Tata Winger: ದೊಡ್ಡ ಕುಟುಂಬಕ್ಕಾಗಿ 15 ಆಸನಗಳ ದೊಡ್ಡ ಕಾರ್ ಬಿಡುಗಡೆ ಮಾಡಿದ ಟಾಟಾ, ಶಕ್ತಿಶಾಲಿ 5 ಸ್ಟಾರ್ ಕಾರ್.
ದೊಡ್ಡ ಕುಟುಂಬಕ್ಕಾಗಿ 15 ಸೀಟ್ ಇರುವಾ ವಾಹನವನ್ನು ಪರಿಚಯಿಸಿದ ಟಾಟಾ.
Tata 15 Seater Winger: ಸದ್ಯ ಮಾರುಕಟ್ಟೆಯಲ್ಲಿ ವಿಭಿನ್ನ ವಿನ್ಯಾಸದ ಹತ್ತು ಹಲವು ಮಾದರಿಯ ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ವಿವಿಧ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಅನ್ನು ಪರಿಚಯಿಸುತ್ತಿದ್ದಂತೆ ಇನ್ನಿತರ ಕಂಪನಿಗಳು ಕೂಡ ಪರಿಚಯಗೊಂಡಿರುವ ಮಾದರಿಗಿಂತ ಹೆಚ್ಚಿನ ಫೀಚರ್ ಅನ್ನು ಹೊಂದಿರುವ ವಾಹನವನ್ನು ಪರಿಚಯಿಸುವ ಮೂಲಕ ಪೈಪೋಟಿ ನೀಡುತ್ತವೆ.
ಸದ್ಯ ಜನಪ್ರಿಯ ವಾಹನ ತಯಾರಕ ಕಂಪೆನಿಯಾದ TATA ಇದೀಗ ವಿಶೇಷವಾಗಿ ದೊಡ್ಡ ಕುಟುಂಬಕ್ಕಾಗಿ ಹೊಸ ಮಾದರಿಯಲ್ಲಿ ವಾಹನವನ್ನು ಸಜ್ಜುಗೊಳಿಸಿದೆ. ಅತಿ ದೊಡ್ಡ ಕುಟುಂಬ ಈ ವಾಹನದಲ್ಲಿ ಸರಾಗವಾಗಿ ತಮ್ಮ ಪ್ರಯಾಣವನ್ನು ಮಾಡಬಹುದಾಗಿದೆ.
Tata 15 Seater Winger
ಟಾಟಾ ಇದೀಗ ದೊಡ್ಡ ಕುಟುಂಬಕ್ಕಾಗಿ 15 ಸೀಟ್ ಇರುವಾ ವಾಹನವನ್ನು ಪರಿಚಯಿಸಿದೆ. ಈ 15 seater ವಾಹನದ ಹೆಸರು Tata Winger . ನೂತನ ಟಾಟಾ ವಿಂಗರ್ 15S ಮೊನೊಕಾಕ್ ವಿನ್ಯಾಸದೊಂದಿಗೆ ಹೆಚ್ಚು ಆಕರ್ಷಣೀಯವಾಗಿದೆ. ವಿಂಗರ್ 15S ಪ್ರಯಾಣಿಕರಿಗಾಗಿ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಪರಿಚಯವಾಗಿದೆ. ಪ್ರತಿಯೊಂದು ಆಸನದಲ್ಲೂ ಪುಶ್- ಬ್ಯಾಕ್ ಸೀಟ್ ಗಳು, ಪ್ರತ್ಯೇಕ AC ವೆಂಟ್ ಗಳು ಮತ್ತು USB ಚಾರ್ಜಿಂಗ್ ಪಾಯಿಂಟ್ ಗಳನ್ನು ಹೊಂದಿದ್ದು ಸವಾರಿ ಮಾಡುವ ಪ್ರತಿಯೊಬ್ಬರೂ ಕೂಡ ಆರಾಮದಾಯ ಪ್ರಯಾಣವನ್ನು ಅನುಭವಿಸಬಹುದು.
ದೊಡ್ಡ ಕುಟುಂಬಕ್ಕಾಗಿ 15 ಆಸನಗಳ ದೊಡ್ಡ ಕಾರ್ ಬಿಡುಗಡೆ ಮಾಡಿದ ಟಾಟಾ
ವಿಂಗರ್ 15S ಬಲಿಷ್ಠವಾದ 2.2 ಲೀಟರ್ ಡಿಕೋರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 98bhp ಮತ್ತು 190Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಿದ್ದು, ಗಂಟೆಗೆ 100 ಕಿಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಶಕ್ತಿಶಾಲಿ ಎಂಜಿನ್ ಸಾಮರ್ಥ್ಯವನ್ನು ಹೊಂದಿರುವ Tata 15 Seater Winger ಪ್ರತಿ ಲೀಟರ್ ಗೆ 10 ಕಿಲೋಮೀಟರ್ ಮೈಲೇಜ್ ನೀಡಲಿದೆ.
15 ಆಸನಗಳಿರುವ ಈ ಕಾರ್ ನ ಬೆಲೆ ಎಷ್ಟಿದೆ..?
ಇನ್ನು ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಸವಾರರ ಸುರಕ್ಷತೆಗಾಗಿ ಅಳವಡಿಸಲಾಗಿದೆ. ನೂತನ ವಿಂಗರ್ 3 ವರ್ಷಗಳ ವಾರಂಟಿಯೊಂದಿಗೆ 3 ಲಕ್ಷ km ವಿಸ್ಕೃತ ವಾರಂಟಿಯೊಂದಿಗೆ ಬರಲಿದೆ. ಹೆಚ್ಚು ಆರಾಮದಾಯಕ ಪ್ರಯಾಣಕ್ಕೆ Tata 15 ಆಸನಗಳ Winger ಉತ್ತಮ ಆಯ್ಕೆ ಎನ್ನಬಹುದು. ಇನ್ನು ನೂತನ Tata 15 ಆಸನಗಳಿರುವ Winger ಗೆ ಮಾರುಕಟ್ಟೆಯಲ್ಲಿ 15.21 ಲಕ್ಷದಿಂದ 16.20 ಲಕ್ಷ ರೂ. ನಿಗದಿಪಡಿಸಲಾಗಿದೆ. ಇನ್ನು 15 ಆಸನಳಗಳಿರುವ ಕಾರಣ ಈ ಕಾರ್ ನ್ ಬೆಲೆ ಅಗ್ಗ ಎನ್ನಬಹುದು.