Tata Sierra 29.9 Km Mileage Record: ಹೊಸದಾಗಿ ಕಾರ್ ಖರೀದಿ ಮಾಡುವವರು ಬೆಲೆ, ಮೈಲೇಜ್, ವೈಶಿಷ್ಟ್ಯ ಗಳ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಇದೀಗ ನೀವು ಹೆಚ್ಚಿನ ಮೈಲೇಜ್ ನೀಡುವ SUV ಕಾರ್ ಖರೀದಿ ಮಾಡಲು ಬಯಸುತ್ತಿದ್ದರೆ, ಈ ಮಾಹಿತಿ ನಿಮಗೆ ಅಗತ್ಯವಾಗಿದೆ. ಇದೀಗ ಹೊಸದಾಗಿ ಬಿಡುಗಡೆ ಆಗಿರುವ ಟಾಟಾ ಸಿಯೆರಾ ಸಖತ್ ಸ್ಟೈಲಿಶ್ ಆಗಿದ್ದು, ಹೆಚ್ಚಿನ ಮೈಲೇಜ್ ನೀಡುವುದರ ಮೂಲಕ ಇನ್ನಷ್ಟು ಗ್ರಾಹಕರನ್ನು ಆಕರ್ಷಣೆ ಮಾಡಿದೆ. ಇದೀಗ ನಾವು ನೂತನ ಸಿಯೆರಾದ ಬೆಲೆ ಎಷ್ಟು..? ಎಷ್ಟು ಮೈಲೇಜ್ ಕೊಡುತ್ತದೆ..? ಹಾಗೆ ಇದರ ವಿಶೇಷತೆ ಏನು..? ಅನ್ನುವುದರ ಕುರಿತು ಸಂಪೂರ್ಣ ಮಾಹಿತಿಯನ್ನ ತಿಳಿಯೋಣ.
ಟಾಟಾ ಸಿಯೆರಾ (Tata Sierra)
ಇದೀಗ 22 ವರ್ಷಗಳ ನಂತರ ಹೊಸ ರೂಪದಲ್ಲಿ ಮರಳಿ ಬಂದಿದೆ ಟಾಟಾ ಸಿಯೆರಾ 2025. ಟಾಟಾ ಮೋಟಾರ್ಸ್ ಇತ್ತೀಚಿಗಷ್ಟೇ ತನ್ನ ಹೊಸ ಬಹುನಿರೀಕ್ಷಿತ SUV ಸಿಯೆರಾವನ್ನು ಬಿಡುಗಡೆ ಮಾಡಿದ್ದು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೆಲವೇ ದಿನಗಳಲ್ಲಿ ಬುಕ್ಕಿಂಗ್ ಆರಂಭ ಆಗಲಿದ್ದು 2026 ರ ಜನವರಿ 15 ರಿಂದ ವಿತರಣೆ ಕೂಡ ಆರಂಭ ಆಗಲಿದೆ.
ದಾಖಲೆ ಬರೆದ ಟಾಟಾ ಸಿಯೆರಾ
ಟಾಟಾ ಸಿಯೆರಾ SUV ಇಂದೋರ್ ನ NATRAX ಟೆಸ್ಟ್ ಟ್ರ್ಯಾಕ್ ನಲ್ಲಿ ನಡೆದ 12 ಗಂಟೆಗಳ ಅವಧಿಯಲ್ಲಿ ಅತಿ ಹೆಚ್ಚು ಮೈಲೇಜ್ ಗಳಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ (Book Of Recrod) ನಲ್ಲಿ ದಾಖಲೆಯನ್ನು ಬರೆದಿದೆ. ಇದು VW Taigun ನ 29.8 ಕಿಲೋಮೀಟರ್ ರೆಕಾರ್ಡ್ ಸ್ವಲ್ಪ ಅಂತರದಿಂದ ಹಿಂದಿಕ್ಕಿದೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನ ಹಿನ್ನೆಲೆ ಬಗ್ಗೆ ನಾವೀಗ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಿನ್ನೆಲೆ
