Ads By Google

Tata Punch EMI: 11 ಲಕ್ಷ ಬೆಲೆಯ ಟಾಟಾ ಪಂಚ್ ಖರೀದಿಸಲು ಎಷ್ಟು EMI ಕಟ್ಟಬೇಕು…? ಇಲ್ಲಿದೆ ಡಿಟೈಲ್ಸ್.

Tata Punch Electric EMI Details

Image Credit: Original Source

Ads By Google

Tata Punch Electric EMI Details: ಪ್ರಸ್ತುತ ಮಾರುಕಟ್ಟೆಯಲ್ಲಿ TATA ಕಂಪನಿಯು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಸದ್ಯ Tata Punch Electric ಮಾರುಕಟ್ಟೆಯಲ್ಲಿ ಬಾರಿ ಸದ್ದು ಮಾಡುತ್ತಿದೆ. ಈಗಂತೂ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ಹೆಚ್ಚಿದೆ.

ಜನರು ತಮ್ಮ ಇಂಧನದ ಖರ್ಚನ್ನು ಉಳಿಸಲು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಬಯಸುತ್ತಿದ್ದರೆ. ಗ್ರಾಹಕರಿಗೆ ಇಷ್ಟವಾಗುವಂತಹ ಎಲೆಕ್ಟ್ರಿಕ್ ಮಾದರಿಗೆ Tata Punch ಸೇರಿಕೊಂಡಿದೆ. ನಿಮಗೆ ಟಾಟಾ ಪಂಚ್ ಮಾದರಿಯನ್ನು ಖರೀದಿಸುವ ಯೋಜನೆ ಇದ್ದರೆ ನಾವೀಗ ಈ ಲೇಖನದಲ್ಲಿ Tata Punch EV ಮಾದರಿಯ EMI ಬಗ್ಗೆ ಮಾಹಿತಿ ನೀಡಲಿದ್ದೇವೆ.

Image Credit: Navbharattimes

ಟಾಟಾ ಪಂಚ್ ಎಲೆಕ್ಟ್ರಿಕ್ ಮಾದರಿಯನ್ನು ಖರೀದಿಸುವ ಯೋಜನೆಯಲ್ಲಿದ್ದೀರಾ…?
ಮಾರುಕಟ್ಟೆಯಲ್ಲಿ Tata Punch Electric ಮಾದರಿಯ ಎಕ್ಸ್ ಶೋ ರೂಮ್ ಬೆಲೆ 10 .99 ಲಕ್ಷದಿಂದ 11 .72 ಲಕ್ಷದವರೆಗೆ ತಲುಪಿದೆ. ಇನ್ನು ಆನ್ ರೋಡ್ ಬೆಲೆಯೂ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ನೀವು ಟಾಟಾ ಪಂಚ್ ಅನ್ನು ಖರೀದಿಸುವ ಯೋಜನೆ ಹಾಕಿಕೊಂಡಿದ್ದರೆ ಚಿಂತಿಸುವ ಅಗತ್ಯ ಇಲ್ಲ. ನೀವು ಕಡಿಮೆ ಡೌನ್ ಪೇಮೆಂಟ್ ನೊಂದಿಗೆ ತಿಂಗಳ EMI ಪಾವತಿಸುವ ಮೂಲಕ ಈ ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು.

ಕಡಿಮೆ EMI ನೊಂದಿಗೆ ಟಾಟಾ ಪಂಚ್ ಖರೀದಿಗೆ ಕಂಪನಿಯು ನಿಮಗೀಗ ಒಂದೊಳ್ಳೆ ಆಫರ್ ಅನ್ನು ನೀಡಿದೆ. ಈ ಅವಕಾಶವನ್ನು ಬಳಸಿಕೊಂಡು ನೀವು ನಿಮ್ಮ ಕಾರ್ ಖರೀದಿಯ ಆಸೆಯನ್ನು ನನಸು ಮಾಡಿಕೊಳ್ಳಬಹುದು. ಇನ್ನು 11 ಲಕ್ಷ ಬೆಲೆಯ ಟಾಟಾ ಪಂಚ್ ಅನ್ನು ಖರೀದಿಸಲು ಎಷ್ಟು ಡೌನ್ ಪೇಮೆಂಟ್ ಹಾಗೂ ಮಾಸಿಕ ಎಷ್ಟು EMI ಪಾವತಿಸಬೇಕಾಗುತ್ತದೆ ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

Image Credit: Live Hindustan

11 ಲಕ್ಷ ಬೆಲೆಯ ಟಾಟಾ ಪಂಚ್ ಖರೀದಿಸಲು ಎಷ್ಟು EMI ಕಟ್ಟಬೇಕು…?
ನೀವು Tata Punch EV ಯನ್ನು ಖರೀದಿಸಲು ಸುಮಾರು 1,17,000 ರೂ. ಗಳ ಡೌನ್ ಪೇಮೆಂಟ್ ಮಾಡುವ ಅಗತ್ಯವಿದೆ. ಈ ಪಂಚ್ ಖರೀದಿಗೆ ಬ್ಯಾಂಕ್ ನಿಮಗೆ 10,55,933 ರೂ. ಗಳ ಸಾಲವನ್ನು ನೀಡುತ್ತದೆ. ನೀವು 5 ವರ್ಷದ ಸಾಲದ ಅವಧಿಯಲ್ಲಿ 9 % ಬಡ್ಡಿದದರಲ್ಲಿ ಪ್ರತಿ ತಿಂಗಳು 22,332 ರೂ. ಗಳ EMI ಪಾವತಿಸುತ್ತ ಸಾಲವನ್ನು ಮರುಪಾವತಿ ಮಾಡಬಹುದು.

Image Credit: Carwale
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in