Tata Blackbird: ಇನ್ಮೇಲೆ ಸ್ವಿಫ್ಟ್ , ಕ್ರೆಟಾ ಕಿಯಾ ಕಾರು ಕೇಳೋರಿಲ್ಲ, ಬರುತ್ತಿದೆ ಟಾಟಾದ ಈ ಕಾರು, ಅಗ್ಗದ ಬೆಲೆಗೆ ಫಾರ್ಚುನರ್ ಲುಕ್.

ಟಾಟಾ ಬ್ಲಾಕ್ ಬರ್ಡ್ ಕಾರನ್ನು ಬಿಡುಗಡೆ ಮಾಡುತ್ತಿರುವ ಟಾಟಾ ಮೋಟಾರ್ಸ್.

Tata Blackbird Car: ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಕಂಪನಿಯ ಕಾರುಗಳು ಬಿಡುಗಡೆಯಾಗುತ್ತಿವೆ. ಆದ್ದರಿಂದ ಕಾರು ಖರೀದಿ ಮಾಡುವವರಿಗೆ ಕೊರತೆಯಂತೂ ಎಲ್ಲಿಯೂ ಆಗುವುದಿಲ್ಲ ಎನ್ನಬಹುದು. ಮಾರುಕಟ್ಟೆಯಲ್ಲಿ ಒಂದರ ಮೇಲೆ ಒಂದು ಕಾರು ಬಿಡುಗಡೆಯಾಗಿ ತನ್ನ ಛಾಪನ್ನು ಮೂಡಿಸುತ್ತಿದೆ ಎನ್ನಬಹುದು. ಇದೀಗ ಟಾಟಾ ಮೋಟಾರ್ಸ್ (Tata Motors) ಕಂಪನಿಯಿಂದ ಹೊಸ ಕಾರು ಬಿಡುಗಡೆಯಾಗಲು ರೆಡಿಯಾಗುತ್ತಿದೆ. 

ಟಾಟಾ ಮೋಟಾರ್ಸ್ ಕಂಪನಿಯಿಂದ ಹೊಸ ಹೊಸ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದೆ. ಇದೀಗ ಮತ್ತೊಂದು ಹೊಸ ಕಾರನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲು ರೆಡಿಯಾಗುತ್ತಿದೆ. ಇದೀಗ ಟಾಟಾ ಮೋಟಾರ್ಸ್ ನಿಂದ ಟಾಟಾ ಕಾಂಪ್ಯಾಕ್ಟ್ ಎಸ್ ಯು ವಿ ಯನ್ನು ತರಲು ತಯಾರಿ ನಡೆಸತ್ತಿದೆ, ಅದನ್ನು ಬ್ಲಾಕ್ ಬರ್ಡ್ ಎಂದು ಕರೆಯಲಾಗುತ್ತದೆ.

Features of Tata Blackbird Car
Image Credit: Talkingtrendo

ಟಾಟಾ ಬ್ಲಾಕ್ ಬರ್ಡ್ ಕಾರು
ಟಾಟಾ ಮೋಟಾರ್ಸ್ ಇದೀಗ ಟಾಟಾ ಬ್ಲಾಕ್ ಬರ್ಡ್ ಕಾರನ್ನು ಹೊರ ತರುತ್ತಿದೆ. ಈ ಕಾರಿನ ಉದ್ದ ಸುಮಾರು 4.3 ಮೀಟರ್ ಆಗಿರುತ್ತದೆ. ಟಾಟಾ ಬ್ಲಾಕ್ ಬರ್ಡ್ ಹುಂಡೈ ಕ್ರೇಟಾ, ಕ್ರಿಯಾ ಸೆಲ್ಟಸ್ ನಂತಹ ವಾಹನಗಳೊಂದಿಗೆ ಸ್ಪರ್ಧಿಸಬಹುದು. ನೆಕ್ಸನ್ ಗೆ ಹೋಲಿಸಿದರೆ ವೀಲ್ ಬೇಸ್ 50 ಎಂ ಎಂ ಹೆಚ್ಚಾಗುವ ಸಾಧ್ಯತೆಯಿದೆ.

ಟಾಟಾ ಬ್ಲಾಕ್ ಬರ್ಡ್ ಕಾರಿನ ವಿಶೇಷತೆ
ಟಾಟಾ ಬ್ಲಾಕ್ ಬರ್ಡ್ ಕಾರು 1.5 ಲೀಟರ್ ಪೆಟ್ರೋಲ್ ಮತ್ತು 1 .5 ಲೀಟರ್ ಡೀಸೆಲ್ ಎಂಜಿನ್ ಗಳನ್ನೂ ನೀಡುತ್ತದೆ. ಇದರಲ್ಲಿ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ. ಇದು ಗರಿಷ್ಠ 160 ಎಚ್ ಪಿ ವಿದ್ಯುತ್ ಉತ್ಪಾದನೆಯನ್ನು ನೀಡುತ್ತದೆ. ಟಾಟಾ ಕಂಪನಿಯ ಈ ಕಾರಿನ ಬೆಲೆ ಎಷ್ಟು ಅನ್ನುವುದು ಇನ್ನೂ ಕೂಡ ನಿಗದಿ ಆಗಿಲ್ಲ. ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಈ ಕಾರಣ ಬೆಲೆ ಬಹಳ ಕಡಿಮೆ ಎಂದು ಹೇಳಲಾಗುತ್ತಿದೆ.

Features of Tata Blackbird Car
Image Credit: Talkingtrendo

1.5 ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಅನ್ನು ಹೆಚ್ಚಿನ ಶಕ್ತಿ ಮತ್ತು ಟಾರ್ಕ್ ಉತ್ಪಾದನೆಯನ್ನು ನೀಡಲು ನವೀಕರಿಸಲಾಗುತ್ತದೆ. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಪಡೆಯಲಿದೆ. ಕಂಪನಿಯು ಟಾಟಾ ಬ್ಲ್ಯಾಕ್‌ ಬರ್ಡ್‌ಗಾಗಿ ಬಹಳ ಸಮಯದಿಂದ ತಯಾರಿ ನಡೆಸುತ್ತಿದೆ.

Join Nadunudi News WhatsApp Group

Join Nadunudi News WhatsApp Group