನ್ನು Bergman Street Electric 125 ಸ್ಕೂಟರ್ ನಲ್ಲಿ ನೀವು Digital Screen, USB Charger, Fast Charger, LED Light, Remote Start, Alloy Wheel, Tubeless Tires, Cruise Control, Riding Mode, Mobile Connectivity ಸೇರಿದಂತೆ ಹತ್ತು ಹಲವು ಸುಧಾರಿತ ವೈಶಿಷ್ಟ್ಯಗಳನ್ನು ನೋಡಬಹುದಾಗಿದೆ. ಇನ್ನು ಶಕ್ತಿಶಾಲಿ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ Bergman EV ಮಾರುಕಟ್ಟೆಯಲ್ಲಿ 1.5 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ.

Join Nadunudi News WhatsApp Group

Join Nadunudi News WhatsApp Group