T20 2024: T20 ವಿಶ್ವಕಪ್ ನಿಂದ ಹೊರಬಿದ್ದ ಇನ್ನೊಬ್ಬ ಸ್ಟಾರ್ ಸ್ಪಿನ್ನರ್, ಬೇಸರ ಹೊರಹಾಕಿದ ಫ್ಯಾನ್ಸ್.

T20 ವಿಶ್ವಕಪ್ ನಿಂದ ಹೊರಬಿದ್ದ ಇನ್ನೊಬ್ಬ ಸ್ಟಾರ್ ಸ್ಪಿನ್ನರ್

T20 2024 Team India Players: ಈ ಬಾರಿ IPL 2024 ಮುಗಿದ ಬೆನ್ನಲ್ಲೇ ಜೂನ್ ನಿಂದ ICC World Cup 2024 ಆರಂಭವಾಗುತ್ತದೆ. T20 ಗಾಗಿ ಅನೇಕ ಜನರು ಕಾಯುತ್ತಿದ್ದಾರೆ ಎನ್ನಬಹುದು. ಇನ್ನು T20 ಪಂದ್ಯಕ್ಕಾಗಿ ಭಾರತ ತಂಡಕ್ಕೆ ಆಟಗಾರರ ಆಯ್ಕೆ ಕೂಡ ನಡೆಯುತ್ತಿದೆ.

Team India ದಲ್ಲಿ ಆಡುವ ಆಟಗಾರರನ್ನು ಆಯ್ಕೆ ಮಾಡಲು IPL ನಲ್ಲಿ ಯಾರು ಉತ್ತಮವಾಗಿ ಆಟ ಆಡುತ್ತಾರೆ ಎಂದು ನೋಡಲು ಪ್ರತಿ ಆಟಗಾರರ ಮೇಲೆಯೂ ICC ಕಣ್ಣಿಟ್ಟಿದೆ. ಐಸಿಸಿ ಮಾರ್ಗಸೂಚಿಗಳ ಪ್ರಕಾರ, ಮೇ 1, 2024 ರೊಳಗೆ ತಂಡವನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ.

ಭಾರತ ತಂಡಕ್ಕೆ ಯಾವ ಆಟಗಾರರನ್ನು ಸೇರಿಸಿಕೊಳ್ಳುತ್ತಾರೆ ಎನ್ನುವುದು ಸದ್ಯದ ಚರ್ಚೆಯಾಗುತ್ತಿದೆ. ಭಾರತ ತಂಡದಲ್ಲಿ ಯಾವ ಲೆಜೆಂಡರಿ ಆಟಗಾರರನ್ನು ಸೇರಿಸಿಕೊಳ್ಳಲಾಗುವುದು ಎಂಬುದರ ಕುರಿತು ಪ್ರತಿಯೊಬ್ಬ ಕ್ರಿಕೆಟ್ ತಜ್ಞರು ತಮ್ಮ ಅಭಿಪ್ರಾಯವನ್ನು ನೀಡುತ್ತಿದ್ದಾರೆ. ಇನ್ನು T20 ವಿಶ್ವಕಪ್ ನಿಂದ ಈ ಸ್ಟಾರ್ ಆಟಗಾರ ಹೊರಬೀಳಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕೇಳಿ ಬರುತ್ತಿದೆ.

T20 2024 Team India Players
Image Credit: y20india

T20 ವಿಶ್ವಕಪ್ ನಿಂದ ಹೊರಬಿದ್ದ ಇನ್ನೊಬ್ಬ ಸ್ಟಾರ್ ಸ್ಪಿನ್ನರ್
ಪ್ರಸಕ್ತ ಐಪಿಎಲ್‌ ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಪರ್ಪಲ್ ಕ್ಯಾಪ್ ರೇಸ್‌ ನಲ್ಲಿದ್ದರೂ ಸ್ಪಿನ್ನರ್ ಯಜುವೇಂದ್ರ ಚಹಾಲ್ ಮುಂಬರುವ ಟಿ20 ವಿಶ್ವಕಪ್ ತಂಡದಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಕುಲದೀಪ್ ಯಾದವ್ ಮೊದಲ ಆಯ್ಕೆಯ ಸ್ಪಿನ್ನರ್ ಆಗಿದ್ದರೆ, ರವೀಂದ್ರ ಜಡೇಜಾ ಜೊತೆಗೆ ಅಕ್ಷರ್ ಪಟೇಲ್ ಆಲ್ ರೌಂಡ್ ಸಾಮರ್ಥ್ಯ ಹೊಂದಿರುವ ಇತರ ಸ್ಪಿನ್ನರ್ ಆಗಿದ್ದಾರೆ.

ರವಿ ಬಿಷ್ಣೋಯ್ ಕೂಡ ಕೈ ತಪ್ಪಲಿದ್ದಾರೆ ಎನ್ನಲಾಗಿದೆ. ಸಂದೀಪ್ ಶರ್ಮಾ 4ನೇ ವೇಗದ ಸ್ಥಾನಕ್ಕೆ ಅಚ್ಚರಿ ಮೂಡಿಸುವ ರೇಸ್‌ ನಲ್ಲಿದ್ದಾರೆ. ಸಂದೀಪ್ ಶರ್ಮಾ ತಮ್ಮ ನಿಧಾನ ಮತ್ತು ಮಧ್ಯಮ ವೇಗದ ಎಸೆತಗಳಿಂದ ಐಪಿಎಲ್‌ ನಲ್ಲಿ ಮಿಂಚುತ್ತಿದ್ದಾರೆ. ಆದರೆ ಹಾರ್ದಿಕ್ ಪಾಂಡ್ಯ ತಂಡದಲ್ಲಿದ್ದರೆ, 4ನೇ ವೇಗಿಗಳ ಅಗತ್ಯತೆಯ ಬಗ್ಗೆ ಟೀಮ್ ಮ್ಯಾನೇಜ್ ಮೆಂಟ್ ಕೂಡ ಗೊಂದಲದಲ್ಲಿದೆ. ಕೀಪರ್ ಸ್ಥಾನದ ರೇಸ್ ನಲ್ಲಿ ಕೆಎಲ್ ರಾಹುಲ್ ಅವರನ್ನು ಸಂಜು ಸ್ಯಾಮ್ಸನ್ ಸೋಲಿಸಲಿದ್ದಾರೆ ಎನ್ನಲಾಗಿದೆ. ಶಿವಂ ದುಬೆ ಮತ್ತು ರಿಂಕು ಸಿಂಗ್ ಅವರಲ್ಲಿ ಒಬ್ಬರು ಅಥವಾ ಇಬ್ಬರೂ ಆಯ್ಕೆಯಾಗುವುದು ಖಚಿತವಾಗಿದೆ.

Join Nadunudi News WhatsApp Group

T20 2024 Team India Latest News
Image Credit: Hindustantimes

T20 2024 ರಲ್ಲಿ ಆಡಲಿದ್ದಾರೆ ಈ ಆಟಗಾರರು
ರೋಹಿತ್ ಶರ್ಮಾ (ನಾಯಕ)
ಯಸ್ಸವಿ ಜೈಸ್ವಾಲ್
ವಿರಾಟ್ ಕೊಹ್ಲಿ
ಸೂರ್ಯಕುಮಾರ್
ರಿಷಬ್ ಪಂತ್ (ವಿಸಿ)
ಸಂಜು ಸ್ಯಾಮ್ಸನ್ (ವಿಸಿ)
ಹಾರ್ದಿಕ್ ಪಾಂಡ್ಯ
ರವೀಂದ್ರ ಜಡೇಜಾ
ಅಕ್ಷರ್ ಪಟೇಲ್
ಶಿವಂ ದುಬೆ
ರಿಂಕು ಸಿಂಗ್
ಕುಲ್ದೀಪ್ ಯಾದವ್
ಜಸ್ಪ್ರೀತ್ ಬುಮ್ರಾ
ಅರ್ಶ್ದೀಪ್ ಸಿಂಗ್
ಅವೇಶ್ ಖಾನ್/ಮೊಹಮ್ಮದ್ ಸಿರಾಜ್

T20 World Cup 2024
Image Credit: News 24

Join Nadunudi News WhatsApp Group