Ads By Google

Swift 4th Gen: 2024 ರ ಸ್ವಿಫ್ಟ್ ಕಾರಿನಲ್ಲಿದೆ ಈ ಹೊಸ ಫೀಚರ್, 2024 ರ ಅಗ್ಗದ ಕಾರಿನಲ್ಲಿ ಕೂತರೆ ನಿಮಗೆ ಬೇರೇನೇ ಅನುಭವ.

Maruti Swift 4th Gen Price And Feature

Image Credit: Original Source

Ads By Google

Swift 4th Gen Price And Feature: ಸದ್ಯ ಮಾರುತಿ ಕಂಪನಿಯು ತನ್ನ Swift 4th Gen ಅನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. Maruti Swift 4th Gen ಮಾದರಿ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಹಳೆಯ ಮಾದರಿಯ ಸ್ವಿಫ್ಟ್ ಗೆ ಹೋಲಿಸಿದರೆ ನ್ಯೂ ಜನರೇಷನ್ ಸ್ವಿಫ್ಟ್ ಮಾದರಿ ವಿನ್ಯಾಸ ಮತ್ತು ವೈಶಿಷ್ಟ್ಯಗಳಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣಲಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ ಬ್ಯಾಕ್‌ ನ ನಾಲ್ಕನೇ ತಲೆಮಾರಿನ ಪುನರಾವರ್ತನೆಯು 9ನೇ ಮೇ 2024 ರಂದು ಭಾರತಕ್ಕೆ ಪಾದಾರ್ಪಣೆ ಮಾಡಿದೆ. ಮಾರುತಿ ಸುಜುಕಿ ಇಂಡಿಯಾ 4ನೇ ತಲೆಮಾರಿನ ಎಪಿಕ್ ನ್ಯೂ ಸ್ವಿಫ್ಟ್‌ ಗೆ ಪ್ರತಿ ಯುನಿಟ್‌ ಗೆ ರೂ. 11,000 ಕ್ಕೆ ಪ್ರಿ ಬುಕಿಂಗ್ ಅನ್ನು ತೆರೆದಿದೆ. ಇನ್ನು ಬಿಡುಗಡೆಗೊಂಡಿರುವ 2024 ರ ಹೊಸ ಸ್ವಿಫ್ಟ್ ಕಾರಿನ ಸೇಫ್ಟಿ ಫೀಚರ್ ಹೇಗಿದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Image Credit: Carwale

2024 ರ ಸ್ವಿಫ್ಟ್ ಕಾರಿನಲ್ಲಿದೆ ಈ ಹೊಸ ಫೀಚರ್
2024 ರ ಮಾರುತಿ ಸುಜುಕಿ ಸ್ವಿಫ್ಟ್ ಹೊಸ Z- ಸರಣಿಯ ಪೆಟ್ರೋಲ್ ಎಂಜಿನ್ ಮತ್ತು ಫ್ರಾಂಕ್ಸ್-ಪ್ರೇರಿತ ಒಳಾಂಗಣವನ್ನು ಗಮನಾರ್ಹವಾಗಿ ಸುಧಾರಿತ ವಿನ್ಯಾಸದೊಂದಿಗೆ ಹೊಂದಿರುತ್ತದೆ ಎಂದು ವರದಿಯಾಗಿದೆ. ಹೊಸ ಎಂಜಿನ್ 3-ಸಿಲಿಂಡರ್ ಘಟಕವಾಗಿದ್ದು, ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನದ ಆಯ್ಕೆಯೊಂದಿಗೆ ಲಭ್ಯವಿರುತ್ತದೆ. ಇನ್ನು ಹೊಸ ಸ್ವಿಫ್ಟ್ 5,700rpm ನಲ್ಲಿ 81.6 PS ಮತ್ತು 4,300rpm ನಲ್ಲಿ 112Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಇದು 8.2PS ಹೆಚ್ಚು ಪವರ್ ಮತ್ತು 1Nm ಹೆಚ್ಚು ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸುಜುಕಿಯ Z-ಸರಣಿಯ ಗ್ಯಾಸೋಲಿನ್ ಎಂಜಿನ್ 25.72 kmpl ಮೈಲೇಜ್ ನೀಡುವ ನಿರೀಕ್ಷೆಯಿದೆ. ಇದು ಹಿಂದಿನ ಆವೃತ್ತಿಗಿಂತ 3.34 kmpl (ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್) ಮತ್ತು 3.16 (ಆಟೋಮ್ಯಾಟಿಕ್ ಗೇರ್‌ಬಾಕ್ಸ್) ಸುಧಾರಣೆಯಾಗಿದೆ. ಕಾರಿನ ಮುಂಭಾಗವು ನವೀನ ಎಲ್ಇಡಿ ಹೆಡ್ಲೈಟ್ ಗಳು, ಎಲ್-ಆಕಾರದ ಎಲ್ಇಡಿ ಡಿಆರ್ಎಲ್ಗಳು ಮತ್ತು ಸೂಚಕಗಳಲ್ಲಿ ಹ್ಯಾಲೊಜೆನ್ ಬಲ್ಬ್ ಗಳನ್ನೂ ಒಳಗೊಂಡಿದೆ. ಗ್ರಿಲ್ ಮೇಲ್ಭಾಗದಲ್ಲಿ ‘ಸುಜುಕಿ’ ಲೋಗೋವನ್ನು ಪಡೆಯುತ್ತದೆ ಮತ್ತು LED ಟೈಲ್ ಲೈಟ್ ಗಳನ್ನು ಪಡೆಯುತ್ತದೆ. ಈ ಕಾರಿನ ಸೈಡ್ ಡಿಸೈನ್ ಅತ್ಯುತ್ತಮವಾಗಿದೆ.

