Tata Sierra Car EMI Calculation: ಎಲ್ಲರಿಗೂ ಕೂಡ ಜೀವನದಲ್ಲಿ ಒಮ್ಮೆಯಾದರೂ ಕಾರ್ ಖರೀದಿ ಮಾಡಬೇಕು ಅನ್ನುವ ಆಸೆ ಇದ್ದೆ ಇರುತ್ತದೆ. ಕುಟುಂಬದ ಜೊತೆ ಪ್ರಯಾಣ ಮಾಡಲು ಒಂದೊಳ್ಳೆ ಕಾರ್ ಹುಡುಕುತ್ತಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ. ಇತ್ತೀಚಿಗೆ ಟಾಟಾ ಕಂಪನಿ Sierra ಕಾರ್ ಲಾಂಚ್ ಮಾಡಿದ್ದು ದೇಶದಲ್ಲಿ ದಾಖಲೆಯ ಬುಕಿಂಗ್ ಆಗಿರುವುದನ್ನು ನೀವು ಗಮನಿಸಬಹುದು. 90 ರ ದಶಕದ ನೆನಪು ಮೂಡಿಸುವ ಟಾಟಾ ಸಿಯೆರಾ ಹೊಸ ಅವತಾರದಲ್ಲಿ ಇದೀಗ ಮಾರುಕಟ್ಟೆಗೆ ಕಾಲಿಟ್ಟಿದೆ. ನೀವು ಕೂಡ ಟಾಟಾ Sierra ಕಾರ್ ಖರೀದಿಸುವ ಯೋಜನೆ ಹಾಕಿಕೊಂಡಿದ್ದರೆ, ಕಾರಿನ ಬೆಲೆ, ಕಾರಿನ ಫೀಚರ್ ಮತ್ತು EMI ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಟಾಟಾ Sierra ಬೆಲೆ
ಟಾಟಾ ಸಿಯೆರಾ ಎಕ್ಸ್ ಶೋರೂಮ್ ಬೆಲೆ 11.49 ಲಕ್ಷದಿಂದ ಆರಂಭವಾಗಿ 21.29 ಲಕ್ಷ ಆಗಿದೆ. ಕರ್ನಾಟಕದಲ್ಲಿ ಆನ್-ರೋಡ್ ಬೆಲೆ 13 ಲಕ್ಷದಿಂದ 25 ಲಕ್ಷದವರೆಗೆ ಆಗಬಹುದು. ಇನ್ನು ಬುಕಿಂಗ್ ಡಿಸೆಂಬರ್ 16 ರಿಂದ ಆರಂಭವಾಗಿದೆ ಮತ್ತು ಡೆಲಿವರಿ ಜನವರಿ 15, 2026 ರಿಂದ ಪ್ರಾರಂಭವಾಗುತ್ತದೆ. ಮೊದಲ ದಿನವೇ 70,000 ಕ್ಕೂ ಹೆಚ್ಚು ಬುಕ್ಕಿಂಗ್ ನಲ್ಲಿ ದಾಖಲೆ ಮಾಡಿದೆ.
ಟಾಟಾ Sierra ಇಂಜಿನ್ ಸಾಮರ್ಥ್ಯ
ಟಾಟಾ ಸಿಯೆರಾ 2025 ರಲ್ಲಿ 3 ಇಂಜಿನ್ ಆಯ್ಕೆಯೊಂದಿಗೆ ಬರುತ್ತದೆ. 1.5-litre naturally aspirated petrol (120 PS), 1.5-litre TGDi turbo petrol (170 PS, 280 Nm) and 1.5-litre diesel (115 PS). ಇವುಗಳನ್ನು 6-ಸ್ಪೀಡ್ ಮ್ಯಾನುಯಲ್ ಅಥವಾ ಆಟೋಮ್ಯಾಟಿಕ್ ನೊಂದಿಗೆ ಪೇರ್ ಮಾಡಬಹುದು. ಟಾಟಾ ಸಿಯೆರಾ 18-30 kmpl ಮೈಲೇಜ್ ನೀಡುತ್ತದೆ.
ಟಾಟಾ Sierra ವೈಶಿಷ್ಟ್ಯಗಳು
ಟಾಟಾ ಸಿಯೆರಾ ಕಾರಿನಲ್ಲಿ ಅತಿದೊಡ್ಡ Panorama Sunroof, 360 Degree Camera, Level 2 ADAS, Theater Pro Triple Display, JBL 12 Speaker Soundbar, Ventilated Seats ಗಳನ್ನೂ ಅಳವಡಿಸಲಾಗಿದೆ. ಇನ್ನು ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳು, ABS ವೊಂದಿಗೆ ESC, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಸ್ಟ್ಯಾಂಡರ್ಡ್ ಅನ್ನು ಅಳವಡಿಸಲಾಗಿದೆ.
