Ads By Google

Tata Harrier: 2 ಲಕ್ಷ ಡೌನ್ ಪೇಮೆಂಟ್ ನಲ್ಲಿ ಟಾಟಾ ಹಾರಿಯರ್ ಖರೀದಿಸಿದರೆ ತಿಂಗಳ EMI ಎಷ್ಟು…? ಇಲ್ಲಿದೆ ಡೀಟೇಲ್ಸ್

Tata Harrier Price And Feature

Image Credit: Original Source

Ads By Google

Tata Harrier EMI Details: ಭಾರತೀಯ ಆಟೋ ವಲಯದಲ್ಲಿ TATA ಕಂಪನಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕಂಪನಿಯು ಅತ್ಯಾಧುನಿಕ ಫೀಚರ್ ಇರುವಂತಹ ಹಲವು ಮಾದರಿಯ SUV ಗಳನ್ನೂ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ Tata Harrier ಮಾದರಿಯು ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ.

ಇನ್ನು ಕಂಪನಿಯು ಈ ಕಾರನ್ನು ಮಧ್ಯಮ ವರ್ಗದವರು ಖರೀದಿಸಲಿ ಎನ್ನುವ ಉದ್ದೇಶದಿಂದ ಆಕರ್ಷಕ ಹಣಕಾಸು ಯೋಜನೆಯನ್ನು ಕೂಡ ಪರಿಚಯಿಸಿದೆ. ನೀವು ಕಡಿಮೆ EMI ನೊಂದಿಗೆ ಜನಪ್ರಿಯ ಟಾಟಾ ಹ್ಯಾರಿಯರ್ ಮಾದರಿಯನ್ನು ನಿಮ್ಮ ಮನೆಗೆ ಕೊಂಡೊಯ್ಯಬಹುದು. ಇದೀಗ ನಾವು ಟಾಟಾ ಹ್ಯಾರಿಯರ್ ಮಾದರಿಯ EMI ಎಷ್ಟು…? ಆನ್ ರೋಡ್ ಬೆಲೆ ಎಷ್ಟಿದೆ..? ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Image Credit: Cardekho

ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಟಾಟಾ ಹ್ಯಾರಿಯರ್ ಮಾದರಿಯ EMI ಎಷ್ಟಿರಲಿದೆ…?
ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಟಾಟಾ ಹ್ಯಾರಿಯರ್ ಆವೃತ್ತಿಯು ಮಾರುಕಟ್ಟೆಯನ್ನು ಪ್ರವೇಶಿಸಿದ್ದು, Hyundai Creta and Kia Seltos, MG Hector SUV ಗಳ ಜೊತೆ ನೇರ ಸ್ಪರ್ಧೆಗಿಳಿಯಲಿದೆ. ಇನ್ನು Tata ಹ್ಯಾರಿಯರ್ SUV ನ ಆರಂಭಿಕ ಬೆಲೆ ರೂ.15,49,000 ಎಕ್ಸ್ ಶೋರೂಂ ಆಗಿದ್ದು, ಆನ್ ರೋಡ್ ಬೆಲೆ ರೂ.19,54,782 ಆಗಿದೆ.

ಈ ಕಾರಿನ ಕಡಿಮೆ ವೇರಿಯಂಟ್ ಮಾಡೆಲ್‌ ಗಾಗಿ 9.8% ಬಡ್ಡಿ ದರದಲ್ಲಿ ಐದು ವರ್ಷಗಳ ಸಾಲವನ್ನು ಪಡೆದುಕೊಳ್ಳಬಹುದು. ನೀವು ಪ್ರತಿ ತಿಂಗಳು ರೂ. 37,217 ರ EMI ಅನ್ನು ಪಾವತಿಸುತ್ತ ಸಾಲದ ಮರುಪಾವತಿಯನ್ನು ಮಾಡಬಹುದು. ಇನ್ನು ಈ ಟಾಟಾ ಹ್ಯಾರಿಯರ್ ಎಸ್‌ಯುವಿಯ ಡೌನ್ ಪೇಮೆಂಟ್ ಅಂದಾಜು ರೂ.1,95,000 ಆಗಿದೆ. ಕಡಿಮೆ ಡೌನ್ ಪೇಮೆಂಟ್ ಹಾಗೂ ಕಡಿಮೆ EMI ನೊಂದಿಗೆ ನೀವು ಈ ಜನಪ್ರಿಯ ಮಾದರಿಯನ್ನು ನಿಮ್ಮದಾಗಿಸಿಕೊಳ್ಳಬಹುದು.

Image Credit: Cardekho

ಟಾಟಾ ಹ್ಯಾರಿಯರ್ ನ ವೈಶಿಷ್ಟ್ಯಗಳೇನು…?
ಟಾಟಾ ಹ್ಯಾರಿಯರ್ SUV ಹೊಸ ಗ್ರಿಲ್, ಸ್ಪ್ಲಿಟ್ ಹೆಡ್‌ ಲೈಟ್‌ ಗಳನ್ನು ಒಳಗೊಂಡಂತೆ ಮುಂಭಾಗದಲ್ಲಿ ಹಲವಾರು ನವೀಕರಣಗಳನ್ನು ಪಡೆದುಕೊಂಡಿದೆ. ಅಲ್ಲದೆ, ಗ್ರಿಲ್‌ ನ ಮೇಲ್ಭಾಗವು ಪೂರ್ಣ-ಅಗಲದ ಎಲ್ಇಡಿ ಲೈಟ್ ಬಾರ್ ಅನ್ನು ಹೊಂದಿದೆ. ಇದರೊಂದಿಗೆ, ಬಂಪರ್ ಕೂಡ ಹೊಸದಾಗಿದೆ, ಆದರೆ ಹ್ಯಾರಿಯರ್ ಫೇಸ್‌ ಲಿಫ್ಟ್‌ ನ ಸೈಡ್ ಪ್ರೊಫೈಲ್ ಹೆಚ್ಚು ಬದಲಾಗಿಲ್ಲ. ಇದು 18 ಮತ್ತು 19 ಇಂಚಿನ ಮಿಶ್ರಲೋಹದ ಚಕ್ರಗಳನ್ನು ಹೊಂದಿದೆ.

ಟಾಟಾ ಹ್ಯಾರಿಯರ್ ಫೇಸ್‌ ಲಿಫ್ಟ್‌ ನ ಒಳಭಾಗವು ಹಲವು ಬದಲಾವಣೆಗಳನ್ನು ಕಂಡಿದೆ. 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟಾಟಾ ಲೋಗೋದೊಂದಿಗೆ ಹೊಸ 4-ಸ್ಪೋಕ್ ಸ್ಟೀರಿಂಗ್ ವೀಲ್, ಇದರೊಂದಿಗೆ, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, 10-ಸ್ಪೀಕರ್ JBL-ಟ್ಯೂನ್ಡ್ ಸೌಂಡ್ ಸಿಸ್ಟಮ್, 360-ಡಿಗ್ರಿ ಕ್ಯಾಮೆರಾ, ಸನ್‌ ರೂಫ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ನೋಡಬಹುದು.

Image Credit: Carwale
Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in