Tata: 250 ಕಿಲೋ ಮೀಟರ್ ಮೈಲೇಜ್ ಮತ್ತು 3 ಲಕ್ಷಕ್ಕೂ ಕಡಿಮೆ ಬೆಲೆ, ಬಂತು ಇನ್ನೊಂದು ಟಾಟಾ ಕಾರ್.
250 ಕಿಲೋ ಮೀಟರ್ ಮೈಲೇಜ್ ಕೊಡುವ ಕಾರ್ ಲಾಂಚ್ ಮಾಡಲು ಮುಂದಾದ ಟಾಟಾ.
Tata Electric: ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ (Tata Motors) ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ. ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಇತ್ತೀಚೆಗಂತೂ ಕಚ್ಚಾ ತೈಲಗಳ ಬೆಲೆ ಏರಿಕೆಯಾಗುತ್ತಿದೆ. ಕಚ್ಚಾ ತೈಲಗಳ ಬೆಲೆಯ ಏರಿಕೆಯ ಕಾರಣ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಿದ್ದಾರೆ.
ಇದೀಗ ಭಾರತೀಯ ಮಾರುಕಟ್ಟೆಗೆ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರ್ ಬಿಡುಗಡೆಗೆ ಸಜ್ಜಾಗಿದೆ. ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಇತರ ಎಲೆರ್ಕ್ಟ್ರಿಕ್ ಕಾರ್ ಗಳಿಗೆ ಪೈಪೋಟಿ ನೀಡಲು ಹೊಸ ವಿನ್ಯಾಸದ ಕಾರ್ ಅನ್ನು ಪರಿಚಯಿಸಲಿದೆ.
ಟಾಟಾ ನ್ಯಾನೋ ಎಲೆಕ್ಟ್ರಿಕ್
ಪೆಟ್ರೋಲ್ ಡೀಸೆಲ್ ಬೆಲೆಯ ಏರಿಕೆಯ ಕಾರಣದಿಂದಾಗಿ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ಹಾಗೂ ಸಿಎನ್ ಜಿ ಕಾರ್ ಖರೀದಿಯತ್ತ ಗಮನ ಹರಿಸುತ್ತಿದ್ದಾರೆ. ಇನ್ನು ದೇಶದ ಪ್ರತಿಷ್ಠಿತ ಕಂಪನಿಯಾಗಿರುವ ಟಾಟಾ ಶೀಘ್ರದಲ್ಲೇ ತನ್ನ ನ್ಯಾನೋ ಎಲೆಕ್ಟ್ರಿಕ್ ರೂಪಾಂತರವನ್ನು ಬಿಡುಗಡೆಗೊಳಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ.
ಇನ್ನು ಕಂಪನಿಯು ತನ್ನ ನ್ಯಾನೋ ಎಲೆಕ್ಟ್ರಿಕ್ ರೂಪಾಂತರದ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೆ ಎಲೆಕ್ಟ್ರಿಕ್ ಕಾರ್ ನ ಫೀಚರ್ ಬಗ್ಗೆ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಟಾಟಾ ನ್ಯಾನೋ ಎಲೆಕ್ಟ್ರಿಕ್ ವಿಶೇಷತೆ
ಟಾಟಾ ನ್ಯಾನೋ ಎಲೆಕ್ಟ್ರಿಕ್ ರೂಪಾಂತರದಲ್ಲಿ ಶಕ್ತಿಯುತ ಬ್ಯಾಟರಿ ಪ್ಯಾಕ್ ಅನ್ನು ನೀಡಲಾಗಿದೆ. ಈ ಕಾರ್ ನಲ್ಲಿ ಸ್ಮಾರ್ಟ್ ಮತ್ತು ಅಡ್ವಾನ್ಸ್ ಫೀಚರ್ ಲಭ್ಯವಿದೆ. ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್, ಎಸಿ, ಫ್ರಂಟ್ ಪವರ್ ವಿಂಡೋಸ್, ಬ್ಲೂಟೂತ್, ಮಲ್ಟಿ ಇನ್ಫರ್ಮೇಷನ್ ಡಿಸ್‌ಪ್ಲೇ, ರಿಮೋಟ್ ಲಾಕಿಂಗ್ ಸಿಸ್ಟಮ್ ಸೇರಿದಂತೆ ಇನ್ನಿತರ ಫೀಚರ್ ಅನ್ನು ಅಳವಡಿಸಲಾಗಿದೆ.
250 ಕಿಲೋ ಮೀಟರ್ ಮೈಲೇಜ್ ಜೊತೆಗೆ ಕಡಿಮೆ ಬೆಲೆಗೆ ಸಿಗಲಿದೆ ನ್ಯಾನೋ ಎಲೆಕ್ಟ್ರಿಕ್
ಈ ಎಲೆಕ್ಟ್ರಿಕ್ ಕಾರ್ ನಲ್ಲಿ ಎರಡು ಬ್ಯಾಟರಿ ಆಯ್ಕೆಯನ್ನು ನೀಡಲಾಗಿದೆ. ಈ ಕಾರ್ 19 kWh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು, 250 ಕಿಲೋಮೀಟರ್ ಮೈಲೇಜ್ ನೀಡಲಿದೆ. ಟಾಟಾ ನ್ಯಾನೋ ಎಲೆಕ್ಟ್ರಿಕ್ ರೂಪಾಂತರದಲ್ಲಿ ಹತ್ತು ಹಲವು ಸುಧಾರಿತ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ಇನ್ನು ಕಂಪನಿಯು ತನ್ನ ನ್ಯಾನೋ ಎಲೆಟ್ರಿಕ್ ರೂಪಾಂತರಕ್ಕೆ 3-6 ಲಕ್ಷ ನಿಗದಿಪಡಿಸಿದೆ. ಹೆಚ್ಚಿನ ಮೈಲೇಜ್ ನೀಡುವ ಈ ಎಲೆಕ್ಟ್ರಿಕ್ ಕಾರ್ ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗಲಿದೆ.