Tata Sierra And Tata Safari Comparison: ಎಲ್ಲರಿಗೂ ಕೂಡ ಜೀವನದಲ್ಲಿ ಒಮ್ಮೆಯಾದರೂ ಕಾರ್ ಖರೀದಿ ಮಾಡಬೇಕು ಅನ್ನುವ ಆಸೆ ಇದ್ದೆ ಇರುತ್ತದೆ. ಕುಟುಂಬದ ಜೊತೆ ಪ್ರಯಾಣ ಮಾಡಲು ಒಂದೊಳ್ಳೆ ಕಾರ್ ಹುಡುಕುತ್ತಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ. ಇದೀಗ ಟಾಟಾ ಸಿಯೆರಾ ಮತ್ತು ಟಾಟಾ ಸಫಾರಿ ಎರಡು ಆಯ್ಕೆಗಳು ಈಗ ನಿಮ್ಮ ಮುಂದಿದೆ. ಒಂದು 90 ರ ದಶಕದ ನೆನಪು ಮೂಡಿಸುವ ಟಾಟಾ ಸಿಯೆರಾ ಹೊಸ ಅವತಾರದಲ್ಲಿ ಮತ್ತು ಇನ್ನೊಂದು ದೊಡ್ಡ ಕುಟುಂಬಗಳ ಮೆಚ್ಚಿನ SUV ಆಗಿರುವ ಟಾಟಾ ಸಫಾರಿ. ಈ ಎರಡು ಕಾರ್ ಗಳ ಡಿಸೈನ್, ವೈಶಿಷ್ಟ್ಯಗಳು, ಕಾರ್ಯಕ್ಷಮತೆ ಮತ್ತು ಬೆಲೆಯ ಆಧಾರದ ಮೇಲೆ ಹೋಲಿಕೆ ಮಾಡಿ ಯಾವುದು 2026 ರಲ್ಲಿ ಉತ್ತಮ ಆಯ್ಕೆ ಎಂದು ನೋಡೋಣ.
ಟಾಟಾ Sierra ಮತ್ತು ಟಾಟಾ Safari ಬೆಲೆ
- ಟಾಟಾ ಸಿಯೆರಾ ಎಕ್ಸ್ ಶೋರೂಮ್ ಬೆಲೆ 11.49 ಲಕ್ಷದಿಂದ ಆರಂಭವಾಗಿ 21.29 ಲಕ್ಷ ಆಗಿದೆ. ಕರ್ನಾಟಕದಲ್ಲಿ ಆನ್-ರೋಡ್ ಬೆಲೆ 13 ಲಕ್ಷದಿಂದ 25 ಲಕ್ಷದವರೆಗೆ ಆಗಬಹುದು. ಇನ್ನು ಬುಕಿಂಗ್ ಡಿಸೆಂಬರ್ 16 ರಿಂದ ಆರಂಭವಾಗಿದೆ ಮತ್ತು ಡೆಲಿವರಿ ಜನವರಿ 15, 2026 ರಿಂದ ಪ್ರಾರಂಭವಾಗುತ್ತದೆ.
- ಟಾಟಾ ಸಿಯೆರಾ ಗೆ ಹೋಲಿಕೆ ಮಾಡಿದರೆ ಟಾಟಾ ಸಫಾರಿ ಸ್ವಲ್ಪ ದುಬಾರಿ ಆಗಿದೆ. ಟಾಟಾ ಸಫಾರಿ ಪೆಟ್ರೋಲ್ ಮಾದರಿ ಬೆಲೆ 13.29 ಲಕ್ಷದಿಂದ 25.20 ಲಕ್ಷದವರೆಗೆ ಇದೆ. ಇನ್ನು ಡಿಸೇಲ್ ಮಾದರಿ 14.66 ಲಕ್ಷದಿಂದ ಆರಂಭವಾಗುತ್ತದೆ. ಬಜೆಟ್ ಕಡಿಮೆ ಇದ್ದರೆ ಟಾಟಾ ಸಿಯೆರಾ ಒಳ್ಳೆಯ ಆಯ್ಕೆ, ಇನ್ನು ಟಾಟಾ ಸಫಾರಿ ದೊಡ್ಡ ಕುಟುಂಬಗಳಿಗೆ ಉತ್ತಮವಾಗಿದೆ.
