Balckbird: ಟಾಟಾ ಈ ಕಾರಿನ ಮುಂದೆ ಮೂಲೆಗುಂಪಾದ ಕ್ರೇಟಾ, 18 KM ಮೈಲೇಜ್ ಮತ್ತು 5 ಸ್ಟಾರ್ ಸುರಕ್ಷತೆ.
ಟಾಟಾಮೋಟಾರ್ಸ್ ಕಂಪನಿಯಿಂದ ಭಾರತೀಯ ಮಾರುಕಟ್ಟೆಗೆ ಮತ್ತೊಂದು ಹೊಸ ಕಾರ್ ಬಿಡುಗಡೆಯಾಗಲು ತಯಾರಿ ನೆಡೆಸುತ್ತಿದೆ.
Tata Blackbird: ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಕಂಪನಿಯ ಕಾರುಗಳು ಬಿಡುಗಡೆಯಾಗುತ್ತಿರುವ ಕಾರಣ ಕಾರು ಖರೀದಿಗೆ ಯಾವುದೇ ಕೊರತೆ ಆಗುವುದಿಲ್ಲ ಎನ್ನಬಹುದು. ಮಾರುಕಟ್ಟೆಯಲ್ಲಿ ಒಂದರ ಮೇಲೆ ಒಂದು ಕಾರು ಬಿಡುಗಡೆಯಾಗಿ ಸಂಚಲನ ಮೂಡಿಸುತ್ತಿದೆ. ಇದೀಗ ಜನಪ್ರಿಯ ಕಾರ್ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ಕಂಪನಿಯಿಂದ ಹೊಸ ಕಾರು ಬಿಡುಗಡೆಯಾಗಲು ಸಜ್ಜಾಗಿದೆ.
ಈಗಾಗಲೇ ಟಾಟಾಮೋಟಾರ್ಸ್ ಕಂಪನಿಯಿಂದ ಹೊಸ ಹೊಸ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದೆ. ಇದೀಗ ಮತ್ತೊಂದು ಹೊಸ ಕಾರನ್ನು ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲು ರೆಡಿಯಾಗುತ್ತಿದೆ. ಇದೀಗ ಟಾಟಾ ಮೋಟಾರ್ಸ್ ನಿಂದ ಟಾಟಾ ಕಾಂಪ್ಯಾಕ್ಟ್ ಎಸ್ ಯುವಿಯನ್ನು ತರಲು ತಯಾರಿ ನಡೆಸತ್ತಿದೆ.
ಟಾಟಾ ಬ್ಲ್ಯಾಕ್ ಬರ್ಡ್ ಕಾರು (Tata Blackbird Car)
ಟಾಟಾ ಮೋಟಾರ್ಸ್ ಇದೀಗ ಟಾಟಾ ಬ್ಲ್ಯಾಕ್ ಬರ್ಡ್ ಕಾರನ್ನು ಹೊರ ತರುತ್ತಿದೆ. ಈ ಕಾರಿನ ಉದ್ದ ಸುಮಾರು 4.3 ಮೀಟರ್ ಆಗಿರುತ್ತದೆ. ಟಾಟಾ ಬ್ಲ್ಯಾಕ್ ಬರ್ಡ್ ಹುಂಡೈ ಕ್ರೇಟಾ, ಕ್ರಿಯಾ ಸೆಲ್ಟಸ್ ನಂತಹ ವಾಹನಗಳೊಂದಿಗೆ ಸ್ಪರ್ದಿಸಲು ಸುಧಾರಿತ ಫೀಚರ್ ಅನ್ನು ಕಂಪನಿಯು ಅಳವಡಿಸಿದೆ.
ಈ ನೂತನ ಕಾರ್ ಪನೋರಮಿಕ್ ಸನ್ ರೂಫ್, ವೈರ್ ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಹೊಂದಿರುವ ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್ ಮೆಂಟ್ ಸಿಸ್ಟಮ್, ಕ್ರೂಸ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್, ಮಲ್ಟಿ-ಫಂಕ್ಷನ್ ಸ್ಟೀರಿಂಗ್ ವೀಲ್, ಹೊಸ ಸರೌಂಡ್ ಸೌಂಡ್ ಸಿಸ್ಟಮ್ ನಂತರ ಅತ್ಯಾಕರ್ಷಕ ವೈಶಿಷ್ಟ್ಯವನ್ನು ಹೊಂದಿದೆ. ಹೊಸ ಟಾಟಾ ಬ್ಲ್ಯಾಕ್ ಬರ್ಡ್ ಸಬ್-ಕಾಂಪ್ಯಾಕ್ಟ್ SUV ನೆಕ್ಸಾನ್ ಗಿಂತ ಉದ್ದ ಮತ್ತು ಹೆಚ್ಚು ವಿಶಾಲವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಟಾಟಾ ಬ್ಲ್ಯಾಕ್ ಬರ್ಡ್ ಎಂಜಿನ್ ಸಾಮರ್ಥ್ಯ
ಟಾಟಾ ಬ್ಲ್ಯಾಕ್ ಬರ್ಡ್ ಕಾರು 1.5 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಗಳನ್ನೂ ನೀಡುತ್ತದೆ. ಇದರಲ್ಲಿ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಪಡೆಯುವ ಸಾಧ್ಯತೆಯಿದೆ. ಇದು ಗರಿಷ್ಠ 160 ಎಚ್ ಪಿ ವಿದ್ಯುತ್ ಉತ್ಪಾದನೆಯನ್ನು ನೀಡುತ್ತದೆ. ಇನ್ನು .5 ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಅನ್ನು ಹೆಚ್ಚಿನ ಶಕ್ತಿ ಮತ್ತು ಟಾರ್ಕ್ ಉತ್ಪಾದನೆಯನ್ನು ನೀಡಲು ನವೀಕರಿಸಲಾಗುತ್ತದೆ.
ಟಾಟಾ ಬ್ಲ್ಯಾಕ್ ಬರ್ಡ್ ಮೈಲೇಜ್ ಮತ್ತು ಬೆಲೆ
ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳನ್ನು ಪಡೆಯಲಿದೆ. ಈ ಕಾರ್ ಬರೋಬ್ಬರಿ 18KM ಮೈಲೇಜ್ ನೀಡಲಿದೆ ಎನ್ನುವ ಬಗ್ಗೆ ವರದಿಯಾಗಿದೆ. ಇನ್ನು ಟಾಟಾ ಬ್ಲ್ಯಾಕ್ ಬರ್ಡ್ ಬೆಲೆಯ ಬಗ್ಗೆ ಕಂಪನಿ ಅಧಿಕೃತ ಮಾಹಿತಿ ನೀಡಿಲ್ಲ. ಇನ್ನು ಹ್ಯುಂಡೈ ಕ್ರೇಟಾ ಮಾದರಿಯು ಮಾರುಕಟ್ಟೆಯಲ್ಲಿ 10 ರಿಂದ 19 ಲಕ್ಷ ಬೆಲೆಯಲ್ಲಿ ಬಿಡುಗಡೆಯಾಗಿದ್ದು ನೂತನ ಮಾದರಿಯ ಟಾಟಾ ಬ್ಲ್ಯಾಕ್ ಬರ್ಡ್ ಈ ಕಾರ್ ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ ಎನ್ನಬಹವುದು ಎನ್ನಬಹುದು.