Ads By Google

T20 World Cup: 2024 ರ T20 ವಿಶ್ವಕಪ್ ನ ಭಾರತದ ತಂಡ ಪ್ರಕಟ, ಇಲ್ಲಿದೆ ನೋಡಿ ಭಾರತದ ಬಲಿಷ್ಠ ಆಟಗಾರರ ಪಟ್ಟಿ

BCCI announce world cup team

Image Credit: Original Source

Ads By Google

T20 World Cup 2024 Team India Player List: 2024ರ ಟಿ -20 ವಿಶ್ವಕಪ್‌ಗೆ ಭಾರತ ತಂಡದಿಂದ ಯಾರೆಲ್ಲಾ ಆಯ್ಕೆ ಆಗಿದ್ದಾರೆ ಹಾಗು ಅವುಗಳ ಸಂಪೂರ್ಣ ಪಟ್ಟಿ ಸಿದ್ದವಾಗಿದ್ದು, ಈ ವರ್ಷ ಜೂನ್‌ನಲ್ಲಿ ಟಿ-20 ವಿಶ್ವಕಪ್‌ ನಡೆಯಲಿದ್ದು, ಶಿವಂ ದುಬೆ ಮತ್ತು ರಿಂಕು ಸಿಂಗ್ ಅವರಂತಹ ಆಟಗಾರರು ಅಫ್ಘಾನಿಸ್ತಾನ ವಿರುದ್ಧದ ಮೂರು ಟಿ 20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಟಿ -20 ವಿಶ್ವಕಪ್‌ಗೆ ತಂಡದಲ್ಲಿ ಸ್ಥಾನ ಪಡೆಯುವ ಭರವಸೆಯನ್ನು ಮೂಡಿಸಿದ್ದಾರೆ. ಹಾಗೆಯೆ ಟೀಮ್ ಇಂಡಿಯಾ ಆಟಗಾರರ ಪಟ್ಟಿಯ ಕುರಿತು ಮಾಹಿತಿ ಹೀಗಿದೆ. 

Image Credit: ABP News

ಅನುಭವಿ ಅಥವಾ ಯುವ ಆಟಗಾರರಲ್ಲಿ ಆಯ್ಕೆ ಪ್ರಕ್ರಿಯೆ

ಜೂನ್‌ನಲ್ಲಿ ನಡೆಯುವ ಟಿ -20 ವಿಶ್ವಕಪ್‌ ನ ಆಟಗಾರರ ಪಟ್ಟಿ ತಯಾರಿಯಲ್ಲಿ ಟೀಂ ಇಂಡಿಯಾದ ಆಯ್ಕೆಗಾರರು ಯುವ ಆಟಗಾರರ ಮೇಲೆ ಕೇಂದ್ರೀಕರಿಸುತ್ತಾರೆಯೇ ಅಥವಾ ಅನುಭವಿ ಆಟಗಾರರನ್ನು ಆಯ್ಕೆ ಮಾಡುತ್ತಾರೆಯೇ ಎಂದು ನೋಡಬೇಕಾಗಿದೆ. ಅಫ್ಘಾನಿಸ್ತಾನ ವಿರುದ್ಧದ ಸರಣಿಯ ಬಳಿಕ ಮಾತನಾಡಿದ ನಾಯಕ ರೋಹಿತ್ ಶರ್ಮಾ, “ಟಿ20 ವಿಶ್ವಕಪ್ ತಂಡವನ್ನು ಇನ್ನೂ ಆಯ್ಕೆ ಮಾಡಿಲ್ಲ. ಆದರೆ, ತಂಡಕ್ಕೆ ಸೇರ್ಪಡೆಗೊಳ್ಳುವ 8 ರಿಂದ 10 ಆಟಗಾರರನ್ನು ಈಗಾಗಲೇ ನಿರ್ಧರಿಸಲಾಗಿದೆ” ಎಂದು ತಮ್ಮ ಅನಿಸಿಕೆ ಹಂಚಿಕೊಂಡರು.

Image Credit: Wisden

ಆಟಗಾರರ ಆಯ್ಕೆಯ ಬಗ್ಗೆ ರೋಹಿತ್ ಶರ್ಮ ಹೇಳಿಕೆ

ಟಿ20 ವಿಶ್ವಕಪ್‌’ಗಾಗಿ ನಾವು 25 ರಿಂದ 30 ಆಟಗಾರರ ಗುಂಪನ್ನು ಹೊಂದಿದ್ದೇವೆ. ಅವರಿಂದ ನಾವು ಏನನ್ನು ನಿರೀಕ್ಷಿಸುತ್ತೇವೆ ಎಂಬುದು ಅವರೆಲ್ಲರಿಗೂ ತಿಳಿದಿದೆ. ನಾವು ಇನ್ನೂ ತಂಡವನ್ನು ನಿರ್ಧರಿಸಿಲ್ಲ ಎಂದಿದ್ದಾರೆ. ಟಿ20 ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಯುವ ಆಟಗಾರರು ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯದೇ ಇರಬಹುದು. ನಾವು ಏಕದಿನ ವಿಶ್ವಕಪ್‌’ನಲ್ಲಿ ಆಡಿದಂತೆ, ಟಿ20ಯಲ್ಲೂ ಅನೇಕ ಆಟಗಾರರನ್ನು ಪ್ರಯತ್ನಿಸುತ್ತಿದ್ದೇವೆ ಎಂದು ರೋಹಿತ್ ಶರ್ಮ ಹೇಳಿಕೆ ನೀಡಿದರು.

Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in