Tata Motors: ಟಾಟಾ ಕಾರ್ ಖರೀದಿಸುವವರಿಗೆ ಬೇಸರದ ಸುದ್ದಿ, ಜನಪ್ರಿಯ ಕಾರನ್ನು ಬಂದ್ ಮಾಡಿದ ಟಾಟಾ.

ಜನಪ್ರಿಯ ಕಾರುಗಳ ರೂಪಾಂತರನ್ನು ಕೈಬಿಟ್ಟ ಟಾಟಾ ಮೋಟಾರ್ಸ್, ಗ್ರಾಹಕರಿಗೆ ಬೇಸರ.

Tata Motors Car: ಭಾರತದಲ್ಲಿ ಟಾಟಾ (Tata) ಕಂಪನಿಯಿಂದ ವಿವಿಧ ಬಗೆಯ ವಾಹನಗಳು ಬಿಡುಗಡೆಯಾಗಿದೆ. ಕೈಗೆಟಕುವ ಬೆಲೆಯಲ್ಲಿ ಟಾಟಾ ಕಂಪನಿ ತನ್ನ ಮಾದರಿ ಕಾರುಗಳನ್ನು ಬಿಡುಗಡೆ ಮಾಡಿದೆ. ಟಾಟಾ ಮೋಟಾರ್ಸ್ ಕಾರುಗಳನ್ನು ಜನರು ಹೆಚ್ಚು ಖರೀದಿ ಮಾಡುತ್ತಾರೆ. ಗ್ರಾಹಕರಿಗೆ ಅನುಗುಣವಾಗುವ ರೀತಿಯಲ್ಲಿ ಟಾಟಾ ತನ್ನ ಕಾರುಗಳನ್ನು ಬಿಡುಗಡೆ ಮಾಡುತ್ತದೆ.

ಸದ್ಯ ಟಾಟಾ ಕಾರು ಈಗ ತನ್ನ ಜನಪ್ರಿಯ ಕಾರಿನ ಒಂದು ರೂಪಾಂತರವನ್ನ ನಿಲ್ಲಿಸಲು ಮುಂದಾಗಿದ್ದು ಇದು ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ, ಆದರೆ ಇದಕ್ಕೆ ಕಾರಣ ಏನು ಎನ್ನುವುದನ್ನು ಕಂಪನಿ ಇನ್ನು ಬಹಿರಂಗಪಡಿಸಿಲ್ಲ.

tata motors car latest news
Image Credit: Rushlane

ಜನಪ್ರಿಯ ಕಾರುಗಳ ರೂಪಾಂತರನ್ನು ಕೈಬಿಟ್ಟ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ಅಲ್ಟ್ರೋಜ್ ಟ್ರಿಮ್‌ನಲ್ಲಿ XZ ಪ್ಲಸ್ ಪೆಟ್ರೋಲ್, XZ ಪ್ಲಸ್ ಪೆಟ್ರೋಲ್ ಡಾರ್ಕ್ ಎಡಿಷನ್, XZ ಪ್ಲಸ್ ಐಟರ್ಬೊ, XZ ಪ್ಲಸ್ ಐಟರ್ಬೊ ಪೆಟ್ರೋಲ್ ಡಾರ್ಕ್ ಎಡಿಷನ್, XZA ಪ್ಲಸ್ ಪೆಟ್ರೋಲ್, XZA ಪ್ಲಸ್ ಪೆಟ್ರೋಲ್ ಡಾರ್ಕ್ ಕಾರ್ ಗಳನ್ನೂ ಕೈಬಿಟ್ಟಿದೆ ಎನ್ನಲಾಗುತ್ತಿದೆ.

XZ ಪ್ಲಸ್ ಡೀಸೆಲ್ ಮತ್ತು XZ ಪ್ಲಸ್ ಡೀಸೆಲ್ ಡಾರ್ಕ್ ಎಡಿಷನ್ ಕಾರು ಸಹ ಆ ಪಟ್ಟಿಯಲ್ಲಿ ಸೇರಿದೆ ಎನ್ನಲಾಗುತ್ತಿದೆ. ಕಳೆದ ವರ್ಷವೂ ಟಾಟಾ ಕಂಪನಿ ಅಲ್ಟ್ರಾಜ್ ಕಾರಿನ XE XZ ಡಾರ್ಕ್ XZ ಡೀಸೆಲ್ ಹಾಗು XZA ಪೆಟ್ರೋಲ್ ರೂಪಾಂತರಗಳನ್ನು ಮಾರಾಟದಿಂದ ಸ್ಥಗಿತಗೊಳಿಸಿತ್ತು. ಆಗಲೂ ಯಾವುದೇ ಕಾರಣವನ್ನು ನೀಡಿರಲಿಲ್ಲ.

tata motors car latest news
Image Credit: Carwale

ಒಂದಷ್ಟು ವಿತರಕರು, ವರ್ಷದಿಂದ ವರ್ಷಕ್ಕೆ ಅಲ್ಟ್ರೋಜ್ ಬೇಡಿಕೆ ಕಡಿಮೆಯಾಗುತ್ತಿದೆ ಎಂದು ಹೇಳಿದ್ದರು. ಜೊತೆಗೆ, ಎಸ್‌ಯುವಿಗಳಿಗೆ ಡಿಮ್ಯಾಂಡ್ ಹೆಚ್ಚಾಗುತ್ತಿದ್ದು, ಅಲ್ಟ್ರೋಜ್ ಹ್ಯಾಚ್‌ ಬ್ಯಾಕ್ ಖರೀದಿಯತ್ತ ಗ್ರಾಹಕರಿಗೆ ಆಸಕ್ತಿ ಕಡಿಮೆಯಾಗಿದೆ ಎಂದು ಆಟೋಮೊಬೈಲ್ ತಜ್ಞರು ಅಂದಾಜಿಸಿದ್ದರು. ಇದಕ್ಕೆಲ್ಲ ಸೆಡ್ಡು ಹೊಡೆಯುವಂತೆ ಟಾಟಾ, ಇದೇ ವರ್ಷದ ಮೇ ತಿಂಗಳಲ್ಲಿ ಅಲ್ಟ್ರೋಜ್ iCNG ಆವೃತ್ತಿಯನ್ನು ಬಿಡುಗಡೆ ಮಾಡಿತ್ತು.

Join Nadunudi News WhatsApp Group

Join Nadunudi News WhatsApp Group