Tata Electric: ಕಡಿಮೆ ಆಯಿತು ಸ್ವಿಫ್ಟ್ ಕಾರಿನ ಬೇಡಿಕೆ, 300 Km ಮೈಲೇಜ್ ಕೊಡುವ 2 ಕಾರ್ ಲಾಂಚ್ ಮಾಡಿದ ಟಾಟಾ.
ಟಾಟಾದ ಮೂರೂ ಎಲೆಕ್ಟ್ರಿಕ್ ಕಾರ್ ಗಳ ಬಿಡುಗಡೆಗೆ ಸಿದ್ಧತೆ ನೆಡೆಸುತ್ತಿರುವ ಟಾಟಾ ಮೋಟಾರ್ಸ್.
Tata Electric Mileage Car: ಎಲೆಕ್ಟ್ರಿಕ್ ಕಾರುಗಳ (Electric Vehicle) ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟರ್ಸ್ (Tata Motors) ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗಿದ್ದು ಟಾಟಾ ಮೋಟರ್ಸ್ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿದೆ. ಪೆಟ್ರೋಲ್ ಡೀಸೆಲ್ ಬೆಲೆ ಏರುತ್ತಿರುವ ಕಾರಣದಿಂದ ಇವಿ ಕಾರ್ ಗಳ ಅನುಷ್ಠಾನಕ್ಕೆ ಬಂದಿದೆ.
ನೆಕ್ಸಾನ್ ಎಲೆಕ್ಟ್ರಿಕ್ ಕಾರು
ನೆಕ್ಸಾನ್ ಇವಿ ಕಾರಿನ ಫೇಸ್ ಲಿಫ್ಟ್ ಆವೃತ್ತಿಯು ಸೆಪ್ಟೆಂಬರ್ ತಿಂಗಳ ಹೊತ್ತಿಗೆ ಬಿಡುಗಡೆಯಾಗುವ ಸಾಧ್ಯತೆ ಇದ್ದು, ತದನಂತರ ಇನ್ನುಳಿದ ಮೂರು ಇವಿ ಕಾರುಗಳು ಹಂತ ಹಂತವಾಗಿ ಬಿಡುಗಡೆಯಾಗಲಿದೆ. ಫೇಸ್ ಲಿಫ್ಟ್ ನೆಕ್ಸಾನ್ ಇವಿ ಕಾರು ಪ್ರಸುತ್ತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಬ್ಯಾಟರಿ ಪ್ಯಾಕ್ ಪಡೆದುಕೊಳ್ಳುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಸ್ಪ್ಯಾಂಡರ್ಡ್ ಮತ್ತು ಮ್ಯಾಕ್ಸ್ ಎನ್ನುವ ಪ್ರಮುಖ ಎರಡು ಆವೃತ್ತಿಗಳಲ್ಲಿ ಮಾರಾಟಗೊಳ್ಳುತ್ತಿದೆ. ಇವುಗಳ ಎಕ್ಸ್ ಶೋರೂಮ್ ಪ್ರಕಾರ ರೂ 16.49 ಲಕ್ಷದಿಂದ ರೂ 19.29 ಲಕ್ಷ ಆಗಿದೆ.
ಪಂಚ್ ಎಲೆಕ್ಟ್ರಿಕ್ ವರ್ಷನ್ ಕಾರು
ಇನ್ನು ಟಾಟಾ ಮೋಟರ್ಸ್ ಕಂಪನಿ 2024 ರ ಕೊನೆಯಲ್ಲಿ ಪಂಚ್ ಇವಿ ವರ್ಷನ್ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಇದು ಸಣ್ಣ ಗಾತ್ರದ ಇವಿ ಕಾರು ಆಗಿರಲಿದ್ದು ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಈ ಕಾರ್ ಸದ್ಯ ಮಾರುಕಟ್ಟೆಯಲ್ಲಿರುವ ಟಿಯಾಗೋ ಇವಿ ಆವ್ರತ್ತಿಯಲ್ಲಿರುವಂತೆ ತಂತ್ರಜ್ಞಾನ ಮತ್ತು ಫೀಚರ್ಸ್ ಹೊಂದಿದೆ.
ಒಂದೇ ಚಾರ್ಜ್ ನಲ್ಲಿ 300 ಕಿಲೋಮೀಟರ್ ಮೈಲೇಜ್
ಈ ಕಾರ್ ಪ್ರತಿ ಚಾರ್ಜ ಗೆ 300 ಕೀ .ಮೀ ಗಿಂತಲೂ ಹೆಚ್ಚಿನ ಮೈಲೇಜ್ ನೀಡಲಿದ್ದು,ಎಕ್ಸ್ ಶೋರೂಮ್ ಪ್ರಕಾರ ರೂ, 11 ಲಕ್ಷದಿಂದ ರೂ, 14 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುತ್ತಿದೆ. ಹೀಗಾಗಿ ಇದು ಟಿಯಾಗೋ ಎಲೆಕ್ಟ್ರಿಕ್ ಕಾರ್ ಗಿಂತಲೂ ಹೆಚ್ಚಿನ ಸ್ಥಾನ ಪಡೆದುಕೊಳ್ಳುತ್ತಿದೆ.
ಟಾಟಾ ಮೋಟರ್ಸ್ ಕಂಪನಿಯು ಎಲ್ಲ ತರದ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುತ್ತಿದೆ. ಎಲೆಕ್ಟ್ರಿಕ್ ಕಾರಗಳು ಕಡಿಮೆ ಬೆಲೆಯಲ್ಲಿ ಗ್ರಾಹಕರು ಪಡೆದುಕೊಳ್ಳಬಹುದು. ಈ ಕಾರ್ ತುಂಬಾ ಒಳ್ಳೆಯ ಮೈಲೇಜ್ ಹೊಂದಿದೆ ಮತ್ತು ಉತ್ತಮ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ.