Tata Scholarship: ವಿದ್ಯಾರ್ಥಿಗಳಿಗೆ ರತನ್ ಟಾಟಾ ಕಡೆಯಿಂದ ಸಿಗಲಿದೆ 25,000 ರೂ ವಿದ್ಯಾರ್ಥಿವೇತನ, ಇಂದೇ ಅರ್ಜಿ ಸಲ್ಲಿಸಿ.

ರತನ್ ಟಾಟಾ ಕಡೆಯಿಂದ ಅರ್ಹ ವಿದ್ಯಾರ್ಥಿಗಳಿಗೆ 25000 ವಿದ್ಯಾರ್ಥಿ ವೇತನ.

Tata AIA Life Insurance Scholarship For Student: ಸಾಮಾನ್ಯವಾಗಿ ಎಲ್ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಬದುಕನ್ನು ಕಟ್ಟಿಕೊಡುವ ಆಸೆಯನ್ನು ಹೊಂದಿರುತ್ತಾರೆ. ಹೀಗಾಗಿ ಮಕಾಳಿಗೆ ವಿದ್ಯಾಭ್ಯಾಸ ನೀಡುವುದರಲ್ಲಿ ಹೆಚ್ಚಿನ ಗಮನ ಹರಿಸುತ್ತಾರೆ. ದೇಶದಲ್ಲಿ ಅದೆಷ್ಟೋ ಬಡ ಕುಟುಂಬದ ಮಕ್ಕಳು ಆರ್ಥಿಕ ಸಮಸ್ಯೆಯ ಕಾರಣ ತಮ್ಮ ಶಿಕ್ಷಣವನ್ನು ಅರ್ಧಕ್ಕೆ ಕೈಬಿಟ್ಟಿರುವ ಉದಾಹರಣೆಗಳಿವೆ.

ಸಾಕಷ್ಟು ವಿದ್ಯಾರ್ಥಿಗಳಿಗೆ ಓದಲು ವಿದ್ಯಾರ್ಥಿವೇತನದ ಅಗತ್ಯವಿರುತ್ತದೆ. ಲಕ್ಷಾಂತರ ಮಕ್ಕಳು ವಿದ್ಯಾರ್ಥಿ ವೇತನದಿಂದಲೇ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ ಎನ್ನಬಹುದು. ಇದೀಗ, ಟಾಟಾ AIA ಲೈಫ್ ಇನ್ಶುರೆನ್ಸ್ (Tata AIA Life Insurance) ಕಂಪನಿಯು ಪ್ರತಿಭಾವಂತ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಆರ್ಥಿಕ ಸಹಾಯಕ್ಕಾಗಿ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಿದೆ.

Tata AIA Life Insurance Scholarship For Student
Image Credit: India Hood

ವಿದ್ಯಾರ್ಥಿಗಳಿಗೆ ರತನ್ ಟಾಟಾ ಕಡೆಯಿಂದ ಸಿಗಲಿದೆ 25,000 ರೂ ವಿದ್ಯಾರ್ಥಿವೇತನ
ಕಮರ್ಷಿಯಲ್ ಎಕನಾಮಿಕ್ಸ್ ಅಕೌಂಟಿಂಗ್, ಮ್ಯಾನೇಜ್‌ಮೆಂಟ್ ಮತ್ತು ಫೈನಾನ್ಸ್, ಬ್ಯಾಂಕಿಂಗ್, ಇನ್ಶೂರೆನ್ಸ್ ಮ್ಯಾನೇಜ್‌ಮೆಂಟ್, ಡಾಟಾ ಸೈನ್ಸ್, ಸ್ಟ್ಯಾಟಿಸ್ಟಿಕ್ಸ್, ರಿಸ್ಕ್ ಮ್ಯಾನೇಜ್‌ ಮೆಂಟ್ ಮತ್ತು ಇತರ ವೃತ್ತಿಪರ ಕ್ಷೇತ್ರಗಳಲ್ಲಿ ಪದವಿ, ಸ್ನಾತಕೋತ್ತರ ಅಥವಾ ಪಿಜಿ ಡಿಪ್ಲೋಮಾ ಕೋರ್ಸ್‌ ಗಳ ಮೊದಲ ವರ್ಷದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಟಾಟಾ ಎಐಎ ಲೈಫ್ ಇನ್ಶೂರೆನ್ಸ್ ಕಂಪನಿ ನೀಡುವ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿರುತ್ತಾರೆ. ಟಾಟಾ AIA ಲೈಫ್ ಇನ್ಶುರೆನ್ಸ್ ಕಂಪನಿಯು ಪ್ರತಿಭಾವಂತ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಆರ್ಥಿಕ ಸಹಾಯಕ್ಕಾಗಿ 25,000 ರೂ. ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಿದೆ.

ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಹತೆಗಳೇನು..?
•ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಹಿಂದಿನ ತರಗತಿಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು.

•ಎಲ್ಲಾ ಮೂಲಗಳಿಂದ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ.5 ಲಕ್ಷ ಮೀರಬಾರದು.

Join Nadunudi News WhatsApp Group

•TATA AIA ನೌಕರರು/ನಾಯಕರು/ಏಜೆಂಟರು/ವಿತರಣಾ ಪಾಲುದಾರರು ಇತ್ಯಾದಿ ಮತ್ತು Buddy4Study ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಲ್ಲ.

•ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ವಿಕಲಚೇತನರು (ಪಿಡಬ್ಲ್ಯೂಡಿ) ಮತ್ತು ಬಾಲಕಿಯರಿಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

Tata Scholarship Latest News Update
Image Credit: Onmanorama

ಈ ಧಾಖಲೆ ಇದ್ದಾರೆ ಮಾತ್ರ ಅರ್ಜಿ ಸಲ್ಲಿಕೆ ಸಾಧ್ಯ
•ಅರ್ಜಿದಾರರ ಪಾಸ್‌ಪೋರ್ಟ್ ಸೈಜ್ ಫೋಟೋ

•ಹಿಂದಿನ ವರ್ಗದ ಮಾರ್ಕ್ ಕಾರ್ಡ್

•ಆಧಾರ್ ಕಾರ್ಡ್/ವೋಟರ್ ಐಡಿ/ಡ್ರೈವಿಂಗ್ ಲೈಸೆನ್ಸ್/ಪ್ಯಾನ್ ಕಾರ್ಡ್

•ಅಡ್ಮಿಟ್ ಕಾರ್ಡ್/ಸಂಸ್ಥೆಯ ಗುರುತಿನ ಚೀಟಿ

•ಆಧಾರ್ ಕಾರ್ಡ್/ಚಾಲನಾ ಪರವಾನಗಿ/ವಿದ್ಯುತ್ ಬಿಲ್,

•ಅರ್ಜಿದಾರರ ಬ್ಯಾಂಕ್ ಖಾತೆ ವಿವರ

•ಆದಾಯ ಪ್ರಮಾಣ ಪತ್ರ

•ಜಾತಿ ಪ್ರಮಾಣ ಪತ್ರ

https://www.buddy4study.com/page/paras-scholarship-programme ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಆನ್ಲೈನ್ ಮೂಲಕ ಅರ್ಹ ಧಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

Join Nadunudi News WhatsApp Group