Tata: ಒಂದೇ ಚಾರ್ಜ್ ಗೆ 456Km ಓಡುವ ಕಾರು ಬಿಡುಗಡೆ, ಸ್ಟೈಲಿಶ್ ಮಾಡೆಲ್ ನ ಬೆಲೆ ತಿಳಿಯಿರಿ.
ವಿಶಿಷ್ಟವಾದ ಪೀಚರ್ಸ್ ಹೊಂದಿರುವ ಕಾರನ್ನು ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್.
Tata Nexon EV facelift: ಇಂದು ಮಾರುಕಟ್ಟೆ ಯಲ್ಲಿ ಹೊಸ ಮಾಡೆಲ್ ನ ವಾಹನ ಗಳು ಲಗ್ಗೆ ಇಟ್ಟಿವೆ, ದಿನದಿಂದ ದಿನಕ್ಕೆ ವಾಹನ ಗಳ ಸಂಖ್ಯೆ ಕೂಡ ಹೆಚ್ಚಾಗಿದೆ, ಅದರಲ್ಲೂ ಹೊಸ ಮಾಡೆಲ್ ನ ಕಾರು ಖರೀದಿ ಮಾಡಬೇಕೇಂಬ ಆಸೆ ಎಲ್ಲರದ್ದೂ ಆಗಿರುತ್ತದೆ. ಇತ್ತಿಚಿಗೆ ಪ್ರತಿಷ್ಠಿತ ಕಂಪನಿಗಳು ಹಲವಾರು ಹೊಸ ಮಾಡೆಲ್ ನ ವಾಹನ ಗಳನ್ನು ಮಾರಾಟ ಮಾಡಲು ಆರಂಭಿಸಿದೆ,
ಇದೀಗ ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ಹೊಸ ವೈಶಿಷ್ಟ್ಯ ದೊಂದಿಗೆ ಉತ್ತಮ ಪೀಚರ್ಸ್ ಹೊಂದಿರುವ ಕಾರನ್ನು ಬಿಡುಗಡೆ ಮಾಡಿದೆ. ನೆಕ್ಸಾನ್ ಇವಿ ಫೇಸ್‌ಲಿಫ್ಟ್ ಕಾರು ಇದಾಗಿದ್ದು ಹೊಸ ನವೀಕರಣಗಳೊಂದಿಗೆ ಮತ್ತಷ್ಟು ಕ್ರೆಜ್ ಅನ್ನು ಕಾರು ಪ್ರೀಯರಿಗೆ ಹುಟ್ಟಿಸಿದೆ.
ಬುಕ್ಕಿಂಗ್ ಪ್ರಾರಂಭ
ಇದೀಗ ಈ ಮಾಡೆಲ್ ಕಾರೀನ ಬುಕ್ಕಿಂಗ್ ಕೂಡ ಪ್ರಾರಂಭ ವಾಗಿದ್ದು,ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ, ಹೊಸ ನವೀಕರಣ ದೊಂದಿಗೆ ವಿಶೇಷ ವಾದ ವೈಶಿಷ್ಟ್ಯ ವನ್ನು ಈ ಕಾರು ಹೊಂದಿದೆ, ಯಾರೆಲ್ಲ ಕಾರು ಖರೀದಿ ಮಾಡಬೇಕು ಎಂದು ಪ್ಲಾನ್ ಮಾಡಿದ್ದರೋ ಅವರಿಗೆ ಈ ಕಾರು ಉತ್ತಮ ಆಯ್ಕೆ ಎನ್ನಬಹುದು.
ಹೇಗಿದೆ ವೈಶಿಷ್ಟ್ಯ
ಈ ಕಾರು ನೋಡಲು ಬಹಳಷ್ಟು ಆಕರ್ಷಕ ವಾಗಿದ್ದು, 40.5 kWh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಇದು 465 ಕಿ.ಮೀ ಓಡುವ ರೇಂಜ್ ಹೊಂದಿದೆ, 142 bhp ಪವರ್ ಮತ್ತು 215 Nm ಟಾರ್ಕ್ ನೀಡಿ ಡ್ರೈವ್ ಮಾಡಲು ಉತ್ತಮ ಅನುಭವ ವನ್ನು ನೀಡಲಿದೆ. ಈ ಕಾರ್ ವೈವಿಧ್ಯಮಯ ಕಲರ್ ನಲ್ಲಿ ಮತ್ತಷ್ಟು ನೋಡಲು ಆಕರ್ಷಕ ವಾಗಿದ್ದು ಲಾಂಗ್ ರೇಂಜ್ ಮತ್ತು ಮಿಡ್ ರೇಂಜ್ ಎಂಬ ವಿಭಿನ್ನ ರೂಪಾಂತರಗಳಲ್ಲಿ ಹೊಂದಿದ್ದು ಉತ್ತಮ ಆರಾಮದಾಯಕ ಅನುಭವ ನೀಡಲಿದೆ.
ಬೆಲೆ ಎಷ್ಟು?
ಇದರಲ್ಲಿ ವಿಶೇಷ ಫೀಚರ್ ಇದ್ದು, ಕಾರಿನ ಹೆಡ್‌ಲ್ಯಾಂಪ್ ನಲ್ಲಿ ವಿಶಿಷ್ಟವಾದ ಸ್ಲ್ಯಾಟೆಡ್ ವಿನ್ಯಾಸಗಳು ಮತ್ತಷ್ಟು ಗಮನ ಸೆಳೆಯಲಿದೆ, ಮುಂಭಾಗದಲ್ಲಿ ಎಲ್‌ಇಡಿ ಲೈಟ್ ಬ್ಯಾಂಡ್ ಇದ್ದು ಇದು ಬೇಡಿಕೆ ಕೂಡ ಹೆಚ್ಚುಮಾಡಿಕೊಂಡಿದೆ, ಇದರ ಬೆಲೆಯು ವಿವಿಧ ಮೂಲಗಳ ಪ್ರಕಾರ 15 ಲಕ್ಷ ರೂಪಾಯಿಯಿಂದ 20 ಲಕ್ಷ ರೂಪಾಯಿ ಮಧ್ಯಂತರ ಇರಬಹುದು ಎನ್ನಲಾಗಿದೆ.