T20 World Cup: 20 ಕೋಟಿ ಬಹುಮಾನದಲ್ಲಿ ಯಾವ ಆಟಗಾರನಿಗೆ ಎಷ್ಟು ಹಣ ಸಿಕ್ಕಿದೆ…? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

20 ಕೋಟಿ ಬಹುಮಾನದಲ್ಲಿ ಯಾವ ಆಟಗಾರನಿಗೆ ಎಷ್ಟು ಹಣ ಸಿಕ್ಕಿದೆ...?

T20 World Cup Wining Prize Money Details: ಜೂನ್ 29 ಶನಿವಾರ ಇಂಡಿಯಾ ಮತ್ತು ಸೌತ್ ಆಫ್ರಿಕಾ ರಣರೋಚಕ ಪಂದ್ಯ ನಡೆದಿತ್ತು. ತಂಡದ ಎಲ್ಲ ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ ಹಲವು ವರ್ಷದ ಬಳಿಕ T20 World Cup ನ ಗೆಲುವಿಗೆ ಕಾರಣರಾಗಿದ್ದಾರೆ. ಟೀಮ್ ಇಂಡಿಯಾದ ಗೆಲುವು ಇಡೀ ಭಾರತೀಯರಿಗೆ ಎಲ್ಲಿಲ್ಲದ ಸಂತೋಷವನ್ನು ನೀಡಿದೆ ಎನ್ನಬಹುದು.

ಟೀಮ್ ಇಂಡಿಯಾ ಕಪ್ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತು ಎನ್ನುವಷ್ಟರಲ್ಲಿ ಕೊನೆಯ ಕ್ಷಣದಲ್ಲಿ ಟೀಮ್ ಇಂಡಿಯಾ ಗೆಲುವನ್ನು ಸಾಧಿಸಿತ್ತು. ಇನ್ನು ಕಪ್ ಗೆದ್ದ ಇಂಡಿಯಾಗೆ ಭರ್ಜರಿ ಬಹುಮಾನ ಮೊತ್ತ ನೀಡಲಾಗಿದೆ. ನಾವೀಗ ಈ ಲೇಖನದಲ್ಲಿ ಈ ಬಹುಮಾನ ಮೊತ್ತದ ಬಗ್ಗೆ ಮಾಹಿತಿ ನೀಡಲಿದ್ದೇವೆ.

T20 World Cup Winning Prize Money Details
Image Credit: Bollywoodshaadis

T20 World Cup ನಲ್ಲಿ ಕಪ್ ತನ್ನದಾಗಿಸಿಕೊಂಡ ಇಂಡಿಯಾ
ಟೀಮ್ ಇಂಡಿಯಾದ ಎಲ್ಲ ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ 14 ವರ್ಷದ ಬಳಿಕ ಗೆಲುವಿಗೆ ಕಾರಣರಾಗಿದ್ದಾರೆ. ಇನ್ನು T20 World Cup ಪಂದ್ಯದಲ್ಲಿ ಗೆದ್ದ ಇಂಡಿಯಾ ತಂಡಕ್ಕೆ ಒಟ್ಟಾರೆ 20 ಕೋಟಿ 40 ಲಕ್ಷಕ್ಕೂ ಹೆಚ್ಚು ಬಹುಮಾನದ ಹಣ ಸಿಕ್ಕಿದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.

ಅಷ್ಟಕ್ಕೂ, ಬಹುಮಾನದ ಮೊತ್ತ ಆಟಗಾರರಿಗೆ ಯಾವ ಹಂಚಿಕೆಯಾಗುತ್ತದೆ ಎನ್ನುವ ಬಗ್ಗೆ ನಿಮಗೆ ಗೊತ್ತೇ..? T20 ವಿಜೇತ ತಂಡ ಇಂಡಿಯಾಗೆ ಎಷ್ಟು ಬಹುಮಾನ ಮೊತ್ತ ಲಭಿಸಿದೆ…? ಹಾಗೆಯೆ ಬಹುಮಾನದಲ್ಲಿ ಯಾವ ಆಟಗಾರನಿಗೆ ಎಷ್ಟು ಹಣ ಸಿಕ್ಕಿದೆ…? ಎನ್ನುವ ಬಗ್ಗೆ ಡಿಟೈಲ್ಸ್ ಇಲ್ಲಿದೆ.

T20 World Cup Winning Prize Money
Image Credit: newsonair

20 ಕೋಟಿ ಬಹುಮಾನದಲ್ಲಿ ಯಾವ ಆಟಗಾರನಿಗೆ ಎಷ್ಟು ಹಣ ಸಿಕ್ಕಿದೆ…?
2024 ರ ಟಿ 20 ವಿಶ್ವಕಪ್ ಗೆದ್ದ ನಂತರ ಭಾರತವು 20 ಕೋಟಿ 42 ಲಕ್ಷ ರೂಪಾಯಿಗಳನ್ನು ಬಹುಮಾನವಾಗಿ ಪಡೆದುಕೊಂಡಿದೆ. ಅದೇ ರೀತಿ ಫೈನಲ್ ಪಂದ್ಯದಲ್ಲಿ ಸೋತ ದಕ್ಷಿಣ ಆಫ್ರಿಕಾ 10 ಕೋಟಿ 68 ಲಕ್ಷ ರೂ. ಹಣ ಪಡೆದಿದೆ. ಭಾರತ ತಂಡ ಈಗ ಪಡೆದಿರುವ 20 ಕೋಟಿ 42 ಲಕ್ಷ ರೂಪಾಯಿಗಳ ಜೊತೆಗೆ ಪ್ರತಿಯೊಬ್ಬ ಆಟಗಾರ, ಕೋಚ್, ಸಹಾಯಕ ಸಿಬ್ಬಂದಿ ಮತ್ತು ತಂಡದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಈ ಮೊತ್ತ ಸಿಗಲಿದೆ.

Join Nadunudi News WhatsApp Group

ಪಂದ್ಯದಲ್ಲಿ ಗೆದ್ದ ಬಹುಮಾನ ಮೊತ್ತದಲ್ಲಿ ಬಹುಪಾಲು ಮುಖ್ಯ ಆಟಗಾರರ ಪಾಲಾಗುತ್ತದೆ. ಅದರಲ್ಲೂ ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾದ ತಂಡ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ಸೂರ್ಯಕುಮಾರ್ ಯಾದವ್ ಅವರಿಗೆ ಹೆಚ್ಚು ಹಣ ಲಭಿಸಿದೆ. ಉಳಿದ ಆಟಗಾರ ಇವರಿಗಿಂತ ಸ್ವಲ್ಪ ಕಡಿಮೆ ಮೊತ್ತ ಸಿಕ್ಕಿದೆ ಎನ್ನಬಹುದು.

T20 World Cup Winning Prize
Image Credit: etvbharat

Join Nadunudi News WhatsApp Group