Tata Curvv: ಅತೀ ಕಡಿಮೆ ಬೆಲೆಗೆ ಇನ್ನೊಂದು 5 ಸ್ಟಾರ್ ಕಾರ್ ಬಿಡುಗಡೆ ಮಾಡಿದ ಟಾಟಾ, 500 ಕೀ ಮೀ ಮೈಲೇಜ್.
500 km ರೇಂಜ್ ನೀಡುವ ಟಾಟಾ ಕಂಪನಿಯ ಹೊಸ ಕಾರ್ ಬಿಡುಗಡೆ.
Tata Curvv Car dETAILS: ಮಾರುಕಟ್ಟೆಯಲ್ಲಿ ಹೊಸ ಹೊಸ ಮಾದರಿಯ ಕಾರುಗಳು ಬಿಡುಗಡೆಯಾಗಿ ಹೊಸ ಛಾಪು ಮೂಡಿಸುತ್ತಿವೆ. ಭಾರತದಲ್ಲಿ ಟಾಟಾ (Tata) ಕಂಪನಿಯ ಕಾರುಗಳು ವಿಶೇಷ ಜನಪ್ರಿಯತೆ ಪಡೆದಿದೆ. ಟಾಟಾ ಕಂಪನಿಯ ಕಾರುಗಳು ಉತ್ತಮ ರೀತಿಯಲ್ಲಿ ಸೇಲ್ ಕಾಣುತ್ತಿದೆ. ಇದೀಗ ಟಾಟಾ ಕಂಪನಿಯಿಂದ ಹೊಸ ಕಾರು ಒಂದು ಬಿಡುಗಡೆಯಾಗಿದೆ.
ಭಾರತದಲ್ಲಿ ಟಾಟಾ ಜನಪ್ರಿಯ ವಾಹನ ತಯಾರಕ ಕಂಪನಿಯಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಹಲವು ಕಾರುಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದೆ ಮೊದಲ ಬಾರಿಗೆ ಟಾಟಾ ಕರ್ವ್ವ್ ಎಸ್ ಯು ವಿ ಸಂಚಾರ ನಡೆಸುದು ಕಂಡು ಬಂದಿದೆ ಎನ್ನಲಾಗುತ್ತಿದೆ.
ಟಾಟಾ ಕರ್ವ್ವ್ ಕಾರು
ಟಾಟಾ ಕರ್ವ್ವ್ ಕಾರಿನ ಸ್ಪೈ ಚಿತ್ರಗಳು ಇಂಟರ್ ನೆಟ್ ನಲ್ಲಿ ಕಾಣಿಸಿಕೊಂಡಿದ್ದು, ಮೇಲ್ನೋಟಕ್ಕೆ ಅತ್ಯಾಕರ್ಷಕ ವಿನ್ಯಾಸವನ್ನು ಹೊಂದಿರುವಂತೆ ಕಾಣಿಸುತ್ತಿದೆ. ಈ ಕಾರು ನವೀನ ಮಾದರಿಯ ಬಾನೆಟ್, ಹೆಡ್ ಲ್ಯಾಂಪ್ ಹಾಗು ಬಂಪರ್ ಅನ್ನು ಪಡೆದಿರುವಂತೆ ಕಾಣುತ್ತಿದ್ದು, ಹೊಸ ಶೈಲಿಯ ಅಲಾಯ್ ವೀಲ್ಸ್ ಅನ್ನು ಒಳಗೊಂಡಿರಬಹುದು. ಸದ್ಯಕ್ಕೆ ವಿನ್ಯಾಸ ಹಾಗು ವೈಶಿಷ್ಟ್ಯದ ಬಗ್ಗೆ ಕಂಪನಿಯಿಂದ ಅಧಿಕೃತ ಮಾಹಿತಿ ಇಲ್ಲ.
ಟಾಟಾ ಕರ್ವ್ವ್ ಕಾರಿನ ಬೆಲೆ
ಟಾಟಾ ಮೋಟಾರ್ಸ್ ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್ ಪೊದಲ್ಲಿ ಟಾಟಾ ಕರ್ವ್ವ್ ಕಾನ್ಸೆಪ್ಟ್ ಕಾರನ್ನು ಅನಾವರಣಗೊಳಿಸಿತ್ತು. ಅಂದಿನಿಂದ ದೊಡ್ಡಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ.
ಕಂಪನಿಯು ಈ ಕಾರನ್ನು ಇಂಧನ ಹಾಗು ಎಲೆಕ್ಟ್ರಿಕ್ ಚಾಲಿತ ಪವರ್ ಟ್ರೈನ್ ಆಯ್ಕೆಯಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಈ ಎಲೆಕ್ಟ್ರಿಕ್ ಕಾರು 500km ರೇಂಜ್ ನೀಡಲಿದೆಯಂತೆ.
ಇನ್ನು ಈ ಕಾರಿನ ಬೆಲೆ 20 ಲಕ್ಷ ಬೆಲೆಯನ್ನು ಹೊಂದಿರಬಹುದು. ಪೆಟ್ರೋಲ್ ಚಾಲಿತ ಕರ್ವ್ವ್ ರೂಪಾಯಿ 10.50 ಲಕ್ಷ ಅಂದಾಜು ಬೆಲೆಯಲ್ಲಿ 1.2 ಲೀಟರ್ ಪೆಟ್ರೋಲ್ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯಲಿದೆ.