Ads By Google

TATA Punch Camo: ಕಡಿಮೆ ಬೆಲೆಯ ಹೆಚ್ಚಿನ ವಿಶೇಷತೆ ಹೊಂದಿರುವ SUV ಕಾರ್ ಬಿಡುಗಡೆ ಮಾಡಿದ ಟಾಟಾ ಕಂಪನಿ, ಕಾರಿಗೆ ಜನರು ಫಿದಾ.

Tata Punch camo car
Ads By Google

ಕಾರುಗಳನ್ನ ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ ಮತ್ತು ಜೀವನದಲ್ಲಿ ಒಮ್ಮೆಯಾದರೂ ತಮಗೆ ಇಷ್ಟವಾಗುವ ಕಾರನ್ನ ಖರೀದಿ ಮಾಡಬೇಕು ಅನ್ನುವ ಬಯಕೆ ಸಾಮಾನ್ಯವಾಗಿ ಎಲ್ಲರಿಗೂ ಇದ್ದೆ ಇರುತ್ತದೆ. ದೇಶದಲ್ಲಿ ಪ್ರಸ್ತುತ ದಿನಗಳಲ್ಲಿ ಪ್ರತಿಯೊಂದು ವಸ್ತುಗಳು ಮತ್ತು ವಾಹನಗಳ ಬೆಲೆ ಅಧಿಕವಾಗಿದೆ ಮತ್ತು ಅದೇ ರೀತಿಯಲ್ಲಿ ದೇಶದಲ್ಲಿ ಕಾರುಗಳ ಬೆಲೆ ಕೂಡ ಕೊಂಚ ಅಧಿಕವಾಗಿದೆ. ಕಾರುಗಳ ಕಂಪನಿಗಳಲ್ಲಿ ಅತೀ ಹೆಚ್ಚು ಜನಪ್ರಿಯತೆಯನ್ನ ಗಳಿಸಿಕೊಂಡಿರುವ ಕಾರು ಕಂಪನಿ ಅಂದರೆ TATA ಕಂಪನಿ ಎಂದು ಹೇಳಿದರೆ ತಪ್ಪಾಗಲ್ಲ. ಹೌದು TATA Cars ಜನರಿಗೆ ಹೆಚ್ಚಿನ ಸುರಕ್ಷತೆ ಮತ್ತು ಆರಾಮದಾಯಕ ಪ್ರಯಾಣವನ್ನ ನೀಡುವ ಕಾರಣ ಜನರು ಹೆಚ್ಚು ಹೆಚ್ಚು TATA Company ಕಾರುಗಳನ್ನ ಖರೀದಿ ಮಾಡುತ್ತಾರೆ.

ಸದ್ಯ ಹಿಂದೆ ಟಾಟಾ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಎಲ್ಲಾ ಕಾರುಗಳ ಬೆಲೆ ಕೊಂಚ ಅಧಿಕವಾಗಿತ್ತು ಮತ್ತು ಹಲವು ಜನರು ನೀವು ಕಡಿಮೆ ಬೆಲೆಯ ಕಾರುಗಳನ್ನ ಬಿಡುಗಡೆ ಮಾಡಿ ಎಂದು ಮನವಿಯನ್ನ ಕೂಡ ಮಾಡಿಕೊಂಡಿದ್ದರು. ಗ್ರಾಹಕರಿಗೆ ಮತ್ತು ಕಾರು ಪ್ರಿಯರಿಗೆ ತಮ್ಮ ಕಂಪನಿಯ ಕಾರುಗಳು ಕಡಿಮೆ ಬೆಲೆಯಲ್ಲಿ ಸಿಗಲಿ ಅನ್ನುವ ಕಾರಣಕ್ಕೆ ಈಗ ಟಾಟಾ ಕಂಪನಿ ಕಡಿಮೆ ಬೆಲೆಯ ಹೆಚ್ಚು ವಿಶೇಷತೆ ಹೊಂದಿರುವ TATA SUV ಕಾರನ್ನ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಸದ್ಯ ಈ ಕಾರು ಜನರ ಮೆಚ್ಚುಗೆಗೆ ಕೂಡ ಕಾರಣವಾಗಿದೆ.

Image Credit: oyeeabhi.com

ಹಾಗಾದರೆ ಟಾಟಾ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುವ TATA Small SUV Car ಯಾವುದು ಹಾಗೆ ಅದರ ಬೆಲೆ ಮತ್ತು ವಿಶೇಷತೆ ಏನು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ಟಾಟಾ ಕಂಪನಿ ತಾನು ಈಗಾಗಲೇ ಉತ್ಪಾದನೆ ಮಾಡಿರುವ TATA Punch Car ನ ಹೊಸ ಆವೃತ್ತಿಯನ್ನ ಬಿಡುಗಡೆ ಮಾಡುತ್ತಿದೆ. ಹೌದು ಟಾಟಾ ಕಂಪನಿ ತನ್ನ ಉತ್ಪಾದನೆಯಾದ ಟಾಟಾ ಪಂಚ್ ಕ್ಯಾಮೊ ಆವೃತ್ತಿಯನ್ನ ಕಾರನ್ನ ಬಿಡುಗಡೆ ಮಾಡಿದೆ. TATA Punch Camo ಕಾರ್ ನ ಟೀಸರ್ ಅನ್ನು ಟಾಟಾ ಕಂಪನಿ ಬಿಡುಗಡೆ ಮಾಡಿದ್ದು, ಸದ್ಯ ಹೊಸ ಕಾರ್ ಗೆ ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.

ಹಳೆಯ ಪಂಚ್ ಕಾರಿಗೆ ಹೋಲಿಕೆ ಮಾಡಿದರೆ ಇದರಲ್ಲಿ ಅನೇಕ ಬದಲಾವಣೆಗಳನ್ನ ಮಾಡಲಾಗಿದೆ. ಟಾಟಾ ಕಂಪನಿಯ ಅಧಿಕ ಬೆಲೆಯ ಕಾರುಗಳಲ್ಲಿ ಇರುವ ಗ್ರಿಲ್, ಹೆಡ್ ಲ್ಯಾಂಪ್, ಸೈಡ್ ಸ್ಕರ್ಟ್ ಗಳು, ಬ್ಲಾಕ್ ಅಲಾಯ್ ಚಕ್ರಗಳು, ಪವರ್ ಫೋಲ್ಡಿಂಗ್ ಮಿರರ್, ಪೆಡಲ್ ಲ್ಯಾಂಪ್ ಗಳು, ದೊಡ್ಡ ಡಿಸ್ಪ್ಲೇ ಹೀಗೆ ಹಲವು ವಿಶೇಷತೆಗಳು ಇದೆ ಎಂದು ಕಂಪನಿ ಹೇಳಿದೆ. ಇನ್ನು ಈ ಹೊಸ ಕಾರಿನ ಬೆಲೆಯ ವಿಷಯಕ್ಕೆ ಬರುವುದಾದರೆ, TATA Punch Camo ಕಾರಿನ ಬೆಲೆ 6 ಲಕ್ಷ ರೂಪಾಯಿಯಿಂದ ಆರಂಭವಾಗಿ 10 ಲಕ್ಷ ರೂಪಾಯಿಯ ತನಕ ಇದ್ದು ಇದು ಜನರ ಮೆಚ್ಚುಗೆಯ ಕಾರ್ ಅನಿಸಿಕೊಂಡಿದೆ. ಕಡಿಮೆ ಬೆಲೆಯ ಹೆಚ್ಚಿನ ವಿಶೇಷತೆ ಹೊಂದಿರುವ ಕಾರನ್ನ ಈಗ ಟಾಟಾ ಕಂಪನಿ ಬಿಡುಗಡೆ ಮಾಡಿದ್ದು ಈ ಕಾರ್ ಮಾರುಕಟ್ಟೆಯಲ್ಲಿ ತನ್ನದೇ ಆದ ಮೈಲುಗಲ್ಲನ್ನ ಸಾಧಿಸಲಿದೆ.

Ads By Google
Nadunudi: nadunudi.in is digital media platform, which Provides Latest News Content in Kannada Language by team of experienced Professionals in the Journalism Field