Tata Sierra Features: ಇದೀಗ 22 ವರ್ಷಗಳ ನಂತರ ಹೊಸ ರೂಪದಲ್ಲಿ ಮರಳಿ ಬಂದಿದೆ ಟಾಟಾ ಸಿಯೆರಾ 2025. ಹೌದು, ಟಾಟಾ ಸಿಯೆರಾ (Tata Sierra) SUV ಮಾರುಕಟ್ಟೆಗೆ ಕಾಲಿಟ್ಟಿದೆ. ಇದು ಅತ್ಯಾಧುನಿಕ ವಿನ್ಯಾಸವನ್ನು ಒಳಗೊಂಡಿದ್ದು, ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ನಾವೀಗ ಹೊಸ ಟಾಟಾ ಸಿಯೆರಾ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿವೆ ಎಂಬುದರ ಕುರಿತು ಸಂಪೂರ್ಣವಾದ ಮಾಹಿತಿಯನ್ನ ತಿಳಿದುಕೊಳ್ಳೋಣ.
ಟಾಟಾ ಸಿಯೆರಾ ಬೆಲೆ
ಟಾಟಾ ಮೋಟಾರ್ಸ್ ನವೆಂಬರ್ 25, 2025 ರಂದು ಟಾಟಾ ಸಿಯೆರಾ SUV ಅನ್ನು ಲಾಂಚ್ ಮಾಡಿದೆ, ಇದರ ಆರಂಭಿಕ ಬೆಲೆ ಸುಮಾರು 11.49 ಲಕ್ಷದವರೆಗೆ (ಎಕ್ಸ್-ಶೋರೂಮ್) ಇರಬಹುದು. ಪೂರ್ಣ ಬೆಲೆಗಳು ಡಿಸೆಂಬರ್ ಮೊದಲ ವಾರದಲ್ಲಿ ಬಹಿರಂಗವಾಗುತ್ತವೆ. ಬುಕಿಂಗ್ ಡಿಸೆಂಬರ್ 16 ರಿಂದ ಆರಂಭವಾಗುತ್ತದೆ, ಮತ್ತು ಡೆಲಿವರಿ ಜನವರಿ 15, 2026 ರಿಂದ ಪ್ರಾರಂಭವಾಗುತ್ತದೆ. ಟಾಟಾ ಸಿಯೆರಾ 6 ಬಣ್ಣಗಳ ಆಯ್ಕೆಯೊಂದಿಗೆ ಬರುತ್ತದೆ. ಮುನ್ನಾರ್ ಮಿಸ್ಟ್ (Plants), ಅಂಡಮಾನ್ ಅಡ್ವೆಂಚರ್ (Yellow), ಬಂಗಾಳ ರೋಜ್ (Red), ಕೂರ್ಗ್ ಕ್ಲೌಡ್ಸ್ (Chinnabi), ಪ್ಯೂರ್ ಗ್ರೇಯ್ ಮತ್ತು ಪ್ರಿಸ್ಟಿನ್ ವೈಟ್ ಬಣ್ಣಗಳಲ್ಲಿ ಲಭ್ಯ ಇದೆ.
ಒಳಾಂಗಣ ಮತ್ತು ಹೊರಾಂಗಣ ವೈಶಿಷ್ಟ್ಯಗಳು
ಹಳೆಯ ಡಿಸೈನ್ ಗಳನ್ನ ನೆನಪಿನಲ್ಲಿ ಇಟ್ಟುಕೊಂಡು ಆಧುನಿಕ ತಂತ್ರಜ್ಞಾನವನ್ನು ಸೇರಿಸಿ ಹೊಸ ಟಾಟಾ ಸಿಯೆರಾ ಅನ್ನು ವಿನ್ಯಾಸ ಗೊಳಿಸಿದೆ. ಮುಂಭಾಗದಲ್ಲಿ ಕನೆಕ್ಟೆಡ್ LED DRLಗಳು, ಸ್ಲಿಮ್ LED ಹೆಡ್‌ಲ್ಯಾಂಪ್‌ಗಳು (ಭಾರತದ ಅತಿ ಸೂಕ್ಷ್ಮ 17 ಮಿ.ಮೀ. ಬೈ-LED), ಇಲ್ಯುಮಿನೇಟೆಡ್ ಟಾಟಾ ಲೋಗೋ ಮತ್ತು ಟೆಕ್ಸ್ಟ್‌ಚರ್ಡ್ ಗ್ರಿಲ್ ಅನ್ನು ಅಳವಡಿಸಲಾಗಿದೆ. ಇನ್ನು ಟ್ರಿಪಲ್ಸ್ಕ್ರೀ ನ್ ಡ್ಯಾಷ್ ಬೋರ್ಡ್, 12.3-ಇಂಚ್ ಸೆಂಟ್ರಲ್ ಟಚ್ ಸ್ಕ್ರೀನ್, ಪ್ಯಾಸೆಂಜರ್ ಸೈಡ್ ಡಿಸ್‌ಪ್ಲೇ ಮತ್ತು ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಟಾಟಾದ ಮೊದಲ Ethernet ಆಧಾರಿತ TiDAL 2.0 ಸಿಸ್ಟಮ್ ಹೊಂದಿದ್ದು, 1 Gbps ಡೇಟಾ ಸ್ಪೀಡ್, 5G ಕನೆಕ್ಟಿವಿಟಿ ಮತ್ತು OTA ಅಪ್‌ಡೇಟ್‌ಗಳನ್ನು ನೀಡುತ್ತದೆ. ಹಿಂಭಾಗದ ಸೀಟ್‌ಗಳಲ್ಲಿ ಫ್ಲ್ಯಾಟ್ ಫ್ಲೋರ್ ಮತ್ತು ಒಳ್ಳೆಯ ಲೆಗ್ ರೂಮ್ ಇದ್ದು, ಕುಟುಂಬ ಪಯಣಕ್ಕೆ ಸೂಕ್ತವಾಗಿದೆ.
