Tata Discount Car: ಕಾರು ಖರೀದಿಸಲು ಇದು ಉತ್ತಮ ಸಮಯ, ಭರ್ಜರಿ ಡೈಕೌಂಟ್ ಘೋಷಣೆ ಮಾಡಿದ ಟಾಟಾ.
Tata Discount Offer For Cars: ಇದೀಗ ಕಾರು ಖರೀದಿಸುವವರಿಗೆ ಹೊಸ ಸುದ್ದಿ. ಅಟೋಮೊಬೈಲ್ ದೈತ್ಯ ಟಾಟಾ (Tata) ಇದೀಗ ಮಾದರಿಗಳ ಮೇಲೆ ಭಾರಿ ಕೊಡುಗೆಗಳನ್ನು ನೀಡುತ್ತಿದೆ.
ಕಂಪನಿಯು 2022 ಮತ್ತು 2023 ರಲ್ಲಿ ತಯಾರಾದ ಟಾಟಾ ಹ್ಯಾರಿಯರ್ ಸಫಾರಿ ಅಲ್ಟ್ರಾಜ್ ಮತ್ತು ಟಿಯಾಗೋ ಮಾದರಿಗಳ ಮೇಲೆ ನಗದು ರಿಯಾಯಿತಿ ಮತ್ತು ವಿನಿಮಯ ಬೋನಸ್ ಅನ್ನು ನೀಡುತ್ತಿದೆ ಎಂದು ಘೋಷಿಸಿದೆ. ಮಾರ್ಚ್ ತಿಂಗಳಲ್ಲಿ ಸೀಮಿತ ಅವಧಿಗೆ ಲಭ್ಯವಿರುವ ವಿವಿಧ ಕೊಡುಗೆಗಳ ವಿವರಗಳು ಈಗ ಚಾಲ್ತಿಯಲ್ಲಿವೆ.
ಅಟೋಮೊಬೈಲ್ ಟಾಟಾ ಕಾರಿನ ರೂಪಾಂತರಗಳು
ಟಾಟಾ ಅಲ್ಟ್ರಾಜ್ 2023 ಪೆಟ್ರೋಲ್ ಮತ್ತು ಡೀಸೆಲ್ ರೂಪಾಂತರಗಳು ರೂಪಾಯಿ 25,000 ವರೆಗೆ ರಿಯಾಯಿತಿ ಲಭ್ಯವಿದೆ.
ಈ ಪ್ರೀಮಿಯಂ ಹ್ಯಾಚ್ ಬ್ಯಾಕ್ ನ ಸ್ವಯಂ ಚಾಲಿತ ರೂಪಾಂತರದ ಮೇಲೆ ರೂಪಾಯಿ 25,000 ವರೆಗೆ ರಿಯಾಯಿತಿ ಇದೆ. 2022 ಸ್ಟಾಕ್ ಪೆಟ್ರೋಲ್ ರೂಪಾಂತರಗಳ ಮೇಲೆ ರೂಪಾಯಿ 20,000 ಮತ್ತು ಡೀಸೆಲ್ ರೂಪಾಂತರದ ಮೇಲೆ ರೂಪಾಯಿ 35,000 ವರೆಗೆ ರಿಯಾಯಿತಿಯನ್ನು ಪಡೆಯಬಹುದು.
ಅಟೋಮೊಬೈಲ್ ಟಾಟಾ ಕಾರಿನ ಬೆಲೆ ಮತ್ತಿ ವೈಶಿಷ್ಟ್ಯತೆ
2022 DCA ಪೆಟ್ರೋಲ್ ಆಟೋಮ್ಯಾಟಿಕ್ altroz ಮಾದರಿಯು ರೂಪಾಯಿ. 30,000 ರಿಯಾಯಿತಿಯೊಂದಿಗೆ ಬರುತ್ತಿದೆ. ಟಾಟಾ ಅಲ್ಟ್ರಾಜ್ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಬಲೆನೊ ಹುಂಡೈ ಐ 20 ಮತ್ತು ಟೊಯಾಟಾ ಮಾದರಿಗಳೊಂದಿಗೆ ಸ್ಪರ್ಧಿಸುತ್ತದೆ.
ಟಾಟಾ ಮೋಟಾರ್ಸ್ ಇತ್ತೀಚಿನ ಟಿಯಾಗೋ ಹ್ಯಾಚ್ ಬ್ಯಾಕ್ ಸಿ ಏನ್ ಜಿ ರೂಪಾಂತರದ ಮೇಲೆ ರೂಪಾಯಿ 30 ಸಾವಿರದವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಪೆಟ್ರೋಲ್ ರೂಪಾಂತರದ ಮೇಲೆ 25,000 ರೂ. ಗಳ ರಿಯಾಯಿತಿ ಲಭ್ಯವಿದೆ. ಕಂಪನಿಯು 2022 ರ ಕಾರುಗಳ ಮೇಲೆ ರೂಪಾಯಿ 40,000 ವರೆಗೆ ರಿಯಾಯಿತಿಗಳನ್ನು ನೀಡುತ್ತಿದೆ.