Ads By Google

Nexon EV EMI: 465 km ಮೈಲೇಜ್ ಟಾಟಾ Nexon ಕಾರ್ ಖರೀದಿಸಿದರೆ ತಿಂಗಳ EMI ಎಷ್ಟು…? ಇಲ್ಲಿದೆ ಡೀಟೇಲ್ಸ್.

tata nexon emi calculations

Image Credit: original Source

Ads By Google

Tata Nexon EV EMI Calculator: ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ Tata motors ಮಾರುಕಟ್ಟೆಯಲ್ಲಿ ಅತ್ಯಾಧುನಿಕ ಫೀಚರ್ ಇರುವ ಕಾರ್ ಗಳನ್ನೂ ಪರಿಚಯಿಸುತ್ತಿದೆ. ಅದರಲ್ಲೂ ಕಂಪನಿಯು ಇತ್ತೀಚಿಗೆ 5 ಸೀಟರ್ ವಿಭಾಗದಲ್ಲಿ ತನ್ನ ಜನಪ್ರಿಯ Nexon EV ಯನ್ನು ಪರಿಚಯಿಸಿದೆ. ಆಕರ್ಷಕ ವಿನ್ಯಾಸ, ವೈಶಿಷ್ಟ್ಯ ಹಾಗೂ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಈ EV ಯನ್ನು ಖರೀದಿಸಲು ಜನರು ಕ್ಯೂ ನಲ್ಲಿ ನಿಂತಿದ್ದಾರೆ ಎನ್ನಬಹುದು.

ನೀವು ನೂತನ Tata Nexon EV ಖರೀದಿಯ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯ ಇಲ್ಲ. ಕಾರಣ ಗ್ರಾಹಕರಿಗೆ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಕಂಪನಿಯು Nexon ಮಾದರಿಯ ಖರೀದಿಗೆ ಆಕರ್ಷಕ ಹಣಕಾಸು ಯೋಜನೆಯನ್ನು ಪರಿಚಯಿಸಿದೆ. ನೀವು ತಿಂಗಳಿಗೆ ಕಡಿಮೆ EMI ಪಾವತಿಸುವ ಮೂಲಕ Nexon ಮಾದರಿಯನ್ನು ನಿಮ್ಮದಾಗಿಸಿಕೊಳ್ಳಬಹುದು.

Image Credit: News24online

465 km ಮೈಲೇಜ್ ಟಾಟಾ Nexon ಕಾರ್ ಖರೀದಿಸಿದರೆ ತಿಂಗಳ EMI ಎಷ್ಟು…?
ಬೆಂಗಳೂರಿನಲ್ಲಿ ಬೇಸ್ ಮಾಡೆಲ್ (ಆರಂಭಿಕ ಆವೃತ್ತಿ) ಕ್ರಿಯೇಟಿವ್ ಪ್ಲಸ್ ಬೆಲೆ 15.85 ಲಕ್ಷ ರೂ., ಫಿಯರ್‌ ಲೆಸ್ 17.38 ಲಕ್ಷ ರೂ., ಫಿಯರ್‌ ಲೆಸ್ ಪ್ಲಸ್ ರೂ. 17.91 ಲಕ್ಷ, ಫಿಯರ್‌ಲೆಸ್ ಪ್ಲಸ್ ಎಸ್ ರೂ. 18.44 ಲಕ್ಷ, ಎಂಪವರ್ಡ್ ರೂ. 19.12 ಲಕ್ಷ ಆನ್ ರೋಡ್ ಬೆಲೆಯನ್ನು ಹೊಂದಿದೆ. ಫಿಯರ್ ಲೆಸ್ ಎಲ್ ಆರ್ ರೂ.19.49 ಲಕ್ಷ, ಫಿಯರ್ ಲೆಸ್ ಪ್ಲಸ್ ಎಲ್ ಆರ್ ರೂ.20.02 ಲಕ್ಷ, ಫಿಯರ್ ಲೆಸ್ ಪ್ಲಸ್ ಎಸ್ ಎಲ್ ಆರ್ ರೂ. 20.54 ಲಕ್ಷ, ಎಂಪವರ್ಡ್ ಪ್ಲಸ್ ಎಲ್ ಆರ್ ಡಾರ್ಕ್ ರೂ. 21.27 ಲಕ್ಷ, ಹೆಚ್ಚು ಮಾರಾಟವಾಗುವ ಎಂಪವರ್ಡ್ ಪ್ಲಸ್ ಎಲ್ ಆರ್ ವೆರಿಯಂಟ್ ರೂ. 21.39 ಲಕ್ಷ ಆನ್ ರೋಡ್ ಬೆಲೆ ನಿಗದಿಪಡಿಸಲಾಗಿದೆ.

ರೂಪಾಂತರಗಳಿಗೆ ಅನುಗುಣವಾಗಿ ಬೆಲೆ ಹೇಗೆ ಬದಲಾವಣೆ ಆಗುತ್ತದೆಯೋ ಅದೇ ರೀತಿ ಡೌನ್ ಪೇಮೆಂಟ್ ಪಾವತಿಗೆ ಅನುಗುಣವಾಗಿ ಮಾಸಿಕ EMI ಕೂಡ ಬದಲಾಗುತ್ತದೆ. ನೀವು ಈ Tata Nexon EV ಅನ್ನು ರೂ.1,59,000 ಡೌನ್ ಪೇಮೆಂಟ್ ನೊಂದಿಗೆ ಖರೀದಿಸದರೆ, ನೀವು 9.8% ಬಡ್ಡಿದರದಲ್ಲಿ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ. ಐದು ವರ್ಷಗಳ ಅವಧಿಗೆ ತಿಂಗಳಿಗೆ ರೂ. 30,166 ರ EMI ಅನ್ನು ಪಾವತಿಸಬೇಕಾಗುತ್ತದೆ.

Image Credit: Bdcars

ಭರ್ಜರಿ 465 ಕಿಲೋಮೀಟರ್ ಮೈಲೇಜ್
ಹೊಸ Nexon EV ಅತ್ಯುತ್ತಮ ವಿನ್ಯಾಸವನ್ನು ಹೊಂದಿದೆ ಮತ್ತು ಫ್ಲೇಮ್ ರೆಡ್, ಪ್ರಿಸ್ಟಿನ್ ವೈಟ್, ಇಂಟೆನ್ಸಿಟಿ ಟೀಲ್, ಡೇಟೋನಾ ಗ್ರೇ ಸೇರಿದಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಿದೆ. ಇದರಲ್ಲಿ 5 ಜನರು ಆರಾಮವಾಗಿ ಪ್ರಯಾಣಿಸಬಹುದು. Tata Nexon EV ಯಲ್ಲಿ 40.5 kWh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು Long Range ಆಯ್ಕೆಯಲ್ಲಿ ಬರೋಬ್ಬರಿ 465 ಕಿಲೋಮೀಟರ್ ರೇಂಜ್ ನೀಡಲಿದೆ. ಇನ್ನು EV ನಲ್ಲಿ Mid Range ರೂಪಾಂತರದ ಆಯ್ಕೆ ಕೂಡ ಇದ್ದು, 30 kWh ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು, ಬರೋಬ್ಬರಿ 325 ಕಿಲೋಮೀಟರ್ ರೇಂಜ್ ನೀಡಲಿದೆ.

Image Credit: Moneycontrol
Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in