ಆಫ್ ರೋಡ್ ಸಾಮರ್ಥ್ಯ
ಅಪ್ರೋಚ್ ಕೋನ್ 26.5°, ಡಿಪಾರ್ಚರ್ ಕೋನ್ 31.6°, ರ್ಯಾಂಪ್ ಓವರ್ 23.1°, ಗ್ರೌಂಡ್ ಕ್ಲಿಯರೆನ್ಸ್ 205 ಮಿ.ಮೀ., ನೀರು ದಾಟುವ ಸಾಮರ್ಥ್ಯ 450 ಮಿ.ಮೀ. ಮತ್ತು ಟರ್ನಿಂಗ್ ಸರ್ಕಲ್ 10.6 ಮೀಟರ್. ನಾರ್ಮಲ್, ವೆಟ್ ಮತ್ತು ರಫ್ ಮೋಡ್‌ಗಳು ಟ್ರ್ಯಾಕ್ಷನ್ ನಿರ್ವಹಣೆಗೆ ಸಹಾಯ ಮಾಡುತ್ತವೆ. ಆದರೂ, FWD ಮಾತ್ರವಾದ್ದರಿಂದ ಕಠಿಣ ಆಫ್ ರೋಡ್‌ಗೆ ಸೀಮಿತ, ಲೈಟ್ ಆಫ್ ರೋಡಿಂಗ್, ಮಳೆಯ ರಸ್ತೆಗಳು ಅಥವಾ ಲಡಾಖ್ ಪಯಣಕ್ಕೆ ಚೆನ್ನಾಗಿ ಸರಿಹೊಂದುತ್ತದೆ. ಭವಿಷ್ಯದಲ್ಲಿ AWD ಆಯ್ಕೆ ಬರಬಹುದು.
ಸುಧಾರಿತ ಸುರಕ್ಷತೆ
ಸುರಕ್ಷತೆಗಾಗಿ ಲೆವೆಲ್-2 ADAS (ಲೇನ್ ಅಸಿಸ್ಟ್, ಅಡಾಪ್ಟಿವ್ ಕ್ರೂಜ್ ಕಂಟ್ರೋಲ್, ಆಟೋನಾಮಸ್ ಎರ್‌ಬ್ರೇಕಿಂಗ್), ಮತ್ತು 6 ಏರ್ ಬ್ಯಾಗ್ ಗಳು, ABS ವೊಂದಿಗೆ ESC, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಸ್ಟ್ಯಾಂಡರ್ಡ್ ಅನ್ನು ಅಳವಡಿಸಲಾಗಿದೆ. ಇದು ಕುಟುಂಬದ ಪ್ರಯಾಣಕ್ಕೆ ಸುರಕ್ಷಿತ ಆಯ್ಕೆಯಾಗಿದೆ.
ಇಂಜಿನ್ ಸಾಮರ್ಥ್ಯ ಹಾಗೂ ಎಲೆಕ್ಟ್ರಿಕ್ ಮಾದರಿ
ಟಾಟಾ ಸಿಯೆರಾ 2025 ರಲ್ಲಿ 3 ಇಂಜಿನ್ ಆಯ್ಕೆಯೊಂದಿಗೆ ಬರುತ್ತದೆ. 1.5-ಲೀಟರ್ ನ್ಯಾಚುರಲಿ ಅಸ್ಪಿರೇಟೆಡ್ ಪೆಟ್ರೋಲ್ (120 PS), 1.5-ಲೀಟರ್ TGDi ಟರ್ಬೋ ಪೆಟ್ರೋಲ್ (170 PS, 280 Nm) ಮತ್ತು 1.5-ಲೀಟರ್ ಡೀಜಲ್ (115 PS).ಇವುಗಳನ್ನು 6-ಸ್ಪೀಡ್ ಮ್ಯಾನುಯಲ್ ಅಥವಾ ಆಟೋಮ್ಯಾಟಿಕ್‌ನೊಂದಿಗೆ ಪೇರ್ ಮಾಡಬಹುದು. ಇನ್ನು EV ಮಾದರಿ ಡಿಸೆಂಬರ್ 2025 ಅಥವಾ ಜನವರಿ 2026 ರಲ್ಲಿ ಬರುತ್ತದೆ. ಅಂದಾಜು 500 ಕಿ.ಮೀ. ರೇಂಜ್, 160 ಕಿ.ಮೀ./ಗಂ.ಟಿ. ಟಾಪ್ ಸ್ಪೀಡ್ ಮತ್ತು ಡ್ಯುಯಲ್-ಮೋಟಾರ್ AWD ಆಯ್ಕೆ. ಬೆಲೆ ಸುಮಾರು 20 ರಿಂದ 25 ಲಕ್ಷಗಳು ಇರಬಹುದು. ಟಾಟಾ Sierra ಕಾರಿನ ಐಷಾರಾಮಿ ಫೀಚರ್ ಕಂಡು ಗ್ರಾಹಕರು ಫಿದಾ ಆಗಿದ್ದು ಸದ್ಯ ಹುಂಡೈ ಕ್ರೆಟಾ ಕಾರಿನ ಮತ್ತು KIA Seltos ಕಾರಿನ ಬೇಡಿಕೆ ಕಡಿಮೆಯಾಗುವ ಸಾಧ್ಯತೆ ಇದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

