Tamannaah Bhatia: ಕಾವಿಕೊಟ್ಟು ಸನ್ಯಾಸಿನಿ ರೀತಿ ಕಾಣಿಸಿಕೊಂಡ ತಮನ್ನಾ, ಮೂಡಿದೆ ಹಲವು ಪ್ರಶ್ನೆ.

Actress Tamannaah Bhatia Visited Temples Dressed In Kavi cloths: ನಟಿ ತಮನ್ನಾ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ನಟಿ ತಮನ್ನಾ(Tamannaah) ಹಲವು ಸಿನಿಮಾದಲ್ಲಿ ನಟಿಸಿ ತಮ್ಮ ನಟನ ಮೂಲಕ ಚಿತ್ರರಂಗದಲ್ಲಿ ಹೊಸ ಹೊಸ ಛಾಪು ಮೂಡಿಸಿರುವ ನಟಿ ಎನ್ನಬಹುದು.

ದಕ್ಷಿಣ ಸಿನಿಮಾ ರಂಗದ ಖ್ಯಾತ ತಾರೆ ಮಿಲ್ಕಿ ಬ್ಯುಟಿ ಖ್ಯಾತಿಯ ತಮನ್ನಾ ಕಾವಿತೊಟ್ಟು ಅಚ್ಚರಿ ಮೂಡಿಸಿದ್ದಾರೆ. ಬಿಕಿನಿ ತೊಟ್ಟು ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ಈ ನಟಿ ಇದೀಗ ಕಾವಿತೊಟ್ಟಿರುವುದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ.

Actress Tamannaah appeared in Devasthan dressed in Kavi clothes
Image Credit: indiatvnews

ಕಾವಿ ಬಟ್ಟೆ ಧರಿಸಿ ದೇವಸ್ಥಾನಗಳಿಗೆ ಭೇಟಿ ನೀಡಿದ ನಟಿ ತಮನ್ನಾ

ನಟಿ ತಮನ್ನಾ ಇದೀಗ ಕಾವಿ ಬಟ್ಟೆ ಧರಿಸಿ ಅಭಿಮಾನಿಗಳಿಗೆ ಅಚ್ಚರಿ ಮಾಡಿದ್ದಾರೆ. ನಟಿ ತಮನ್ನಾ ಕೇವಲ ಕಾವಿ ಮಾತ್ರ ತೊಟ್ಟಿಲ್ಲ, ಹಲವು ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಹಾಗಾಗಿ ನಟಿ ತಮನ್ನಾ ಸನ್ಯಾಸಿನಿ ಆಗಲಿದ್ದಾರೆ ಎನ್ನುವ ಅನುಮಾನ ಕೂಡ ಮೂಡಿದೆ.

Actress Tamannaah who had darshan of God wearing Kavi clothes
Image Credit: southindiafashion

ಹಲವು ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟಿ ತಮನ್ನಾ
ನಟಿ ತಮನ್ನಾ ಕೈಯಲ್ಲಿ ಸದ್ಯ ನಾಲ್ಕು ಚಿತ್ರಗಳಿವೆ. ಚಿರಂಜೀವಿ ಜೊತೆ ಭೋಳಾ ಶಂಕರ್ ಸಿನಿಮಾದಲ್ಲಿ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ಇವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

Join Nadunudi News WhatsApp Group

ಬಾಲಿವುಡ್ ನಲ್ಲಿ ಬೋಲೇ ಚೂಡಿಯ ಸಂಪೂರ ಶೂಟಿಂಗ್ ಮುಗಿದಿದೆ. ಬಾಂದ್ರಾ ಹೆಸರಿನ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ. ಇಷ್ಟೊಂದು ಬ್ಯುಸಿಯಾಗಿದ್ದರು ನಟಿ ತಮನ್ನಾ ದೇವಸ್ಥಾನ ಸುತ್ತುವುದಕ್ಕೆ ಕಾರಣ ಏನು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ ಅವರ ಅಭಿಮಾನಿಗಳಿಗೆ.

Actress Tamannaah appeared in the temple
Image Credit: indiatvnews

ತಮನ್ನಾ ಕಾವಿತೊಟ್ಟ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ
ಕೆಲವು ದಿನಗಳ ಹಿಂದೆಯಷ್ಟೇ ನಟಿ ತಮನ್ನಾ ಮದುವೆ ವಿಚಾರ ಸಖತ್ ಸುದ್ದಿ ಮಾಡಿತ್ತು. ಮುಂಬೈ ಮೂಲದ ಉದ್ಯಮಿ ಒಬ್ಬರನ್ನು ಅವರು ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು.

ಈ ನಡುವೆ ಅವರು ಕಾವಿತೊಟ್ಟು ಲಿಂಗ ಬೈರವಿಗೆ ಪೂಜೆ ಸಲ್ಲಿಸಿದ್ದಾರೆ. ಜೊತೆ ಹಿಮಾಲಯಕ್ಕೆ ತೆರಳಿ ವೈಷ್ಣವಿ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Join Nadunudi News WhatsApp Group