ಟಾಟಾ ಸಿಯೆರಾ 1.5 ಲೀಟರ್ ಹೈಪರಿಯನ್ ಅರ್ಬೊ ಪೆಟ್ರೋಲ್ ಇಂಜಿನ್ ನೊಂದಿಗೆ 12 ಗಂಟೆಗಳಲ್ಲಿ ಸುಮಾರು 800 ಕಿಲೋಮೀಟರ್ ಚಲಿಸಿದೆ. ಇದರ ಸರಾಸರಿ ವೇಗ 65 – 70 ಕಿಲೋಮೀಟರ್ / ಗಂಟೆ. ಮಧ್ಯದಲ್ಲಿ ಡ್ರೈವರ್ ಬದಲಾವಣೆಗೆ ಸ್ವಲ್ಪ ನಿಲ್ಲಿಸಲಾಗಿದೆ. ಈ ಟೆಸ್ಟ್ ನವೆಂಬರ್ 30 2025 ರಂದು ನಡೆಸಲಾಗಿದೆ. ಇನ್ನು ಈ ಟೆಸ್ಟ್ ನಲ್ಲಿ ಟ್ರಾಫಿಕ್, ರಸ್ತೆ ಏರಿಳಿತ, ಅಥವಾ ಅನಗತ್ಯ ಬ್ರೇಕಿಂಗ್ ಇಲ್ಲದೆ, ಇಂಜಿನ್ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಹೈಪರಿಯನ್ ಇಂಜಿನ್ ನಲ್ಲಿ AI – ಆಪ್ಟಿಮೈಸ್ಡ್ 350 ಬಾರ್ ಇಂಜೆಕ್ಷನ್, CNC-ಮ್ಯಾಚಿನ್ಡ್ ಏರ್ ಪಾಥ್‌ಗಳು ಮತ್ತು ವ್ಯಾರಿಯಬಲ್ ಜಿಯಾಮೆಟ್ರಿ ಟರ್ಬೋಚಾರ್ಜರ್ ಇದ್ದು, ಇಂಧನದ ಯಾವುದೇ ಹಾನಿ ಇಲ್ಲದಂತೆ ಸೂಕ್ಷ್ಮತೆಯೊಂದಿಗೆ ಇಂಧನವನ್ನು ಬಿಡುಗಡೆ ಮಾಡುತ್ತದೆ ಮತ್ತು ಇದರಿಂದ ದೀರ್ಘ ಚಾಲನೆಯಲ್ಲಿ ಸ್ಥಿರತೆ ಮತ್ತು ಇಂಧನ ಉಳಿತಾಯ ಸಾಧ್ಯವಾಗುತ್ತದೆ. ಆದರೆ ಟಾಟಾ ಸಿಯೆರಾ ಗ್ರಾಹಕರಿಗೆ ದೈನಂದಿನ ಚಾಲನೆಯಲ್ಲಿ 17 ರಿಂದ 18 ಕಿಲೋಮೀಟರ್ ಮೈಲೇಜ್ ಮಾತ್ರ ಕೊಡುತ್ತದೆ.
ಇತರ ಸ್ಪರ್ದಿಗಳೊಂದಿಗೆ ಟಾಟಾ ಸಿಯೆರಾ ಹೋಲಿಕೆ
* VW ಟೈಗುನ್ 1.0 ಲೀಟರ್ TSI ಇಂಜಿನ್ ಜೊತೆಗೆ 2024 ರಲ್ಲಿ 24 ಗಂಟೆಯಲ್ಲಿ 29.8 ಕಿಲೋಮೀಟರ್ ತಲುಪಿದೆ. ಆದರೆ ಟಾಟಾ ಸಿಯೆರಾ 12 ಗಂಟೆಗಳಲ್ಲಿ VW ಟೈಗುನ್ ನ ದಾಖಲೆಯನ್ನು ಹಿಂದಿಕ್ಕಿದೆ.
* ಇತರ ಸ್ಪರ್ದಿಗಳಾದ, ಹುಂಡೈ ಕ್ರೆಟಾ, ಕೀಯ ಸೆಲ್ಟೋಸ್, ಸ್ಕೊಡಾ ಕುಶಾಕ್ ಕಾರುಗಳಿಗಿಂತ ಟಾಟಾ ಸಿಯೆರಾ ದಾಖಲೆ ಉತ್ತಮವಾಗಿದೆ.
* ಇನ್ನು ಡಿಸೇಲ್ ಆಯ್ಕೆಯಲ್ಲಿ ಕೂಡ ಟಾಟಾ ಸಿಯೆರಾ 1.5 ಲೀಟರ್ ಕ್ರಯೋಜೆಟ್ ಇಂಜಿನ್ ನೊಂದಿಗೆ 22-24 ಕಿಲೋಮೀಟರ್ ARAI ಸಾಧಿಸುತ್ತದೆ, ಇದು ಮಾರುತಿ ವಿಟಾರಾಗಿಂತ ಉತ್ತಮವಾಗಿದೆ.
ಮೈಲೇಜ್
ಟಾಟಾ ಸಿಯೆರದಲ್ಲಿ 1.5 ಲೀಟರ್ ಹೈಪಿರಿಯನ್ TGDi ಇಂಜಿನ್ 158 Bhp ಶಕ್ತಿ ಮತ್ತು 255 Nm ಟಾರ್ಕ್ ಉತ್ಪದಿಸುತ್ತದೆ. 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನಾವು ಟಾಟಾ Sierra ಕಾರಿನಲ್ಲಿ ಕಾಣಬಹುದಾಗಿದೆ. ಇದರ ಜೊತೆಗೆ 0 – 100 ಕಿಲೋಮೀಟರ್ 9.46 ಸೆಕೆಂಡ್ ನಲ್ಲಿ ಸಾಧ್ಯವಾಗುತ್ತದೆ. ಇನ್ನು ಡಿಸೇಲ್ ಆಯ್ಕೆಯಲ್ಲಿ 118 bhp ಮತ್ತು 260 – 280 Nm ಟಾರ್ಕ್ ಉತ್ಪದಿಸುತ್ತದೆ. 6 ಸ್ಪೀಡ್ ಆಟೋ ಮಾನ್ಯುಯಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ARAI ಪ್ರಕಾರ ಟರ್ಬೊ ಪೆಟ್ರೋಲ್ ನಲ್ಲಿ 18 ಕಿಲೋಮೀಟರ್ ಮೈಲೇಜ್ ಮತ್ತು ಡೀಸೆಲ್ ನಲ್ಲಿ 22 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
ವೈಶಿಷ್ಟ್ಯಗಳು
ಟಾಟಾ ಸಿಯೆರಾ ಕಾರಿನಲ್ಲಿ ಅತಿದೊಡ್ಡ ಪ್ಯಾನೋರಮ ಸನ್ ರೂಪ್, 360 ಡಿಗ್ರಿ ಕ್ಯಾಮರಾ, ಲೆವೆಲ್ 2 ADAS, ಥಿಯೇಟರ್ ಪ್ರೊ ಟ್ರಿಪಲ್ ಡಿಸ್ ಪ್ಲೇ, JBL 12 ಸ್ಪೀಕರ್ ಸೌಂಡ್ಬ್ಯಾರ್, ವೆಂಟಿಲೇಟೆಡ್ ಸೀಟ್ ಗಳನ್ನೂ ಅಳವಡಿಸಲಾಗಿದೆ.
ಟಾಟಾ ಸಿಯೆರಾ ಬೆಲೆ
ಟಾಟಾ ಸಿಯೆರಾ SUV ಆರಂಭಿಕ ಬೆಲೆ ಸುಮಾರು 11.49 ಲಕ್ಷದಿಂದ 18.49 ಲಕ್ಷದ ವರೆಗೆ ಇದೆ. ಇನ್ನು ಬುಕಿಂಗ್ ಡಿಸೆಂಬರ್ 16 ರಿಂದ ಆರಂಭವಾಗುತ್ತದೆ ಮತ್ತು ಡೆಲಿವರಿ ಜನವರಿ 15, 2026 ರಿಂದ ಪ್ರಾರಂಭವಾಗುತ್ತದೆ. ಟಾಟಾ ಸಿಯೆರಾ 6 ಬಣ್ಣಗಳ ಆಯ್ಕೆಯೊಂದಿಗೆ ಬರುತ್ತದೆ. ಮುನ್ನಾರ್ ಮಿಸ್ಟ್ (Plants), ಅಂಡಮಾನ್ ಅಡ್ವೆಂಚರ್ (Yellow), ಬಂಗಾಳ ರೋಜ್ (Red), ಕೂರ್ಗ್ ಕ್ಲೌಡ್ಸ್ (Chinnabi), ಪ್ಯೂರ್ ಗ್ರೇಯ್ ಮತ್ತು ಪ್ರಿಸ್ಟಿನ್ ವೈಟ್ ಬಣ್ಣಗಳಲ್ಲಿ ಲಭ್ಯ ಇದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

