Punch SUV: ದಾಖಲೆಯ ಬುಕಿಂಗ್ ಕಾಣುತ್ತದೆ ಟಾಟಾ ಪಂಚ್, ಬೆಲೆ ಕೇವಲ 6 ಲಕ್ಷ, 26km ಮೈಲೇಜ್.

ಮಾರುಕಟ್ಟೆಯಲ್ಲಿ ದಾಖಲೆಯ ಬುಕಿಂಗ್ ಕಾಣುತ್ತಿದೆ ಟಾಟಾ ಪಂಚ್

Tata Punch Price And Feature: ಪ್ರತಿಷ್ಠಿತ ಕಾರ್ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ಹೊಸ ಹೊಸ ಮಾದರಿಯ ಕಾರ್ ಬಿಡುಗಡೆ ಮಾಡುವ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ.

ಇನ್ನು ಮಾರುಕಟ್ಟೆಯಲ್ಲಿ ಟಾಟಾ ಕಂಪನಿಯ ಪೆಟ್ರೋಲ್, ಡಿಸೇಲ್ ಎಲೆಕ್ಟ್ರಿಕ್, ಸಿಎನ್ ಜಿ ರೂಪಾಂತರದ ಕಾರ್ ಅನ್ನು ಬಿಡುಗಡೆ ಮಾಡಿದೆ. ಇದೀಗ ತನ್ನ ನೂತನ ಮಾದರಿಯ ಕಾರನ್ನು ಬಿಡುಗಡೆ ಮಾಡಿದ್ದು ಪೆಟ್ರೋಲ್ ಹಾಗೂ ಸಿಎನ್ ಜಿ ರೂಪಾಂತರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಕಾರ್ ಬಿಡುಗಡೆಗೊಳ್ಳುತ್ತಿದ್ದಂತೆ ಅಧಿಕ ಬುಕ್ಕಿಂಗ್ ಕಂಡುಕೊಂಡಿದೆ.

Tata Punch Price And Feature
Image Credit: Carandbike

ಮಾರುಕಟ್ಟೆಯಲ್ಲಿ ದಾಖಲೆಯ ಬುಕಿಂಗ್ ಕಾಣುತ್ತದೆ ಟಾಟಾ ಪಂಚ್
ಮಾರುಕಟ್ಟೆಯಲ್ಲಿ ಟಾಟಾ ಪಂಚ್ ಬಾರಿ ಸಂಚಲನ ಮೂಡಿಸುತ್ತಿದೆ. ಕಂಪನಿಯ ಜನಪ್ರಿಯ ಮೈಕ್ರೊ ಎಸ್‌ಯುವಿ ‘PUNCH’ ಹೆಚ್ಚು ಮಾರಾಟವಾದ ಕಾರಾಗಿ ಹೊರಹೊಮ್ಮಿದೆ. ಈ ವರ್ಷದ ಮೊದಲಾರ್ಧ ಮತ್ತು ಮೂರು ತಿಂಗಳಲ್ಲಿ ಈ ಕಾರು ಭಾರಿ ಪ್ರಮಾಣದಲ್ಲಿ ಮಾರಾಟವಾಗಿದೆ. ಜೂನ್‌ ನಲ್ಲಿ 18,238, ಮಾರ್ಚ್‌ ನಲ್ಲಿ 17,547 ಮತ್ತು ಏಪ್ರಿಲ್‌ ನಲ್ಲಿ 19,158 ಯೂನಿಟ್‌ ಗಳು ಮಾರಾಟವಾಗಿ ಹೊಸ ದಾಖಲೆ ಬರೆದಿದೆ ಎನ್ನಬಹುದು.

ಬೆಲೆ ಕೇವಲ 6 ಲಕ್ಷ, 26km ಮೈಲೇಜ್
ಟಾಟಾ ಪಂಚ್ ಕಾರ್ 1.2 ಲೀಟರ್ ನ್ಯಾಚುಲರ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆಯಲಿದ್ದು 88 bhp ಗರಿಷ್ಟ ಪವರ್ ಹಾಗೂ 115 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಇದನ್ನು ಖರೀದಿಸಬಹುದಾಗಿದೆ. ಇನ್ನು ಈ ಕಾರ್ ನಲ್ಲಿ ಎರಡು ಸಿಲಿಂಡರ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಟಾಟಾ ಪಂಚ್ ಸಿಎನ್ ಜಿ ಕಾರ್ 1.2 ಲೀಟರ್ ಎಂಜಿನ್ ಪಡೆಯಲಿದ್ದು 7.3bhp ಗರಿಷ್ಟ ಪವರ್ ಹಾಗೂ 103 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಟಾಟಾ ಪಂಚ್ ಪೆಟ್ರೋಲ್ ರೂಪಾಂತರವು 18 ರಿಂದ 20 ಕಿಲೋಮೀಟರ್ ಮೈಲೇಜ್ ನೀಡಿದರೆ CNG ಮಾದರಿ 26 ಕಿಲೋಮೀಟರ್ ಮೈಲೇಜ್ ನೀಡಲಿದೆ.

Tata Punch Price In India
Image Credit: Carwale

ಮಾರುಕಟ್ಟೆಯಲ್ಲಿ ಟಾಟಾ ಪಂಚ್ ನಾಲ್ಕು ರೂಪಾಂತರದಲ್ಲಿ ಲಭ್ಯವಿದ್ದು ನೂತನ ಮಾದರಿ 6 .13 ರಿಂದ 10 .20 ಲಕ್ಷ ಎಕ್ಸ್ ಶೋ ರೂಮ್ ಬೆಲೆಯಲ್ಲಿ ಲಭ್ಯವಾಗಲಿದೆ. ನೀವು ಪಂಚ್ ಮಾದರಿಯಲ್ಲಿ Connected Car Tech, 7-inch touchscreen display, 7-inch semi-digital instrument panel, auto climate control and cruise control , Dual Front Airbag, ABS (Antilock Braking System), EBD (Electronic Brakeforce Distribution) Rear Defogger, Rear Parking Sensor, Rear View Camera and ISOFIX Anchors ಫೀಚರ್ ಅನ್ನು ಕಾಣಬಹುದಾಗಿದೆ.

Join Nadunudi News WhatsApp Group

Tata Punch Mileage
Image Credit: Carwale

Join Nadunudi News WhatsApp Group