Tata Indica Car: ಭಾರತದಲ್ಲಿ ಬಿಡುಗಡೆಯಾದ ಅತಿ ಚಿಕ್ಕ ಕಾರು, ವಿಶೇಷತೆ ನೋಡಿ ಮನಸೋತ ಗ್ರಾಹಕರು.

Tata Indica Small Car Price And Review: ಇದೀಗ ಭಾರತದಲ್ಲಿ ಹೊಸ ರೀತಿಯ ಕಾರು ಒಂದು ಬಿಡುಗಡೆಯಾಗಿದೆ. ಭಾರತದಲ್ಲಿ ಕ್ರಿಯೇಟಿವಿಟಿಗೆ ಕೊರತೆಯೇನಿಲ್ಲ. ಇದು ಯಾವ ವಿಷಯದಲ್ಲಿಯೇ ಆಗಲಿ ಕ್ರಿಯೇಟಿವಿಟಿಯಲ್ಲಿ ಭಾರತೀಯರದ್ದು ಎತ್ತಿದ ಕೈ ಎನ್ನಬಹುದು.

ಈ ಉದಾಹರಣೆಗೆ ಇದೀಗ ಭಾರತದಲ್ಲಿ ಹೊಸ ಕಾರು ಒಂದು ಬಿಡುಗಡೆ ಆಗಿದೆ. ಟಾಟಾ ಇಂಡಿಕಾ (Tata Indica) ಕಾರನ್ನು ಮಾರ್ಪಾಡು ಮಾಡಿ ದೇಶವಷ್ಟೇ ಅಲ್ಲ ವಿಶ್ವದ ಅತಿ ಚಿಕ್ಕ ಕಾರನ್ನಾಗಿ ಮಾಡಲಾಗಿದೆ.

Tata Indica Small Car Price And Review
Image Source: India Today

ಭಾರತದಲ್ಲಿ ಬಿಡುಗಡೆಯಾದ ಅತಿ ಚಿಕ್ಕ ಕಾರು
ಈ ಕಾರಿನ ವಿಶೇಷತೆ ತುಂಬಾ ಇದೆ ಎನ್ನಬಹುದು. ವಿಶ್ವದ ಅತಿ ಚಿಕ್ಕ ಕಾರು ಎಂದು ಹೆಸರು ಪಡೆದುಕೊಂಡಿರುವ ಈ ಕಾರಿನ ವಿಶೇಷತೆ ವಿಶೇಷವಾಗಿದೆ. ಈ ಎರಡು ಬಾಗಿಲಿನ ಟಾಟಾ ಇಂಡಿಕಾದ ವಿಡಿಯೋವನ್ನು ವಾಸಿಂ ಕ್ರಿಯೇಷನ್ಸ್ ಹೆಸರಿನ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ.

ಕಾರಿನ ಸಂಪೂರ್ಣ ಮಾರ್ಪಾಡು ಪ್ರಕ್ರಿಯೆಯನ್ನು ಈ ವೀಡಿಯೊದಲ್ಲಿ ತೋರಿಸಲಾಗಿದೆ. ಆರಂಭದಲ್ಲಿ ಈ ಕಾರು 5 ಆಸನಗಳ ಟಾಟಾ ಇಂಡಿಕಾ ಆಗಿತ್ತು. ನಂತರ, ಕಾರನ್ನು ಕತ್ತರಿಸಿ ಬೆಸುಗೆ ಹಾಕಲಾಗುತ್ತದೆ. ಮಾರ್ಪಡಿಸಿದ ನಂತರ ಕಾರಿನ ಉದ್ದವು 8 ಅಡಿಗಳಷ್ಟಿದೆ ಅಂದರೆ ಮೂಲ ಗ್ರಾತಕ್ಕಿಂತ 3.5 ಅಡಿಯಷ್ಟು ಈ ಕಾರು ಚಿಕ್ಕದಾಗಿದೆ.

Tata Indica Small Car Price And Review
Image Source: Times Of India

ಈ ಕಾರಿನ ವಿಶೇಷತೆ
ಹಿಂಬದಿಯ ಬಾಗಿಲನ್ನು ತೆಗೆದು ಬಿ ಪಿಲ್ಲರ್ ಗೆ ಹಿಂಬದಿಯ ಭಾಗವನ್ನು ವೆಲ್ಡ್ ಮಾಡಿ ಕಾರನ್ನು ಚಿಕ್ಕದಾಗಿಸಿರುವುದನ್ನು ನೋಡಬಹುದು. ವಿಶೇಷವೇನೆಂದರೆ ಬಂಪರ್ ಗಳನ್ನೂ ಬದಲಾಯಿಸದೆ, ದುರಸ್ತಿಗೊಳಿಸಿ ಮರು ಅಳವಡಿಸಲಾಗಿದೆ. ನಂತರ ಕಾರನ್ನು ಸಿದ್ದಪಡಿಸಿದ ಬಾಡಿವರ್ಕ್ ನೊಂದಿಗೆ ತೋರಿಸಲಾಗುತ್ತದೆ.

Join Nadunudi News WhatsApp Group

ಕಾರ್ ಸೆಡ್ ಪ್ಲೆರ್ ಗಳು ಮತ್ತು ಮುಂಭಾಗ ಮತ್ತು ಹಿಂಭಾಗದ ಬಂಪರ್ ಗಳಿಗೆ ಮ್ಯಾಟ್ ಬ್ಲಾಕ್ ಬಣ್ಣವನ್ನು ನೀಡಲಾಗಿದೆ.

Tata Indica Small Car Price And Review
Image Source: India Today

Join Nadunudi News WhatsApp Group