Tata New CNG: 32 Km ಮೈಲೇಜ್ ಜೊತೆಗೆ ಬೆಲೆ ಕೂಡ ಕಡಿಮೆ, ಒಂದೇ ದಿನದಲ್ಲಿ 50 ಸಾವಿರ ಬುಕಿಂಗ್ ಕಂಡ ಟಾಟಾ ಕಾರ್.
ಪ್ರತಿ KG CNG ಗೆ 32 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ಟಾಟಾ ಕಾರ್.
Tata Punch iCNG: ಪ್ರತಿಷ್ಠಿತ ಕಾರ್ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ಹೊಸ ಮಾದರಿಯ ಕಾರ್ ಬಿಡುಗಡೆ ಮಾಡುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ.
ಇನ್ನು ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯ ಪೆಟ್ರೋಲ್, ಡಿಸೇಲ್, ಎಲೆಕ್ಟ್ರಿಕ್ ರೂಪಾಂತರದ ಜೊತೆಗೆ CNG ರೂಪಾಂತರದ ಸಹ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಇದೀಗ ಟಾಟಾ ಕಂಪನಿ ಬಿಡುಗಡೆ ಮಾಡಿದ ಈ CNG ಕಾರ್ ಬಗ್ಗೆ ನಾವೀಗ ಮಾಹಿತಿ ತಿಳಿಯೋಣ.
Tata Punch iCNG Features
ಟಾಟಾ ಪಂಚ್ ನಲ್ಲಿ ಸುರಕ್ಷತೆಗಾಗಿ ಉತ್ತಮ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. CNG ತುಂಬುವಾಗ ಕಾರನ್ನು ನಿಲ್ಲಿಸಲು ಮೈಕ್ರೋ ಸ್ವಿಚ್ ನೀಡಲಾಗಿದೆ. ಟಾಟಾ ಪಂಚ್ iCNG ಯಲ್ಲಿ ಧ್ವನಿ ಸಹಾಯದ ಎಲೆಕ್ಟ್ರಿಕ್ ಸನ್‌ರೂಫ್, LED DRL , 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳು, 7-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಂ, ರೈನ್ ಸೆನ್ಸಿಂಗ್ ವೈಪರ್‌ಗಳು, ಎತ್ತರ ಹೊಂದಾಣಿಕೆ ಡ್ರೈವರ್ ಸೀಟ್ ಲಭ್ಯವಿದೆ.
Tata Punch iCNG Mileage And Engine Capacity
ಟಾಟಾ SUV 1 .2 ಲೀಟರ್ 3-ಸಿಲಿಂಡರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಇದು ಗರಿಷ್ಠ 86 hp ಶಕ್ತಿಯನ್ನು ಮತ್ತು 113 NM ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. CNG ನಲ್ಲಿ, Tata Punch 6,000 rpm ನಲ್ಲಿ 72 hp ಯ ಗರಿಷ್ಠ ಶಕ್ತಿಯನ್ನು ಮತ್ತು 3,230 rpm ನಲ್ಲಿ 103 NM ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. CNG ರೂಪಾಂತರದಲ್ಲಿ 5 ಸ್ಪೀಡ್ AMT ಗೇರ್‌ಬಾಕ್ಸ್ ಅನ್ನು ನೀಡಿದೆ.
Tata Punch iCNG ಮೈಲೇಜ್ ಬಗ್ಗೆ ಮಾತಾಡುದಾದರೆ, ಪೆಟ್ರೋಲ್ ನಲ್ಲಿ 24 ಕಿಲೋಮೀಟರ್ ಮತ್ತು ಪ್ರತಿ KG CNG ಗೆ 32 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತದೆ.
Tata Punch iCNG Price
Tata Punch iCNG ಆರಂಭಿಕ ಬೆಲೆ ಎಕ್ಸ್ ಶೋರೂಮ್ ಪ್ರಕಾರ 7 .10 ಲಕ್ಷ ಆಗಿದೆ. Tata Punch ಹ್ಯುಂಡೈ ಎಕ್ಸೆಟರ್, ಮಾರುತಿ ಫ್ರಾಂಕ್ಸ್, ರೆನಾಲ್ಟ್ ಕಿಗರ್, ಮಾರುತಿ ಬ್ರೆಝಾ, ಹ್ಯುಂಡೈ ವೆನ್ಯೂ ವಾಹನಗಳೊಂದಿಗೆ ಸ್ಪರ್ದಿಸುತ್ತದೆ.