Tata 7 Seater: 14 Km ಮೈಲೇಜ್ ಕೊಡುವ 7 ಸೀಟ್ ಬಜೆಟ್ ಕಾರ್ ಲಾಂಚ್ ಮಾಡಿದ ಟಾಟಾ, ಲಕ್ಷಕ್ಕೂ ಅಧಿಕ ಬುಕಿಂಗ್.
ನೂತನ ವಿನ್ಯಾಸದ ಎಸ್ ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿರುವ ಟಾಟಾ ಮೋಟಾರ್ಸ್.
Tata SUV 7 seater: ದೇಶಿಯ ಮಾರುಕಟ್ಟೆಯಲ್ಲಿ ಒಂದಕ್ಕಿಂತ ಒಂದು ಹೆಚ್ಚಿನ ವೈಶಿಷ್ಟ್ಯಗಳಿರುವ ಎಸ್ ಯೂವಿ(SUV)ಗಳು ಲಗ್ಗೆ ಇಡುತ್ತಿವೆ. ಯಾವುದೇ ಆಟೋಮೊಬೈಲ್ ಕಂಪನಿ ಹೊಸ ಎಸ್ ಯುವಿಯನ್ನು ಪರಿಚಯಿಸುತ್ತಿದಂತೆ ಬೇರೆ ಬೇರೆ ಕಂಪನಿಗಳು ಎಸ ಯುವಿಗೆ ಪೈಪೋಟಿ ನೀಡಲು ಹೊಸ ಹೊಸ ಮಾದರಿಯನ್ನು ಪರಿಚಿಸುತ್ತವೆ.
ಇನ್ನು ದೇಶದ ಜನಪ್ರಿಯ ವಾಹನ ತಯಾರಕ ಕಂಪೆನಿಯಾದ ಟಾಟಾ ಮೋಟಾರ್ಸ್ (Tata Motors) ಇದೀಗ ನೂತನ ವಿನ್ಯಾಸದ ಎಸ್ ಯುವಿಯನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.
ಟಾಟಾ ಸುಮೋ ಎಸ್ ಯುವಿ (Tata Sumo SUV)
ಭಾರತೀಯ ಮಾರುಕಟ್ಟೆಗೆ ಟಾಟಾದ ನೂತನ ವಿನ್ಯಾಸದ ಸುಮೋ ಎಸ್ ಯುವಿ ಸದ್ಯದಲ್ಲೇ ಲಗ್ಗೆ ಇಡಲಿದೆ. ಶಕ್ತಿಶಾಲಿ ಎಂಜಿನ್ ನೊಂದಿಗೆ ಉತ್ತಮ ನೋಟವನ್ನು ಹೊಂದಿರುವ ಸುಮೋ ಎಸ್ ಯುವಿ ಗ್ರಾಹಕರನ್ನು ಸೆಳೆಯಲಿದೆ. ಇತ್ತೀಚಿಗೆ ಮಾರುತಿ,ಮಹಿಂದ್ರಾ ಕಂಪನಿಗಳ ಎಸ ಯುವಿ ಬಾರಿ ಬೇಡಿಕೆ ಪಡೆಯುತ್ತಿದೆ. ಈ ಕಂಪನಿಗಳು ಮರುಕ್ತತೆಗೆ ಹೊಸ ರೂಪಾಂತರವನ್ನು ಪರಿಚಯಿಸುತ್ತಿದೆ. ಮುಂಬರಯುವ ಟಾಟಾ ಸುಮೋ SUV ಮಾರುತಿ, ಮಹಿಂದ್ರಾ ಎಸ್ ಯೂವಿಗಳ ಜೊತೆ ಸ್ಪರ್ಧಿಸಲಿದೆ.
ಟಾಟಾ ಸುಮೋ ಎಸ್ ಯುವಿ ಫೀಚರ್
ಟಾಟಾ ಸುಮೋ ಎಸ್ ಯುವಿಯಲ್ಲಿ ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಕಾರ್ ನ ಮುಂಭಾಗದಲ್ಲಿ ಉತ್ತಮವಾದ ಎಲ್ ಇಡಿ ಲೈಟಿಂಗ್ ಸೆಟಪ್, ಎಲ್ ಇಡಿ ಡಿ ಆರ್ ಎಲ್, ಎರಡು ಸ್ಲಾಟ್ ಗ್ರಿಲ್ ಅನ್ನು ಈ ಎಸ್ ಯುವಿ ಹೊಂದಿದೆ. ಹಿಂಭಾಗದಲ್ಲಿ ಹೊಸದಾಗಿ ಟೈಲ್ ಲೈಟ್ ಗಳೊಂದಿಗೆ ಬಂಪರ್ ಅನ್ನು ನೀಡಲಾಗಿದೆ. ಟೈಲ್ ಲೈಟ್ ಕಾರ್ ನ ಲುಕ್ ಅನ್ನು ಇನ್ನಷ್ಟು ಹೆಚ್ಚಿಸಲಿದೆ.
ಟಾಟಾ ಸುಮೋ ಎಸ್ ಯುವಿ ಮೈಲೇಜ್
ಟಾಟಾ ಸುಮೋ ಎಸ್ ಯುವಿಯಲ್ಲಿ ನವೀಕರಿಸಿದ ಎಂಜಿನ್ ಅನ್ನು ಪಡೆಯಬಹುದಾಗಿದೆ. ಇದರಲ್ಲಿ 2 .0 ಲೀಟರ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 176 bhp ಮತ್ತು 350 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 6 ಸ್ಪೀಡ್ ಮ್ಯಾನುವಲ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿದ್ದು ಬರೋಬ್ಬರಿ 14 ಕಿಲೋಮೀಟರ್ ಮೈಲೇಜ್ ನೀಡಲಿದೆ.
ಟಾಟಾ ಸುಮೋ ಎಸ್ ಯುವಿ ಬೆಲೆ ಮತ್ತು ವಿಶೇಷತೆ
ಕಂಪನಿಯು ನೂತನ ಸುಮೋ ಎಸ್ ಯುವಿಯಲ್ಲಿ ವಾಹನ ಸವಾರ ಸುರಕ್ಷತೆಗೆ ಹೆಚ್ಚಿನ ಫೀಚರ್ ಅನ್ನು ಅಳವಡಿಸಿದೆ. 6 ಏರ್ ಬ್ಯಾಗ್‌ಗಳು, EBD ಜೊತೆಗೆ ABS, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿದಂತೆ ಇನ್ನಿತರ ಉತ್ತಮ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಇನ್ನು ಈ ಸುಮೋ ಎಸ್ ಯುವಿಗೆ ಮಾರುಕಟ್ಟೆಯಲ್ಲಿ ಸುಮಾರು 6 ರಿಂದ 8 ಲಕ್ಷ ಹಣ ನಿಗದಿಪಡಿಸಲಾಗಿದೆ.