Ads By Google

Tata Vehicle Price: 2024 ರಲ್ಲಿ ದುಬಾರಿಯಾಗಲಿದೆ ಟಾಟಾ ಕಂಪನಿಯ ಈ ಕಾರುಗಳ ಬೆಲೆ, ಕಾರ್ ಪ್ರಿಯರಿಗೆ ಬೇಸರದ ಸುದ್ದಿ.

tata cars price hike 2024

Image Credit: Original Source

Ads By Google

Tata Commercial Vehicle Price Hike from January: ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆರಂಭವಾಗಲಿದೆ. ಹೊಸ ವರ್ಷಕ್ಕೆ ಜನರು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ. ಹೆಚ್ಚಿನ ಜನರು ಹೊಸ ವರ್ಷಕ್ಕೆ ಹೊಸ ವ್ಯವಹಾರವನ್ನು ಆರಂಭಿಸಲು ಅಥವಾ ಹೊಸ ವಾಹನ ಖರೀದಿಸುವ ಯೋಜನೆಯನ್ನು ಈಗಲೇ ಹಾಕಿಕೊಂಡಿರುತ್ತಾರೆ.

ಇನ್ನು ಮಾರುಕಟ್ಟೆಯಲ್ಲಿ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದೀಗ ಜನಪ್ರಿಯ ವಾಹನ ತಯಾರಕ ಕಂಪೆನಿಯಾದ TATA ತನ್ನ ಮಾದರಿಯಾ ವಾಹನಗಳನ್ನು ಖರೀದಿಸುವವರಿಗೆ ಶಾಕ್ ನೀಡಿದೆ. ಹೌದು, ಟಾಟಾ ಕಂಪನಿ ತನ್ನ ವಾಣಿಜ್ಯ ವಾಹನಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ.

Image Credit: NDTV

2024 ರಲ್ಲಿ ದುಬಾರಿಯಾಗಲಿದೆ ಟಾಟಾ ಕಂಪನಿಯ ಈ ಕಾರುಗಳ ಬೆಲೆ
ಸಾಮಾನ್ಯವಾಗಿ ವ್ಯವಹಾರ ಮಾಡುವವರು ವಾಣಿಜ್ಯ ವಾಹನಗಳನ್ನು ಬಳಸುತ್ತಾರೆ. ಮಾರುಕಟ್ಟೆಯಲ್ಲಿ ವಾಣಿಜ್ಯ ವಾಹನಗಳಿಗೂ ಬೇಡಿಕೆ ಇದೆ. ಸದ್ಯ ಟಾಟಾ ಕಂಪನಿ ತನ್ನ ವಾಣಿಜ್ಯ ವಾಹನಗಳ ಬೆಲೆಯನ್ನು ಹೆಚ್ಚಿಸಿದ್ದು ವ್ಯವಹಾರ ಮಾಡುವವರಿಗೆ ಬೇಸರದ ಸುದ್ದಿ ನೀಡಿದೆ. ಹೊಸ ವರ್ಷದಿಂದ ವಾಣಿಜ್ಯ ವಾಹನಗಳ ಬೆಲೆ ಹೆಚ್ಚಾಗಲಿದೆ.

ಜನವರಿ 1 2024 ರಿಂದ ವಾಣಿಜ್ಯ ವಾಹನಗಳ ಬೆಲೆ ಶೇ. 3 ರಷ್ಟು ಹೆಚ್ಚಾಗಲಿದೆ. ಟಾಟಾ ಮೋಟಾರ್ಸ್ ಟಿಯಾಗೊ ಹ್ಯಾಚ್‌ ಬ್ಯಾಕ್ ಮತ್ತು ಪ್ರೀಮಿಯಂ ಎಸ್‌ ಯುವಿ ಸಫಾರಿ ಸೇರಿದಂತೆ ರೂ.5.6 ಲಕ್ಷದಿಂದ ರೂ. 25.94 ಲಕ್ಷದವರೆಗಿನ ಪ್ರಯಾಣಿಕ ವಾಹನಗಳ ವಾಹನಗಳನ್ನು ನೀಡುತ್ತದೆ. ಕಂಪನಿಯು ಈ ಹಿಂದೆ ನಿಖರವಾದ ಶೇಕಡಾವಾರು ಪ್ರಮಾಣವನ್ನು ನಿರ್ದಿಷ್ಟಪಡಿಸದೆ ಬೆಲೆ ಏರಿಕೆಯನ್ನು ಜಾರಿಗೆ ತರುವ ಉದ್ದೇಶವನ್ನು ಸೂಚಿಸಿತ್ತು.

Image Credit: Gaadikey

ಜನವರಿ 1 ರಿಂದ ವಾಣಿಜ್ಯ ವಾಹನಗಳಿಗೆ ಹೊಸ ದರ ಜಾರಿ
ಸದ್ಯ 2024 ರ ಜನವರಿಯಲ್ಲಿ ಕಂಪನಿಯು ಬೆಲೆಯ ಹೆಚ್ಚಳದ ಬಗ್ಗೆ ಘೋಷಿಸಲಿದೆ. ಇನ್ಪುಟ್ ಮತ್ತು ಕಾರ್ಯಾಚರಣೆಯ ವೆಚ್ಚಗಳು ಹೆಚ್ಚಿರುವ ಕಾರಣ ಕಂಪನಿ ಬೆಲೆ ಏರಿಕೆಯನ್ನು ನಿರ್ಧರಿಸಿದೆ. ಟಾಟಾದ ಜೊತೆಗೆ ಇನ್ನಿತರ ವಾಹನ ತಯಾರಕ ಕಂಪನಿಗಳು ಕೂಡ ತನ್ನ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವ ಬಗ್ಗೆ ಯೋಜನೆ ಹೂಡಿದೆ. ಹೊಸ ವರ್ಷದಿಂದ ವಾಹನಗಳ ಬೆಲೆ ದುಬಾರಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೀಗಾಗಿ ಹೊಸ ವಾಹನವನ್ನು ಖರೀದಿಸುವವರು ಈ ವರ್ಷಾಂತ್ಯದಲ್ಲಿ ಖರೀದಿಸುವುದು ಉತ್ತಮ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in