Tata Magic EV: 140 Km ಮೈಲೇಜ್ ಕೊಡುವ 10 ಆಸನಗಳನ್ನ ಹೊಂದಿರುವ ಮ್ಯಾಜಿಕ್ ಕಾರ್ ಲಾಂಚ್ ಮಾಡಿದ ಟಾಟಾ, ಕಡಿಮೆ ಬೆಲೆ.
10 ಆಸನಗಳ ಹೊಸ ಟಾಟಾ ಮ್ಯಾಜಿಕ್ ಎಲೆಕ್ಟ್ರಿಕ್ ವಾಹನಕ್ಕೆ ಜನರು ಫಿದಾ ಆಗಿದ್ದಾರೆ.
Tata Magic Electric Car: ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಎಲೆಕ್ಟ್ರಿಕ್ ವಾಹನಗಳು ಪರಿಚಯವಾಗುತ್ತಿದೆ. ಇತ್ತೀಚೆಗಂತೂ ವಿವಿಧ ಪ್ರತಿಷ್ಠಿತ ಕಾರ್ ತಯಾರಕ ಕಂಪನಿಗಳು ಸೇರಿದಂತೆ ವಿವಿಧ ಸ್ಟಾರ್ಟ್ ಅಪ್ ಕಂಪೆನಿಗಳು ಕೂಡ ಮಾರುಕಟ್ಟೆಗೆ ಎಲೆಕ್ಟ್ರಿಕ್ ರೂಪಾಂತರವನ್ನೇ ಪರಿಚಯಿಸುತ್ತಿವೆ. ಇನ್ನು ಕೆಲವು ಕಂಪನಿಗಳು ತನ್ನ ಹಳೆಯ ಮಾದರಿಯ ಕಾರನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಕೂಡ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ.
ಇದೀಗ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ (Tata) ಹೊಸ ಸಂಚಲನ ಸೃಷ್ಟಿಸಲು ಹೆಚ್ಚು ಆಸನಗಳಿರುವ ಹೊಸ ಎಲೆಕ್ಟ್ರಿಕ್ ಇವಿಯನ್ನು ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸಿಕೊಂಡಿದೆ. 2023 ರ ಆಟೋ ಎಕ್ಸ್ಪೋದಲ್ಲಿ ಟಾಟಾ ಹೊಸ ಎಲೆಕ್ಟ್ರಿಕ್ ಇವಿಯನ್ನು ಪರಿಚಯಿಸಿದೆ. ಟಾಟಾದ ಈ ಹೊಸ ಎಲೆಕ್ಟ್ರಿಕ್ ಕಾರ್ ನಲ್ಲಿ ವಿಭಿನ್ನ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ಟಾಟಾ ಮ್ಯಾಜಿಕ್ ಎಲೆಕ್ಟ್ರಿಕ್ ಕಾರ್ ಲಾಂಚ್ (Tata Magic Electric Car)
ಟಾಟಾ ಇದೀಗ ಹೊಸ ಮ್ಯಾಜಿಕ್ ಎಲೆಕ್ಟ್ರಿಕ್ ಕಾರ್ ಲಾಂಚ್ ಮಾಡಿದೆ. ಈ ಕಾರ್ ನಲ್ಲಿ ವಿಶೇಷವಾಗಿ 10 ಆಸನಗಳನ್ನು ಅಳವಡಿಸಲಾಗಿದೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 7 ಆಸನಗಳಿರುವ ಕಾರ್ ಗಳು ಲಭ್ಯವಿದ್ದವು.
ಇದೀಗ ಮಾರುತಿ 7 ಸೀಟರ್ ಕಾರುಗಳಿಗೆ ಪೈಪೋಟಿ ನೀಡಲು ಟಾಟಾ ಇದೀಗ ಹೊಸ 10 ಆಸನದ ಮ್ಯಾಜಿಕ್ ಎಲೆಕ್ಟ್ರಿಕ್ ಕಾರ್ ಲಾಂಚ್ ಮಾಡಿದೆ. ಇನ್ನು ಮ್ಯಾಜಿಕ್ ಎಲೆಕ್ಟ್ರಿಕ್ ಕಾರ್ ಬಿಡುಗಡೆಯ ಬಗ್ಗೆ ಕಂಪನಿಯು ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಸದ್ಯದಲ್ಲೇ ಈ ಕಾರ್ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ ಎನ್ನುವ ಬಗ್ಗೆ ಮಾಹಿತಿ ಲಭಿಸಿದೆ.
40 Km ಮೈಲೇಜ್ ಕೊಡುವ 10 ಆಸನಗಳನ್ನ ಹೊಂದಿರುವ ಮ್ಯಾಜಿಕ್ ಕಾರ್
ನೂತನ ಟಾಟಾ ಮ್ಯಾಜಿಕ್ ಎಲೆಕ್ಟ್ರಿಕ್ ಕಾರ್ 3,790 ಎಂಎಂ ಉದ್ದ ಮತ್ತು 1,500 ಎಂಎಂ ಅಗಲಹಾಗು ವೀಲ್ ಬೇಸ್ 2100 ಎಂಎಂ ಉದ್ದವನ್ನು ಹೊಂದಿದೆ. ಈ ನೂತನ 10 ಆಸನದ ಎಲೆಕ್ಟ್ರಿಕ್ ಕಾರ್ ನಲ್ಲಿ 14 ರಿಂದ 20 ಕಿಲೋವ್ಯಾಟ್ ಗಂಟೆಯ ಬ್ಯಾಟರಿ ಪಾಕ್ ಅನ್ನು ಅಳವಡಿಸಲಾಗಿದೆ.
ಇನ್ನು ಇದನ್ನು ಸಾಮಾನ್ಯ ಚಾರ್ಜರ್ ನ ಮೂಲಕ 6 ಗಂಟೆಗಳಲ್ಲಿ ಹಾಗೂ ವೇಗದ ಚಾರ್ಜರ್ ನ ಮೂಲಕ ಕೇವಲ 2 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹುದಾಗಿದೆ. ಈ ಎಲೆಕ್ಟ್ರಿಕ್ ರೂಪಾಂತರವು ಒಂದೇ ಚಾರ್ಜ್ ನಲ್ಲಿ ಬರೋಬ್ಬರಿ 140 ಕಿಲೋಮೀಟರ್ ಮೈಲೇಜ್ ನೀಡಲಿದೆ.