Image Credit: Original Source

2024 ರ ಅಗ್ಗದ ಕಾರಿನಲ್ಲಿ ಕೂತರೆ ನಿಮಗೆ ಬೇರೇನೇ ಅನುಭವ
ಇದು 16-ಇಂಚಿನ 10-ಸ್ಪೋಕ್ ಡೈಮಂಡ್ ಕಟ್ ಅಲಾಯ್ ಚಕ್ರಗಳು, ಹಿಂದಿನ ಬಾಗಿಲುಗಳಲ್ಲಿ ಸಾಂಪ್ರದಾಯಿಕ ಶೈಲಿಯ ಹ್ಯಾಂಡಲ್‌ ಗಳನ್ನು ಪಡೆಯುತ್ತದೆ. ಹಿಂಭಾಗವು ಸಿ-ಆಕಾರದLED ಟೈಲ್ ದೀಪಗಳೊಂದಿಗೆ ಅತ್ಯಾಧುನಿಕ ವಿನ್ಯಾಸವನ್ನು ಹೊಂದಿದೆ. ಒಳಭಾಗದಲ್ಲಿಯೂ ಸಹ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್ ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಪಡೆಯುತ್ತದೆ. ಈ ಕಾರಿನಲ್ಲಿ 5 ಜನರು ಆರಾಮವಾಗಿ ಪ್ರಯಾಣಿಸಬಹುದು.

ಇದು ಹಳೆಯ ಮಾದರಿಯಂತೆಯೇ ಬೂಟ್ ಸ್ಪೇಸ್ ಅನ್ನು ಹೊಂದಿದೆ ಮತ್ತು ಮುಂಭಾಗದಲ್ಲಿ ಡ್ಯಾಶ್‌ ಬೋರ್ಡ್ 9-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ ಇನ್ಫೋಟೈನ್‌ ಮೆಂಟ್ ಸ್ಕ್ರೀನ್ ಮತ್ತು ಜಬರ್ದಾಸ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿರುವುದನ್ನು ಕಾಣಬಹುದು. ಹೊಸ ಸ್ವಿಫ್ಟ್ ಆರು ಏರ್‌ ಬ್ಯಾಗ್‌ ಗಳನ್ನು ಪ್ರಮಾಣಿತವಾಗಿ ಹೊಂದಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಹತ್ತಾರು ಸೇಫ್ಟಿ ಫೀಚರ್ ಅನ್ನು ಕಂಪನಿಯು ನೀಡಿದೆ. ಇನ್ನು ನೀವು ಈ ಐಷಾರಾಮಿ ಸ್ವಿಫ್ಟ್ ಮಾದರಿಯನ್ನು ಜೂನ್ ನಲ್ಲಿ ನಿಮ್ಮದಾಗಿಸಿಕೊಳ್ಳಬಹುದು. ಕಂಪನಿಯು Swift 2024 ರ ಮಾದರಿಯ ವಿತರಣೆಯನ್ನು ಜೂನ್ ನಲ್ಲಿ ನಿಗದಿಪಡಿಸಿದೆ.

Image Credit: Carwale
Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in