T20 World Cup Retirement: ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿ, ನಿವೃತ್ತಿ ಘೋಷಿಸಿದ 5 ಸ್ಟಾರ್ ಆಟಗಾರರು

ಟಿ20 ಅಂತರಾಷ್ಟ್ರೀಯ ವೃತ್ತಿಜೀವನವನ್ನು ಅಂತ್ಯಗೊಳಿಸಿದ ಐವರು ಆಟಗಾರರು ಯಾರು...?

T20 World Cup Retirement Update: ವಿಶ್ವಕಪ್ T20 ಪಂದ್ಯದಲ್ಲಿ ಈ ಬಾರಿ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಡೀ ಭಾರತ ಟೀಮ್ ಇಂಡಿಯಾದ ಗೆಲುವಿನ ಸಂಭ್ರಮದಲ್ಲಿದ್ದರೆ ಎನ್ನಬಹುದು. ಕೊನೆಯ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಇಂಡಿಯಾ ಭರ್ಜರಿ ಜಯ ಸಾಧಿಸಿದೆ.

ಇನ್ನು ಇಂಡಿಯಾ T20 ವಿಶ್ವಕಪ್ ಪಡೆದ ಖುಷಿಯ ಬೆನ್ನಲ್ಲೇ ಬೇಸರದ ಸುದ್ದಿ ಕೂಡ ಹೊರಬಿದ್ದಿದೆ. ಹೌದು, ಈ ಬಾರಿ T20 ವಿಶ್ವಕಪ್ ಪಂದ್ಯ ಕೆಲ ಸ್ಟಾರ್ ಆಟಗಾರರಿಗೆ ಕೊನೆಯ ಪಂದ್ಯವಾಗಿದೆ.

T20 world cup 2024 ರ ಗೆಲುವಿನ ಬಳಿಕ ಈ ಎಲ್ಲ ಸ್ಟಾರ್ ಆಟಗಾರರು ನಿವೃತ್ತಿ ಘೋಷಿಸಿದ್ದಾರೆ. T20 ವಿಶ್ವಕಪ್ ಮುಗಿದ ನಂತರ, ಐದು ಆಟಗಾರರು T20 ಅಂತರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದರು. ಈ ಐವರಲ್ಲಿ ಮೂವರು ಭಾರತೀಯರು. ಈ ವಿಶ್ವಕಪ್‌ ನೊಂದಿಗೆ ಟಿ20 ಅಂತರಾಷ್ಟ್ರೀಯ ವೃತ್ತಿಜೀವನವನ್ನು ಅಂತ್ಯಗೊಳಿಸಿದ ಐವರು ಆಟಗಾರರು ಯಾರು…? ಎನ್ನುವ ಬಗ್ಗೆ ನಾವೀಗ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

Virat Kohli Retirement
Image Credit: OneCricket

T20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಐವರು ಸ್ಟಾರ್ ಆಟಗಾರರು…!
1. ವಿರಾಟ್ ಕೊಹ್ಲಿ
ಭಾರತ ಟಿ20 ವಿಶ್ವಕಪ್ ಗೆದ್ದ ಕಾರಣ ವಿರಾಟ್ ಕೊಹ್ಲಿ ಟಿ20 ಅಂತರಾಷ್ಟ್ರೀಯ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಟೀಂ ಇಂಡಿಯಾ ಪರ 125 ಟಿ20 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 117 ಇನ್ನಿಂಗ್ಸ್ ಗಳಿಂದ ಒಟ್ಟು 4188 ರನ್ ಗಳಿಸಿದ್ದಾರೆ. ಈ ನಡುವೆ 38 ಅರ್ಧಶತಕ ಹಾಗೂ 1 ಬೃಹತ್ ಶತಕ ಬಾರಿಸಿದ್ದಾರೆ.