ಟಾಟಾ Sierra EMI ಲೆಕ್ಕಾಚಾರ
8 ಲಕ್ಷ ಡೌನ್ ಪೇಮೆಂಟ್ ಮಾಡಿ, 5 ವರ್ಷ ( 60 ತಿಂಗಳು ) ಟೆನ್ಯೂರ್ ಗೆ 9% ಬಡ್ಡಿಯಲ್ಲಿ ಲೋನ್ ಪಡೆದುಕೊಂಡಾಗ EMI ಲೆಕ್ಕಾಚಾರ. ಇದು ಅಂದಾಜು ಲೆಕ್ಕಾಚಾರ ಅಷ್ಟೇ, ನಿಖರವಾದ ಲೆಕ್ಕಾಚಾರಕ್ಕೆ ಬ್ಯಾಂಕ್ ವೆಬ್ಸೈಟ್ ಗೆ ಭೇಟಿ ನೀಡಿ.
- ಬೇಸ್ ವೆರಿಯಂಟ್ ಆನ್ ರೋಡ್ ಬೆಲೆ 14 ರಿಂದ 15 ಲಕ್ಷ ಆಗಿದೆ. 9% ಬಡ್ಡಿಗೆ 6 ರಿಂದ 7 ಲಕ್ಷ ಲೋನ್ ಪಡೆದುಕೊಂಡರೆ, ತಿಂಗಳ EMI 12,500 ರಿಂದ 14,500 ರೂಪಾಯಿ ಆಗುತ್ತದೆ.
- ಮಿಡ್ ವೆರಿಯಂಟ್ ಆನ್ ರೋಡ್ ಬೆಲೆ 18 ರಿಂದ 22 ಲಕ್ಷ ಆಗಿದೆ. 9% ಬಡ್ಡಿಗೆ 10 ರಿಂದ 14 ಲಕ್ಷ ಲೋನ್ ಪಡೆದುಕೊಂಡರೆ, ತಿಂಗಳ EMI 20,800 ರಿಂದ 29,100 ರೂಪಾಯಿ ಆಗುತ್ತದೆ.
- ಟಾಪ್ ವೆರಿಯಂಟ್ ಆನ್ ರೋಡ್ ಬೆಲೆ 25 ರಿಂದ 26 ಲಕ್ಷ ಆಗಿದೆ. 9% ಬಡ್ಡಿಗೆ 17 ರಿಂದ 18 ಲಕ್ಷ ಲೋನ್ ಪಡೆದುಕೊಂಡರೆ, ತಿಂಗಳ EMI 35,400 ರಿಂದ 37,500 ರೂಪಾಯಿ ಆಗುತ್ತದೆ.
EMI ಮೇಲೆ ಪ್ರಭಾವ ಬೀರುವ ಅಂಶಗಳು
- ಉತ್ತಮ ಕ್ರೆಡಿಟ್ ಸ್ಕೋರ್ ಇದ್ದರೆ, ಬ್ಯಾಂಕುಗಳು ಕಡಿಮೆ ಬಡ್ಡಿ ದರವನ್ನು ಕಡಿಮೆ ಮಾಡುತ್ತದೆ.
- ದೀರ್ಘ ಅವಧಿ ಸಾಲದಲ್ಲಿ EMI ಕಡಿಮೆಯಾಗುತ್ತದೆ, ಆದರೆ ಒಟ್ಟು ಬಡ್ಡಿ ಪಾವತಿ ಹೆಚ್ಚಾಗುತ್ತದೆ.
- ಕಡಿಮೆ ಅವಧಿ ಸಾಲದಲ್ಲಿ EMI ಹೆಚ್ಚಾಗುತ್ತದೆ, ಆದರೆ ಒಟ್ಟು ಬಡ್ಡಿ ಕಡಿಮೆಯಾಗುತ್ತದೆ.
- ಟಾಟಾ ಡೀಲರ್ ಶಿಪ್ ನಲ್ಲಿ ವಿಶೇಷ ಫೈನಾನ್ಸ್ ಆಫರ್‌ಗಳು ಲಭ್ಯವಾಗುತ್ತದೆ.
ವಿಶೇಷ ಸೂಚನೆ: ನಾಡುನುಡಿ ಮಾದ್ಯಮದಲ್ಲಿ ಯಾವುದೇ ಸುಳ್ಳುಸುದ್ದಿ ಪ್ರಕಟಿಸಲಾಗುವುದಿಲ್ಲ. ಕಾರಿನ EMI ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬ್ಯಾಂಕುಗಳ EMI ಕ್ಯಾಲ್ಕ್ಯುಲೇಟರ್ ಬಳಸಬಹುದು.

