Ads By Google

T20 2024: 5 ವರ್ಷ ನಿಷೇಧ ಮತ್ತು 6 ತಿಂಗಳು ಜೈಲು, ಮ್ಯಾಚ್ ಫಿಕ್ಸಿಂಗ್ ಮಾಡಿ ಕ್ರಿಕೆಟ್ ನಿಂದ ಹೊರಬಿದ್ದ ಸ್ಟಾರ್ ಆಟಗಾರ.

Mohammad Amir T20 World Cup 2024

Image Credit: Original Source

Ads By Google

T20 World Cup 2024: ಈ ಬಾರಿ IPL 2024 ಮುಗಿದ ಬೆನ್ನಲ್ಲೇ ಜೂನ್ ನಿಂದ ICC World Cup 2024 ಆರಂಭವಾಗುತ್ತದೆ. T20 ಗಾಗಿ ಅನೇಕ ಜನರು ಕಾಯುತ್ತಿದ್ದಾರೆ ಎನ್ನಬಹುದು. ಇನ್ನು T20 ಪಂದ್ಯಕ್ಕಾಗಿ ಭಾರತ ತಂಡಕ್ಕೆ ಆಟಗಾರರ ಆಯ್ಕೆ ಕೂಡ ನಡೆದಿದೆ. ICC Team India ದಲ್ಲಿ ಆಡುವ ಆಟಗಾರರನ್ನು ಈಗಾಗಲೇ ಆಯ್ಕೆ ಮಾಡಿದೆ.

USA ಮತ್ತು ವೆಸ್ಟ್ ಇಂಡೀಸ್ ಸಹ-ಆತಿಥ್ಯ ವಹಿಸುವ ICC T20 ಪಂದ್ಯಾವಳಿಯು ಜೂನ್ 2 ರಂದು ಪ್ರಾರಂಭವಾಗಲಿದ್ದು, ರೋಹಿತ್ ಶರ್ಮಾ ನೇತೃತ್ವದ ಭಾರತವು ಜೂನ್ 5 ರಂದು ತನ್ನ ಮೊದಲ ಪಂದ್ಯವನ್ನು ಆಡಲಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು, ಹಾರ್ದಿಕ್ ಪಾಂಡ್ಯ ಉಪನಾಯಕರಾಗಿದ್ದಾರೇ. ಇನ್ನು ಈ ಬಾರಿ T20 ರಲ್ಲಿ ಪಾಕಿಸ್ತಾನ ತಂಡಕ್ಕೆ ದೊಡ್ಡ ಹೊಡೆತ ಬೀಳಲಿದೆ. ಕಾರಣ ಈ ಸ್ಟಾರ್ ಆಟಗಾರ ಈ ಬಾರಿ ತಂಡದಿಂದ ಹೊರಗುಳಿಯಲಿದ್ದಾರೆ.

Image Credit: The Hindu

ಮ್ಯಾಚ್ ಫಿಕ್ಸಿಂಗ್ ಮಾಡಿ ಕ್ರಿಕೆಟ್ ನಿಂದ ಹೊರಬಿದ್ದ ಸ್ಟಾರ್ ಆಟಗಾರ
ಅಮೀರ್ 2020 ರಲ್ಲಿ ನಿವೃತ್ತಿ ಘೋಷಿಸಿದ್ದರು, ಆದರೆ ಟಿ 20 ವಿಶ್ವಕಪ್‌ಗೆ ಮೊದಲು ಯು-ಟರ್ನ್ ಮಾಡಿ ತಂಡಕ್ಕೆ ಮರಳಿದರು. ಇದರ ಹೊರತಾಗಿಯೂ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಜೈಲು ವಾಸ ಅನುಭವಿಸಿರುವ ಅಮೀರ್ ಟಿ20 ವಿಶ್ವಕಪ್ ನಿಂದ ಹೊರಗುಳಿಯುವ ಸಾಧ್ಯತೆ ಇದೆ. ಟಿ20 ವಿಶ್ವಕಪ್ ದೃಷ್ಟಿಯಿಂದ ಪಾಕಿಸ್ತಾನ ತಂಡ ಐರ್ಲೆಂಡ್ ವಿರುದ್ಧ 3 ಪಂದ್ಯಗಳ ಟಿ20 ಸರಣಿಗಾಗಿ ಐರ್ಲೆಂಡ್ ಪ್ರವಾಸ ಕೈಗೊಂಡಿದೆ.

ಈ ಸರಣಿಯು ಮೇ 10 ರಿಂದ ಪ್ರಾರಂಭವಾಗಲಿದೆ. ಆದರೆ ಮೊಹಮ್ಮದ್ ಅಮೀರ್ ಐರ್ಲೆಂಡ್‌ ಗೆ ಭೇಟಿ ನೀಡಲು ವೀಸಾ ಪಡೆದಿಲ್ಲ. ಮೊಹಮ್ಮದ್ ಅಮೀರ್ ಅವರು 2010 ರಿಂದ 2015 ರ ವರೆಗೆ ಇಂಗ್ಲೆಂಡ್ ಲಾರ್ಡ್ಸ್ ಟೆಸ್ಟ್ ಪ್ರವಾಸದ ವೇಳೆ ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ನಿಷೇಧಕ್ಕೊಳಗಾಗಿದ್ದರು. ಅಷ್ಟೇ ಅಲ್ಲ ಸುಮಾರು 6 ತಿಂಗಳ ಕಾಲ ಜೈಲಿಗೆ ಹೋಗಬೇಕಾಯಿತು. ಈ ಕಾರಣದಿಂದ ಅವರಿಗೆ ವೀಸಾ ಸಿಗುವುದು ಕಷ್ಟವಾಗುತ್ತಿದೆ.

Image Credit: Freepressjournal

5 ವರ್ಷ ನಿಷೇಧ ಮತ್ತು 6 ತಿಂಗಳು ಜೈಲು
ಇನ್ನು 1 ಅಥವಾ 2 ದಿನಗಳಲ್ಲಿ ಅಮೀರ್ ಸಮಸ್ಯೆ ಬಗೆಹರಿಯಲಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ. ಟಿ20 ವಿಶ್ವಕಪ್ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿದೆ. ಹೀಗಿರುವಾಗ ಅಲ್ಲಿಯೂ ಅಮೀರ್ ಗೆ ವೀಸಾ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಮೊಹಮ್ಮದ್ ಅಮೀರ್ ಅವರ ವೀಸಾ ಸಮಸ್ಯೆ ಬಗೆಹರಿಯದಿದ್ದರೆ ಅವರನ್ನು ಟಿ20 ವಿಶ್ವಕಪ್ ತಂಡದಿಂದ ಕೈಬಿಡಬೇಕಾಗುತ್ತದೆ. ‘ಮೆಗಾ ಈವೆಂಟ್’ಗಾಗಿ ಪಾಕಿಸ್ತಾನ ಇನ್ನೂ 15 ಸದಸ್ಯರ ತಂಡವನ್ನು ಪ್ರಕಟಿಸಿಲ್ಲ. ಈಗ ಅಮೀರ್ ಟಿ20 ವಿಶ್ವಕಪ್‌ ಗಾಗಿ ಪಾಕಿಸ್ತಾನ ತಂಡವನ್ನು ಸೇರಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

Image Credit: Cricbuzz
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in