Nano EV: ಕೇವಲ 5 ಲಕ್ಷದಲ್ಲಿ ಲಭ್ಯವಾಗಲಿದೆ 300km ಮೈಲೇಜ್ ನೀಡುವ ಟಾಟಾ ಎಲೆಕ್ಟ್ರಿಕ್ ಕಾರ್.
ಸಿಂಗಲ್ ಚಾರ್ಜ್ ನಲ್ಲಿ 300 ಕಿಲೋಮೀಟರ್ ಮೈಲೇಜ್ ನೀಡುವ Electric Car.
Tata Nano Electric Car: ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ವಾಹನ ತಯಾರಕ ಕಂಪನಿಗಳು Electric ಮಾದರಿಯನ್ನು ಪರಿಚಯಿಸುತ್ತಿವೆ. ಸದ್ಯ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ TATA ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ.
ಕಂಪನಿಯು ಈಗಾಗಲೇ ತನ್ನ ನೂತನ ಮಾದರಿಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಬಹಿರಂಗಪಡಿಸಿದೆ. ಇನ್ನು ಸದ್ಯದಲ್ಲೇ ಟಾಟಾ ಬಿಡುಗಡೆಗೊಳಿಸುತ್ತಿರುವ ಎಲೆಕ್ಟ್ರಿಕ್ Tata Nano Electric ರೂಪಾಂತರವಾಗಿದೆ. ಟಾಟಾದ ಈ ನೂತನ ಮಾದರಿ ಇತರ ಎಲೆಕ್ಟ್ರಿಕ್ ಕಾರ್ ಗಳಿಗೆ ಪೈಪೋಟಿ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.
Tata Nano Electric Car
TATA ಶೀಘ್ರದಲ್ಲೇ ತನ್ನ Nano Electric ರೂಪಾಂತರವನ್ನು ಬಿಡುಗಡೆಗೊಳಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ. ಟಾಟಾ ನ್ಯಾನೋ ಎಲೆಕ್ಟ್ರಿಕ್ ರೂಪಾಂತರದಲ್ಲಿ ಶಕ್ತಿಯುತ ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ. ಈ ಕಾರ್ ನಲ್ಲಿ ಸ್ಮಾರ್ಟ್ ಮತ್ತು ಅಡ್ವಾನ್ಸ್ ಫೀಚರ್ ಲಭ್ಯವಿದೆ. ಟಾಟಾ ನ್ಯಾನೋ EV 17 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 300 ಕಿಲೋಮೀಟರ್ ಗಳವರೆಗೆ ದೂರವನ್ನು ಕ್ರಮಿಸುತ್ತದೆ. ಕಾರಿನ ಗರಿಷ್ಠ ವೇಗ ಗಂಟೆಗೆ 80 ಕಿಲೋಮೀಟರ್ ಆಗಿದೆ.
ಕೇವಲ 5 ಲಕ್ಷದಲ್ಲಿ ಲಭ್ಯವಾಗಲಿದೆ 300km ಮೈಲೇಜ್ ಕಾರ್
ಟಾಟಾ ನ್ಯಾನೋ EV 40 kW ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದೆ, ಇದು 0 ರಿಂದ 100 kmph ವೇಗವನ್ನು ಹೆಚ್ಚಿಸಲು 10 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಟಾಟಾ ನ್ಯಾನೋ EVಯು Air conditioning, power steering, airbags and anti-lock braking system ಸೇರಿದಂತೆ ಹಲವು ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.
ಇನ್ನು ಸಿಂಗಲ್ ಚಾರ್ಜ್ ನಲ್ಲಿ 300 ಕಿಲೋಮೀಟರ್ ಮೈಲೇಜ್ ನೀಡುವ ಈ Nano EV ಮಾರುಕಟ್ಟೆಯಲ್ಲಿ 5 ಲಕ್ಷ ಬೆಲೆಯಿಂದ ಲಭ್ಯವಾಗಲಿದೆ. Nano EV ಕಡಿಮೆ ಬೆಲೆ ಮತ್ತು ದೀರ್ಘ ಶ್ರೇಣಿಯ ರೂಪಾಂತರವಾದ ಕಾರಣ ಗ್ರಾಹಕರಿಗೆ ಹೆಚ್ಚು ಇಷ್ಟವಾಗಲಿದೆ. ಇನ್ನು 2023 ರ ಅಂತ್ಯದ ವೇಳೆಗೆ ಮಾರುಕಟ್ಟೆಗೆ ಬರಲಿದೆ ಎನ್ನುವ ಬಗ್ಗೆ ಕಂಪನಿಯು ಅಧಿಕೃತ ಘೋಷಣೆ ಹೊರಡಿಸಿದೆ.