Ashok Leyland: ದುಡಿಮೆ ಮಾಡುವ ಜನರಿಗಾಗಿ ಬಂತು ಅಗ್ಗದ ಅಶೋಕ್ ಲೇಲ್ಯಾಂಡ್ Ev, 120 Km ಮೈಲೇಜ್.

120 ಕಿಲೋಮೀಟರ್ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಅಶೋಕ್ ಲೇಲ್ಯಾಂಡ್ ಮಾರುಕಟ್ಟೆಗೆ ಬಿಡುಗಡೆ.

Switch Mobility leV3 and leV4 Electric Pickup: ಭಾರತೀಯ ಬಹುರಾಷ್ಟ್ರೀಯ ವಾಹನ ತಯಾರಕ ಕಂಪನಿ ಆಗಿರುವ Ashok Leyland ಚನ್ನೈ ಅಲ್ಲಿ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿದೆ. ವಾಣಿಜ್ಯ ವಾಹನ ತಯಾರಕ ಕಂಪನಿ ಆಗಿರುವ Ashok Leyland ದೇಶದಲ್ಲಿ ಜನಪ್ರಿಯತೆಯನ್ನು ಗಳಿಸಿದೆ.

ಇದೀಗ Ashok Leyland ನ ಅಂಗ ಸಂಸ್ಥೆ ಆಗಿರುವ Switch Mobility ಎರಡು ಎಲೆಕ್ಟ್ರಿಕ್ ಪಿಕಪ್ ಟ್ರಕ್ ಅನ್ನು ಬಿಡುಗಡೆಗೊಳಿಸಿ ದುಡಿಯುವ ವರ್ಗಕ್ಕೆ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ.

Switch Mobility leV3 and leV4 Electric Pickup
Image Credit: Pakkikhabar

Switch Mobility Company
ಇದೀಗ Switch Mobility ಕಂಪನಿಯು ಹೊಸ ಪ್ಲಾಟ್ ಫಾರ್ಮ್ ಆಧಾರಿತ leV3 ಹಾಗೂ leV4 ಹೆಸರಿನ ಎಲೆಕ್ಟ್ರಿಕ್ ಲಘು ವಾಣಿಜ್ಯ ವಾಹನಗಳನ್ನು ಪರಿಚಯಿಸಿದೆ. ಮುಂದಿನ 5 ವರ್ಷದಲ್ಲಿ ಅನೇಕ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳನ್ನು ಅಭಿವೃದ್ಧಿ ಪಡಿಸುದಾಗಿ ಕಂಪನಿ ಹೇಳಿಕೊಂಡಿದೆ. ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ Nitin Gadkari ಅವರು leV3 ಹಾಗೂ leV4 ಎಲೆಕ್ಟ್ರಿಕ್ ಪಿಕಪ್ ಗಳನ್ನೂ ಅನಾವರಣಗೊಳಿಸಿದ್ದಾರೆ.

The leV3 Electric Pickup offers a mileage of 120 kilometers
Image Credit: Economictimes

leV3 Electric Pickup
ಯಾವುದೇ ಸಾಮಾನ್ಯ ಟ್ರಕ್ ಗೂ ಕಡಿಮೆ ಇಲ್ಲದ್ದಂತೆ leV3 Electric Pickup ಭಾರವನ್ನು ಎಳೆಯುವ ಸಾಮರ್ಥ್ಯವನ್ನು ಪಡೆದಿದೆ. leV3 Electric Pickup 1200 ಕೆಜಿ ತೂಕವನ್ನು ಸರಾಗವಾಗಿ ಸಾಗಿಸುತ್ತದೆ. leV3 ನಲ್ಲಿ 25 .6 kWh LFP ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ.

40 kW ಗರಿಷ್ಠ ಪವರ್ ಮತ್ತು 190 Nm ಪೀಕ್ ಟಾರ್ಕ್ ಉತ್ಪದಿಸುವ ಸಾಮರ್ಥ್ಯವನ್ನು ಹೊಂದಿದೆ. ಮನೆಯ ವಿದ್ಯುತ್ ಬಳಕೆಯ 3 .3 kW ಎಸಿ ಚಾರ್ಜಿಂಗ್ ಆಯ್ಕೆಯಲ್ಲಿ 6 ಗಂಟೆ ತೆಗೆದುಕೊಳ್ಳುತ್ತದೆ. ಆದರೆ ಡಿಸಿ ಫಾಸ್ಟ್ ಚಾರ್ಜರ್ ನಲ್ಲಿ ಕೇವಲ 60 ನಿಮಿಷದಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ. leV3 Electric Pickup ಸಂಪೂರ್ಣ ಚಾರ್ಜ್ ನಲ್ಲಿ 120 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.

Join Nadunudi News WhatsApp Group

The leV4 Electric Pickup offers a mileage of 120 kilometers on a full charge.
Image Credit: Economictimes

leV4 Electric Pickup
leV4 ಎಲೆಕ್ಟ್ರಿಕ್ ಪಿಕಪ್ leV3 ಎಲೆಕ್ಟ್ರಿಕ್ ಪಿಕಪ್ ಗಿಂತ ಹೆಚ್ಚು ಭಾರವನ್ನು ಎಳೆಯುವ ಸಾಮರ್ಥ್ಯವನ್ನು ಹೊಂದಿದೆ. leV4 Electric Pickup 1700 ಕೆಜಿ ತೂಕವನ್ನು ಸಾಗಿಸುವ ಸಾಮರ್ಥ್ಯವನ್ನು ಪಡೆದಿದೆ. leV4 Electric Pickup ನಲ್ಲಿ 32 .2 kWh LFP ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಇದರಲ್ಲಿ ಬಳಕೆ ಮಾಡಿರುವ ಮೋಟಾರ್ 60 kW ಗರಿಷ್ಠ ಪವರ್ ಅನ್ನು ಹಾಗೂ 230 Nm ಪೀಕ್ ಟಾರ್ಕ್ ಉತ್ಪದಿಸುತ್ತದೆ. ಮನೆಯ ವಿದ್ಯುತ್ ಬಳಕೆಯ 3 .3 kW ಎಸಿ ಚಾರ್ಜಿಂಗ್ ಆಯ್ಕೆಯಲ್ಲಿ8 ಗಂಟೆ ತೆಗೆದುಕೊಳ್ಳುತ್ತದೆ.

leV4 Electric Pickup ಸಂಪೂರ್ಣ ಚಾರ್ಜ್ ನಲ್ಲಿ 120 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.leV3 ಹಾಗೂ leV4 Electric Pickup ಗಳ ಬೆಲೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಹಾಗೆ leV3 ಹಾಗೂ leV4 Electric Pickup ಗಳನ್ನೂ 2024 ರ ಜನವರಿಯಲ್ಲಿ ವಿತರಣೆ ಮಾಡಲಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

Join Nadunudi News WhatsApp Group