Tiago Accident: 3 ಪಲ್ಟಿಯಾದರೂ ಗಾಯಾಳುಗಳಿಲ್ಲ, ಟಾಟಾದ ಈ ಕಡಿಮೆ ಬೆಲೆಯ ಕಾರಿಗೆ ಹೆಚ್ಚಾಯ್ತು ಡಿಮ್ಯಾಂಡ್

ಅಪಘಾತದಿಂದ ತಪ್ಪಿಸಿಕೊಂಡ ಬಳಿಕ ತನ್ನ ಪ್ರಾಣವನ್ನು ಉಳಿಸಿದ ಅದೇ ಕಾರ್ ಕಂಪನಿಯಿಂದ ಇನ್ನೊಂದು ಹೊಸ ಕಾರ್ ಅನ್ನು ಖರೀದಿಸಿದ ಮಾಲೀಕ.

Tata Tiago Car Accident: ರಸ್ತೆಗಳಲ್ಲಿ ಅನಿರೀಕ್ಷಿತ ಅಪಘಾತಗಳು ಸಂಭವಿಸುತ್ತದೆ. ಸಾಮಾನ್ಯವಾಗಿ ವಾಹನಗಳನ್ನು ಖರೀದಿಸುವ ಅಪಘಾತದಿಂದ ರಕ್ಷಣೆ ಸಿಗುವಂತಹ ವಾಹನವನ್ನೇ ಎಲ್ಲರು ಇಷ್ಟಪಡುತ್ತಾರೆ. ಚಾಕಲಕರ ಸುರಕ್ಷತೆಗಾಗಿ ಹೆಚ್ಚಿ ವೈಶಿಷ್ಟ್ಯಗಳನ್ನು ವಾಹನಗಳಲ್ಲಿ ಅಳವಡಿಸಿದ್ದಾರೆ ಅಂತಹ ವಾಹನಗಳು ಹೆಚ್ಚು ಬೇಡಿಕೆ ಪಡೆಯುತ್ತದೆ.

ಇದೀಗ ಭೀಕರ ಅಪಘಾತ ಸಂಭವಿಸಿದರೂ ಕಾರ್ ಮಾಲೀಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ತಪ್ಪಿಸಿಕೊಂಡ ಬಳಿಕ ತನ್ನ ಪ್ರಾಣವನ್ನು ಉಳಿಸಿದ ಅದೇ ಕಾರ್ ಕಂಪನಿಯಿಂದ ಇನ್ನೊಂದು ಹೊಸ ಕಾರ್ ಅನ್ನು ಖರೀದಿಸಿದ್ದಾರೆ. ಅಷ್ಟಕ್ಕೂ ಅಪಘಾತ ಯಾವ ಕಾರ್ ಗೆ ಸಂಭವಿಸಿದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

The owner bought a new car from the same company after the Tiago flipped
Image Credit: Cartoq

ಟಾಟಾ ಟಿಯಾಗೋ ಕಾರ್
ಇದೀಗ ಒಡಿಶಾದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೋರ್ವ ಕೆಲವು ಸಮಯದ ಹಿಂದೆ ಟಾಟಾ ಟಿಯಾಗೋ ಕಾರ್ (Tata Tiago Car)  ಅನ್ನು ಖರೀದಿಸಿದ್ದರು. ಆದರೆ ಇತ್ತೀಚಿಗೆ ಆತ ಟಿಯಾಗೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರು ಅಪಘಾತಕ್ಕೆ ಒಳಗಾಗಿದೆ. ತಿರುವಿನಲ್ಲಿ ಹೋಗುತ್ತಿದ್ದ ವೇಳೆ ಸೈಕಲ್ ಚಾಲಕ ಎದುರು ಬಂದ ಸಮಯದಲ್ಲಿ ಅಪಘಾತವನ್ನು ತಪ್ಪಿಸಲು ಕಾರ್ ಮಾಲೀಕ ದೊಡ್ಡ ಅಪಘಾತವನ್ನೇ ಮಾಡಿಕೊಂಡಿದ್ದಾರೆ.

ಟಿಯಾಗೋ ಪಲ್ಟಿಯಾದ ಬಳಿಕ ಅದೇ ಕಂಪನಿಯ ಹೊಸ ಕಾರ್ ಖರೀದಿಸಿದ ಮಾಲೀಕ
ಬ್ಲೈಂಡ್‌ ಟರ್ನ್ ನಲ್ಲಿ ಸೈಕಲ್ ಸವಾರನಿಗೆ ಆಕ್ಸಿಡೆಂಟ್ ಆಗುವುದನ್ನು ತಪ್ಪಿಸಲು ಹೋಗಿ ಟಾಟಾ ಟಿಯಾಗೋ ಮಾಲೀಕ ತಕ್ಷಣ ಕಾರ್ ಅನ್ನು ತಿರುಗಿಸಿದ್ದಾರೆ. ಈ ವೇಳೆ ಕಾರ್ ಪಲ್ಟಿಯಾಗಿ ಬಿದ್ದಿದೆ. ಕಾರ್ ಪಲ್ಟಿ ಆಗಿ ಬಿದ್ದರು ಕೂಡ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಗೆ ಯಾವುದೇ ರೀತಿಯ ಪ್ರಾಣಾಪಾಯ ಆಗಲಿಲ್ಲಾ. ಕಾರ್ ನುಚ್ಚುಗುಜ್ಜಾದರೂ ಕೂಡ ವ್ಯಕ್ತಿಯ ಮೈಮೇಲೆ ಒಂದೇ ಒಂದು ಗಾಯವು ಆಗಿಲ್ಲ.

The owner bought a new car from the same company after the Tiago flipped
Image Credit: Cartoq

ಕಾರ್ ಪಲ್ಟಿಯಾದರು ಕಾರ್ ನ ಡೋರ್ ತೆಗೆಯಲು ಯಾವುದೇ ತೊಂದರೆ ಆಗಿಲ್ಲ ಎಂದು ತನ್ನ ಅನುಭವನ್ನು ಹಂಚಿಕೊಂಡಿದ್ದಾರೆ. ಇದರಿಂದಾಗಿ ಕಾರ್ ಮಾಲೀಕ ಟಾಟಾ ಮೋಟಾರ್ಸ್ ಗೆ ತೆರಳಿ ಹೊಸ ಟಾಟಾ ನೆಕ್ಸನ್ (Tata Nexon) ಕಾರ್ ಬುಕ್ ಮಾಡಿ ಅದನ್ನು ಖರೀದಿ ಮಾಡಿದ್ದಾರೆ. ಟಾಟಾ ಕಂಪನಿಯ ಕಾರ್ ತನ್ನ ಪ್ರಾಣವನ್ನು ಉಳಿಸಿದ ಕಾರಣ ನೆನಪಿಗಾಗಿ ಟಾಟಾ ನೆಕ್ಸನ್ ಕಾರ್ ಅನ್ನು ಖರೀದಿಸಿರುವುದಾಗಿ ಹೇಳಿಕೊಂಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group