Tata Mileage Car: ಬೈಕ್ ಗಿಂತ ಹೆಚ್ಚು ಮೈಲೇಜ್ ಕೊಡುವ ಟಾಟಾ ಕಾರ್ ಲಾಂಚ್, 50,000 ಕ್ಕೂ ಅಧಿಕ ಬುಕಿಂಗ್.
ಪ್ರತಿ ಕೆಜಿ CNG ಗೆ 26 ಕಿಲೋಮೀಟರ್ ಮೈಲೇಜ್ ನೀಡುವ ಟಾಟಾದ ಹೊಸ ಕಾರ್ ಬಿಡುಗಡೆ.
Tata Altroz CNG: ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೊಸ ಹೊಸ ಮಾದರಿಯ ಕಾರ್ ಗಳು ಬಿಡುಗಡೆಯಾಗುತ್ತಿವೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಕಾರ್ ಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿವೆ.ಇನ್ನು ದೇಶದ ಪ್ರತಿಷ್ಠಿತ ಕಾರು ತಯಾರಕ ಕಂಪನಿಯಾದ ಟಾಟಾ ತನ್ನ ಕಂಪನಿಯ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿದೆ.
ಟಾಟಾ ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗು ಎಲೆಕ್ಟ್ರಿಕ್ ಕಾರ್ ಗಳನ್ನೂ ಪರಿಚಯಿಸಿದೆ. ಇದೀಗ ಟಾಟಾ ಕಂಪನಿ ಗ್ರಾಹಕರಿಗೆ ಪೆಟ್ರೋಲ್, ಡೀಸೆಲ್, ಬ್ಯಾಟರಿ ಖರ್ಚನ್ನು ತಪ್ಪಿಸಲು ಸಿಎನ್ ಜಿ ಮಾದರಿಯ ಕಾರ್ ಅನ್ನು ಟಾಟಾ ಇದೀಗ ಬಿಡುಗಡೆಗೊಳಿಸಿದೆ. ಇದೀಗ ಟಾಟಾ ಕಂಪನಿ (Tata Motor) ತನ್ನ ಹೊಚ್ಚ ಹೊಸ ಟಾಟಾ ಅಲ್ಟ್ರೋಜ್ ಸಿಎನ್ ಜಿ (Tata Altroz CNG) ಅನ್ನು ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ.
ಟಾಟಾ ಅಲ್ಟ್ರೋಜ್ ಸಿಎನ್ ಜಿ
ಇದೀಗ ಟಾಟಾ ಮೋಟಾರ್ ಕಂಪನಿಯು ತನ್ನ ಅಲ್ಟ್ರೋಜ್ ಕಾರಿನಲ್ಲಿ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡಿದೆ. ದೇಶಿಯ ಮಾರುಕಟ್ಟೆಯಲ್ಲಿ ಸಿಎನ್ ಜಿ ಕಾರುಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. 2023 ರ ದೆಹಲಿ ಆಟೋ ಎಕ್ಸ್ ಪೊದಲ್ಲಿ ಮೊದಲ ಬಾರಿಗೆ ಟಾಟಾ ಅಲ್ಟ್ರೋಜ್ ಸಿಎನ್ ಜಿ ಅನಾವರಣಗೊಂಡಿದೆ.
ಟಾಟಾ ಮೋಟಾರ್ಸ್ ಕಂಪನಿ ಇದೀಗ ತನ್ನ ಟಾಟಾ ಅಲ್ಟ್ರೋಜ್ ಸಿಎನ್ ಜಿ ಕಾರನ್ನು ಅಧಿಕೃತ ಘೋಷಣೆ ಮಾಡಿದೆ. ಟಾಟಾ ಆಲ್ಟ್ರೊಜ್ iCNG ಕಾರು XE, XM+, XM+ (S), XZ, XZ+ (S), ಮತ್ತು XZ+ O (S) ಎನ್ನುವ ಆರು ರೂಪಾಂತರಗಳಲ್ಲಿ ಲಭ್ಯವಾಗಲಿದೆ. ಎಲೆಕ್ಟ್ರಿಕ್ ಸನ್ ರೂಪ್ ನೊಂದಿಗೆ ನೀಡಲಾಗುವ ಮೊದಲ CNG ಕಾರ್ ಇದಾಗಿದೆ.
ಟಾಟಾ ಅಲ್ಟ್ರೋಜ್ ಸಿಎನ್ ಜಿ ಕಾರಿನ ಬೆಲೆ
ಟಾಟಾ ಅಲ್ಟ್ರೋಜ್ ಸಿಎನ್ ಜಿ ಕಾರಿನ ಎಕ್ಸ್ ಶೋ ರೂಮ್ಬೆಲೆ ರೂ. 7.55 ದಿಂದ 10.55 ಲಕ್ಷ ಆಗಿದೆ. ಸಾಮಾನ್ಯ ಪೆಟ್ರೋಲ್ ಮಾದರಿಯ ಕಾರುಗಳಿಗೆ ಹೋಲಿಸಿದರೆ ಈ ಟಾಟಾ ಅಲ್ಟ್ರೋಜ್ ಸಿಎನ್ ಜಿ ಕಾರುಗಳು ಬೆಲೆಯಲ್ಲಿ 90 ಸಾವಿರದಷ್ಟು ದುಬಾರಿಯಾಗಿದೆ.
ಹೊಚ್ಚ ಹೊಸ ಟಾಟಾ ಅಲ್ಟ್ರೋಜ್ ಸಿಎನ್ ಜಿ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಐಸಿಎನ್ ಜಿ ತಂತ್ರಜ್ಞಾನ ಜೋಡಣೆ ಮಾಡಲಾಗಿದೆ. ಈ ಸಿಎನ್ ಜಿ ಕಾರಿನಲ್ಲಿ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ನೀಡಲಾಗಿದ್ದು ಈ ಸಿಎನ್ ಜಿ ಮಾದರಿಯು ಪ್ರತಿ ಕೆಜಿ ಸಿಎನ್ ಜಿ ಗೆ ಬರೋಬ್ಬರಿ 26-30 ಕಿಲೋಮೀಟರ್ ಮೈಲೇಜ್ ನೀಡುತ್ತದೆ.