Rohit Sharma Retirement
Image Credit: OneCricket

2. ರೋಹಿತ್ ಶರ್ಮಾ
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಟಿ20 ಅಂತರಾಷ್ಟ್ರೀಯ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ. ಭಾರತದ ಪರ 159 ಟಿ20 ಪಂದ್ಯಗಳನ್ನಾಡಿರುವ ಹಿಟ್‌ಮ್ಯಾನ್ 151 ಇನ್ನಿಂಗ್ಸ್‌ಗಳಿಂದ ಒಟ್ಟು 4231 ರನ್ ಕಲೆಹಾಕಿದ್ದಾರೆ. ಈ ಅವಧಿಯಲ್ಲಿ ಅವರು 5 ಶತಕ ಮತ್ತು 32 ಅರ್ಧಶತಕಗಳನ್ನು ಗಳಿಸಿದ್ದಾರೆ. ಅಲ್ಲದೆ, T20 ವಿಶ್ವಕಪ್ ಮುಗಿದ ನಂತರ T20I ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

Join Nadunudi News WhatsApp Group

Ravindra Jadeja Retirement
Image Credit: OneCricket

3. ರವೀಂದ್ರ ಜಡೇಜಾ
ಟೀಂ ಇಂಡಿಯಾ ಆಲ್‌ ರೌಂಡರ್ ರವೀಂದ್ರ ಜಡೇಜಾ ಕೂಡ ಟಿ20 ಅಂತರಾಷ್ಟ್ರೀಯ ವೃತ್ತಿಜೀವನವನ್ನು ಅಂತ್ಯಗೊಳಿಸಿದ್ದಾರೆ. ಭಾರತ ಪರ 74 ಟಿ20 ಪಂದ್ಯಗಳನ್ನಾಡಿರುವ ಜಡೇಜಾ 41 ಇನ್ನಿಂಗ್ಸ್‌ಗಳಿಂದ 515 ರನ್ ಕಲೆಹಾಕಿದ್ದಾರೆ. ಅಲ್ಲದೆ, 54 ವಿಕೆಟ್ ಪಡೆದು ಮಿಂಚಿದ್ದರು.

David Warner Retirement
Image Credit: OneCricket

4. ಡೇವಿಡ್ ವಾರ್ನರ್
ಬಾರಿಯ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡ ಸೂಪರ್-8 ಹಂತದಿಂದ ಹೊರಬಂದ ನಂತರ, ವಾರ್ನರ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಆಸ್ಟ್ರೇಲಿಯಾ ಪರ 110 ಟಿ20 ಪಂದ್ಯಗಳನ್ನಾಡಿರುವ ಡೇವಿಡ್ ವಾರ್ನರ್ ಒಟ್ಟು 3277 ರನ್ ಕಲೆಹಾಕಿದ್ದಾರೆ. ಈ ಅವಧಿಯಲ್ಲಿ ಅವರು ಒಂದು ಶತಕ ಮತ್ತು 28 ಅರ್ಧಶತಕಗಳನ್ನು ಗಳಿಸಿದ್ದಾರೆ.

5. ಟ್ರೆಂಟ್ ಬೌಲ್ಟ್
ನ್ಯೂಜಿಲೆಂಡ್‌ನ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಕೂಡ ತಮ್ಮ ಟಿ20 ಅಂತರಾಷ್ಟ್ರೀಯ ವೃತ್ತಿಜೀವನವನ್ನು ಅಂತ್ಯಗೊಳಿಸಿದ್ದಾರೆ. ಕಿವೀಸ್ ಪರ 61 ಟಿ20 ಪಂದ್ಯಗಳನ್ನಾಡಿರುವ ಬೌಲ್ಟ್ ಒಟ್ಟು 83 ವಿಕೆಟ್ ಪಡೆದಿದ್ದಾರೆ. ಅಲ್ಲದೆ, ತಮ್ಮ 34ನೇ ವಯಸ್ಸಿನಲ್ಲಿ ಟಿ20 ವೃತ್ತಿಜೀವನಕ್ಕೆ ವಿದಾಯ ಹೇಳಿದರು.

Trent Boult Retirement
Image Credit: OneCricket

Join Nadunudi News WhatsApp Group