ಮಾರುಕಟ್ಟೆಗೆ ಬಂತು ಒಮ್ಮೆ ಚಾರ್ಜ್ ಮಾಡಿದರೆ 300 km ಚಲಿಸುವ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರ್, ಬೆಲೆ ಎಷ್ಟು ನೋಡಿ.

ಸದ್ಯ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟು ಏರಿಕೆ ಆಗಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಹೌದು ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಣನೀಯವಾಗಿ ಏರಿಕೆಯನ್ನ ಕಂಡಿದ್ದು ಇದು ಜನರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಮಯದಲ್ಲಿ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಕೂಡ ಏರಿಕೆ ಆಗುತ್ತಲೇ ಇದ್ದು ಹಲವು ಎಲೆಕ್ಟ್ರಿಕ್ ವಾಹನಗಳನ್ನ ನಾವು ರಸ್ತೆಯ ಮೇಲೆ ಕಾಣಬಹುದಾಗಿದೆ. ಇನ್ನು ಕಾರ್ ಅಂದರೆ ಸಾಮನ್ಯವಾಗಿ ಎಲ್ಲರಿಗೂ ಇಷ್ಟ ಇದ್ದೆ ಇರುತ್ತದೆ ಮತ್ತು ಜೀವನದಲ್ಲಿ ಒಮ್ಮೆಯಾದರೂ ತಮಗೆ ಇಷ್ಟವಾದ ಕಾರ್ ಖರೀದಿ ಮಾಡಬೇಕು ಅನ್ನುವ ಅಸೆ ಸಾಮಾನ್ಯವಾಗಿ ಎಲ್ಲರಿಗೂ ಇದೆ ಎಂದು ಹೇಳಬಹುದು.

ಇನ್ನು ಈಗ ಕಾರ್ ಖರೀದಿ ಮಾಡುವ ಆಸೆ ಇದ್ದವರಿಗೆ ಬಂಪರ್ ಗೂಡ ನ್ಯೂಸ್ ಬಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಅತೀ ಕಡಿಮೆ ಬೆಲೆಗೆ 300 ಕಿಲೋ ಮೀಟರ್ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಕಾರನ್ನ ಟಾಟಾ ಕಂಪನಿ ಈಗ ಬಿಡುಗಡೆ ಮಾಡಿದ್ದು ಸದ್ಯ ಈ ಕಾರ್ ಟ್ರೆಂಡಿಂಗ್ ಸ್ಥಾನವನ್ನ ಪಡೆದುಕೊಂಡಿದೆ ಎಂದು ಹೇಳಬಹುದು. ಹಾಗಾದರೆ ಈ ಕಾರ್ ಯಾವುದು ಮತ್ತು ಈ ಕಾರಿನ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಕಾರಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

tata electrik car

ಹೌದು ಜನರಿಗೆ ಬಹಳ ಇಷ್ಟವಾಗುವ ರೀತಿಯಲ್ಲಿ ಟಾಟಾ ಕಂಪನಿ ಎಲೆಕ್ಟ್ರಿಕ್ ಕಾರಣ ಮಾರುಕಟ್ಟೆಗೆ ಪರಿಚಯಿಸಿದ್ದು ಈ ಸದ್ಯ ಈ ಕಾರ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಕಾರ ಅನಿಸಿಕೊಂಡಿದೆ. ಇನ್ನು ಈ ಕಾರಿಗೆ ಒಮ್ಮೆ ಚಾರ್ಜ್ ಮಾಡಿಸಿದರೆ ಸುಮಾರು 300 ಕಿಲೋ ಮೀಟರ್ ಗೂ ಅಧಿಕ ದೂಡ ಯಾವುದೇ ಸಮಸ್ಯೆ ಇಲ್ಲದೆ ಪ್ರಯಾಣವನ್ನ ಮಾಡಬಹುದಾಗಿದೆ. ಟಾಟಾ ಮೋಟಾರ್ಸ್‌ನ ಟಿಗೋರ್ ಇವಿ ಈಗ ಎಲೆಕ್ಟ್ರಿಕ್ ವಾಹನಗಳಲ್ಲಿ ಅತೀ ಕಡಿಮೆ ಬೆಲೆಯ ಕಾರ್ ಅನಿಸಿಕೊಂಡಿದೆ. ಈ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 300 ಕಿಲೋ ಮೀಟರ್ ತನಕ ಮೈಲೇಜ್ ಕೊಡುತ್ತದೆ ಮತ್ತು ಹಣದ ವಿಷಯದಲ್ಲಿ ಲೆಕ್ಕ ಹಾಕುವುದಾದರೆ 50 ಪೈಸೆ ಖರ್ಚಿನಲ್ಲಿ ಈ ಕಾರು ನಿಮಗೆ 1 ಕಿಮೀ ಮೈಲೇಜ್ ನೀಡುತ್ತದೆ.

ಇನ್ನು ಬೆಲೆಯಲ್ಲಿ ಕೂಡ ಈ ಕಾರಿನ ಬೆಲೆ ಬೆಲೆ ಕಡಿಮೆ ಎಂದು ಹೇಳಬಹುದು. ಹೌದು ಈ ಕಾರಿನ ಬೆಲೆ 12 ಲಕ್ಷ ರೂಪಾಯಿ ಆಗಿದ್ದು ಯಾವ ಕಾರಿಗೂ ಕಡಿಮೆ ಇಲ್ಲ ಅನ್ನುವ ಹಾಗೆ ಇದರ ಸಾಮರ್ಥ್ಯ. ಹವಾಮಾನಕ್ಕೆ ತಕ್ಕಂತೆ ಕಾರು IP67 ರೇಟೆಡ್ ಬ್ಯಾಟರಿ ಪ್ಯಾಕ್ ಮತ್ತು ಮೋಟರ್ ಅನ್ನು ಹೊಂದಿದೆ. ಕಾರನ್ನು 8 ವರ್ಷಗಳು, 160,000 ಕಿಮೀ ಬ್ಯಾಟರಿ ಮತ್ತು ಮೋಟಾರ್ ವಾರಂಟಿಯೊಂದಿಗೆ ನೀಡಲಾಗುತ್ತಿದೆ. ಇನ್ನು ಈ ಕಾರ್ ಉತ್ತಮ ಡ್ರೈವಿಂಗ್ ಡೈನಾಮಿಕ್ಸ್ ಮತ್ತು ವೇಗದ ನಿರ್ವಹಣೆಗಾಗಿ ಕಾರು ಸಮತೋಲಿತ ಸಸ್ಪೆನ್ಷನ್‌ನೊಂದಿಗೆ ಬರುತ್ತದೆ ಎಂದು ಟಾಟಾ ಹೇಳಿಕೊಂಡಿದೆ. ಸ್ನೇಹಿತರೆ ಈ ಎಲೆಕ್ಟ್ರಿಕ್ ಕಾರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

tata electrik car

Join Nadunudi News WhatsApp Group