Tata: 30 ಕಿಲೋ ಮೀಟರ್ ಮೈಲೇಜ್ ಕೊಡುವ ಕಾರ್ ಲಾಂಚ್ ಮಾಡಿದ ಟಾಟಾ, ಸಂಕಷ್ಟದಲ್ಲಿ ಮಾರುತಿ.
ಡ್ಯುಯಲ್ ಸಿಲಿಂಡರ್ ತಂತ್ರಜ್ಞಾನ ಹೊಂದಿರುವ ಟಾಟಾ ಸಿಎನ್ ಜಿ ಶೀಘ್ರದಲ್ಲೇ ಬಿಡುಗಡೆ.
Tata CNG Car: ಪ್ರತಿಷ್ಠಿತ ಕಾರ್ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ಹೊಸ ಮಾದರಿಯ ಕಾರ್ ಬಿಡುಗಡೆ ಮಾಡುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ. ಇನ್ನು ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯ ಪೆಟ್ರೋಲ್, ಡಿಸೇಲ್, ಎಲೆಕ್ಟ್ರಿಕ್ ರೂಪಾಂತರದ ಜೊತೆಗೆ CNG ರೂಪಾಂತರದ ಸಹ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿದೆ.
ಟಾಟಾ ಪಂಚ್ ಸಿಎನ್ ಜಿ ಬೆಲೆ
ವಿಶ್ವದಾದ್ಯಂತ ಹೆಸರು ಗಳಿಸಿರುವ ಟಾಟಾ ಕಂಪನಿ ಇದೀಗ ಅವಳಿ ಸಿಲಿಂಡರ್ ಇರುವ ಹೊಸ ಕಾರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಟಾಟಾ ಪಂಚ್ CNG ಯ ಮೂರೂ ರೂಪಾಂತರಗಳನ್ನು ಕಾಣಬಹುದಾಗಿದೆ. ಈ ಕಾರ್ ನ ಬೆಲೆ 7 ಲಕ್ಷದಿಂದ ಹಿಡಿದು 9 ಲಕ್ಷ ರೂಪಾಯಿಗಳ ತನಕ ಇರುತ್ತದೆ. ಟಾಟಾ ಪಂಚ್ ಸಿಎನ್ ಜಿ (Tata Punch CNG) ಕಾರ್ ತಾಂತ್ರಿಕವಾಗಿ ಹೆಚ್ಚು ಇಂಧನ ಕ್ಷಮತೆಯನ್ನು ಹೊಂದಿದೆ.
ಟಾಟಾ ಪಂಚ್ ಸಿಎನ್ ಜಿ ಮೈಲೇಜ್
ಟಾಟಾ ಮೋಟಾರ್ಸ್ ಪ್ರಕಾರ ಟಾಟಾ ಪಂಚ್ CNG ಪ್ರತಿ ಕೆಜಿಗೆ 30 ಕಿಲೋಮೀಟರ್ ವರೆಗೆ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದರ ಮೈಲೇಜ್ ಟಾಟಾ ಟಿಯಾಗೋದ ಮೈಲೇಜ್ ಗೆ ಸಮನಾಗಿದೆ. ಹಾಗೆ ಹ್ಯುಂಡೈ ಎಸ್ಟ್ರ್ CNG ಸಹ 27 ಕೆಎಂಪಿಎಲ್ ವರೆಗೆ ಮೈಲೇಜ್ ನೀಡುತ್ತದೆ. ಈ ಟಾಟಾ ಪಂಚ್ CNG 1 .2 ಲೀಟರ್ ಇರುವ ಮೂರೂ ಸಿಲಿಂಡರ್ ಪೆಟ್ರೋಲ್ ಎಂಜಿ ನಿಂದ ನಿಯಂತ್ರಿಸಲ್ಪಡುತ್ತದೆ. CNG ಇಲ್ಲದೆ ಈ ಎಂಜಿನ್ 84bhp ಪವರ್ ಮತ್ತು 113 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪದಿಸುತ್ತದೆ.
ಟಾಟಾ ಪಂಚ್ ಸಿಎನ್ ಜಿ ಅಲ್ಲಿ ನಾವು ಡ್ಯುಯಲ್ ಸಿಲಿಂಡರ್ ನ ತಂತ್ರಜ್ಞಾನವನ್ನು ನೋಡಬಹುದಾಗಿದೆ. ಇದರಲ್ಲಿ ದೊಡ್ಡ CNG ಸಿಲಿಂಡರ್ ಬದಲಿಗೆ ಎರಡು ಚಿಕ್ಕ ಸಿಲಿಂಡರ್ ಗಳು ನಿಮಗೆ ಕಾಣಸಿಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಂಪನಿ ಬಹಿರಂಗಪಡಿಸಿಲ್ಲ.