ಟಾಟಾ Sierra ಮತ್ತು ಟಾಟಾ Safari ಡಿಸೈನ್
- ಟಾಟಾ ಸಿಯೆರಾ ಉದ್ದ 4,340 mm, ಅಗಲ 1,841 mm, ಎತ್ತರ 1,715 mm, ವೀಲ್ ಬೇಸ್ 2,730 mm. ಗ್ರೌಂಡ್ ಕ್ಲಿಯರೆನ್ಸ್ 205 mm ಮತ್ತು ಬೂಟ್ ಸ್ಪೇಸ್ 622 ಲೀಟರ್ ಅನ್ನು ಪಡೆದುಕೊಂಡಿದೆ.
- ಟಾಟಾ ಸಫಾರಿ ಉದ್ದ 4668 mm, ಅಗಲ 1922 mm, ಎತ್ತರ 1795 mm ಅನ್ನು ಪಡೆದುಕೊಂಡಿದೆ.
ಟಾಟಾ Sierra ಮತ್ತು ಟಾಟಾ Safari ಎಂಜಿನ್ ಸಾಮರ್ಥ್ಯ
- ಟಾಟಾ ಸಿಯೆರಾ 3 ಇಂಜಿನ್ ಆಯ್ಕೆಯೊಂದಿಗೆ ಬರುತ್ತದೆ. 1.5-litre naturally aspirated petrol (120 PS), 1.5-litre TGDi turbo petrol (170 PS, 280 Nm) and 1.5-litre diesel (115 PS). ಇವುಗಳನ್ನು 6-ಸ್ಪೀಡ್ ಮ್ಯಾನುಯಲ್ ಅಥವಾ ಆಟೋಮ್ಯಾಟಿಕ್ ನೊಂದಿಗೆ ಪೇರ್ ಮಾಡಬಹುದು. ಟಾಟಾ ಸಿಯೆರಾ 18 ರಿಂದ 30 kmpl ಮೈಲೇಜ್ ನೀಡುತ್ತದೆ.
- ಟಾಟಾ ಸಫಾರಿ1.5 L Hyperion Turbo Petrol (170 PS, 280 Nm) ಅಥವಾ 2.0 L ಡೀಸೆಲ್ (170 PS, 350 Nm) . ಇನ್ನು ಪೆಟ್ರೋಲ್ ನಲ್ಲಿ 14 ರಿಂದ 15 kmpl ಮೈಲೇಜ್ ನೀಡುತ್ತದೆ. ಡೀಸೆಲ್ ನಲಿ 16 kmpl ವರೆಗೆ ಮೈಲೇಜ್ ನೀಡುತ್ತದೆ.
ಟಾಟಾ Sierra ಮತ್ತು ಟಾಟಾ Safari ವೈಶಿಷ್ಟ್ಯಗಳು
- ಟಾಟಾ ಸಿಯೆರಾ ಕಾರಿನಲ್ಲಿ ಅತಿದೊಡ್ಡ Panorama Sunroof, 360 Degree Camera, Level 2 ADAS, Theater Pro Triple Display, JBL 12 Speaker Soundbar, Ventilated Seats ಗಳನ್ನೂ ಅಳವಡಿಸಲಾಗಿದೆ. ಇನ್ನು ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು, ABS ವೊಂದಿಗೆ ESC, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಸ್ಟ್ಯಾಂಡರ್ಡ್ ಅನ್ನು ಅಳವಡಿಸಲಾಗಿದೆ.
- ಟಾಟಾ ಸಫಾರಿ 14.53-inch touchscreen, Dolby Atmos sound, panoramic sunroof, ventilated seats, 65 W ಚಾರ್ಜಿಂಗ್ ಅನ್ನು ಪಡೆದುಕೊಂಡಿದೆ. ಇನ್ನು ಸುರಕ್ಷತೆಗಾಗಿ Level-2 ADAS, 7 airbags, 5-star Bharat NCAP rating ಅನ್ನು ಪಡೆದುಕೊಂಡಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

