Tata New CNG: ಅಗ್ಗದ ಬೆಲೆಗೆ ಕಬ್ಬಿಣದ ಹೊದಿಕೆ ಇರುವ ಕಾರ್ ಲಾಂಚ್ ಮಾಡಿದ ಟಾಟಾ, 32 Km ಮೈಲೇಜ್.
ಬರೋಬ್ಬರಿ 32 ಕಿಲೋಮೀಟರ್ ಮೈಲೇಜ್ ನೀಡಲಿದೆ Tata CNG.
Tata Tiago CNG Price In India: ಸದ್ಯ ಮಾರುಕಟ್ಟೆಯಲ್ಲಿ ಗ್ರಾಹಕರ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ವಿವಿಧ ಪ್ರತಿಷ್ಠಿತ ಕಂಪನಿಗಳು ವಿವಿಧ ಮಾದರಿಯಲ್ಲಿ CNG ಹಾಗೂ Electric ಚಾಲಿತ ವಾಹನಗಳನ್ನು ಪರಿಚಯಿಸುತ್ತಿವೆ. ಮಾರುಕಟ್ಟೆಯಲ್ಲಿ Electric ಮಾದರಿಯಾ ಜೊತೆ CNG ಚಾಲಿತ ವಾಹನಗಳು ವೇಗವಾಗಿ ಬೇಡಿಕೆ ಪಡೆದುಕೊಳ್ಳುತ್ತಿವೆ. ಇನ್ನು Petrol, Diesel, Electric ವಾಹನಗಳಿಗೆ ಹೋಲಿಸಿದರೆ ಕೆಲ CNG ಮಾದರಿ ಹೆಚ್ಚಿನ Mileage ನೀಡಲು ಹೆಸರುವಾಸಿಯಾಗಿದೆ.
ಜನರು ವಾಹನಗಳನ್ನು ಖರೀದಿಸುವ ಹೆಚ್ವಿಚಾಗಿ ಮೈಲೇಜ್ ಬಗ್ಗೆ ಗಮನ ಕೊಡುತ್ತಾರೆ. ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳ ಖರೀದಿಗೆ ಮೊದಲು ಆದ್ಯತೆ ನೀಡುತ್ತಾರೆ. ಸದ್ಯ Electric ಮಾದರಿಯ ವಾಹನಗಳ ಬೆಲೆ ಹೆಚ್ಚಿರುವ ಕಾರಣ ಕಂಪನಿಗಳು Petrol ಎಂಜಿನ್ ಆಯ್ಕೆಯ ಜೊತೆಗೆ CNG ಆಯ್ಕೆಯನ್ನು ಕೂಡ ನೀಡುತ್ತಿದೆ. ಇದೀಗ ದೇಶದ ಜನಪ್ರಿಯ ಕಾರ್ ತಯಾರಕ ಕಂಪನಿಯಾದ Tata ತನ್ನ CNG ಮಾದರಿಯನ್ನು ಗ್ರಾಹಕರಿಗೆ ನೀಡಲಿದೆ.
ಅಗ್ಗದ ಬೆಲೆಗೆ ಕಬ್ಬಿಣದ ಹೊದಿಕೆ ಇರುವ ಕಾರ್ ಲಾಂಚ್ ಮಾಡಿದ ಟಾಟಾ
ಇತ್ತೀಚೆಗಷ್ಟೇ ಟಾಟಾ ಕಂಪನಿ ಟಿಯಾಗೊ ಎಲೆಕ್ಟ್ರಿಕ್ ಅನ್ನು ಪರಿಚಯಿಸಿತ್ತು. ಇದೀಗ ಪೆಟ್ರೋಲ್, ಡೀಸೆಲ್ ಖರ್ಚಿನ ಜೊತೆಗೆ ಬ್ಯಾಟರಿ ಖರ್ಚನ್ನು ಉಳಿಸಲು ಸಿಎನ್ ಜಿ ಮಾದರಿಯಲ್ಲಿ ಟಿಯಾಗೊ ಕಾರ್ ಅನ್ನು ಪರಿಚಯಿಸಲು ಸಿದ್ಧವಾಗಿದೆ. ಇನ್ನುಮುಂದೆ ಟಿಯಾಗೋ ಕಾರ್ ಅನ್ನು CNG ಆಯ್ಕೆಯಲ್ಲಿ ಕೂಡ ಖರೀದಿಸಬಹುದಾಗಿದೆ. Harman Infotainment System, 2 Airbags, ABS, EBD, Digital Driver Display ವೈಶಿಷ್ಟ್ಯವನ್ನು ಈ ಕಾರ್ ನಲ್ಲಿ ನೋಡಬಹುದಾಗಿದೆ.
Tata Tiago CNG Price
ಈ ಕಾರನ್ನು ದೇಶದ ವಾಹನ ಮಾರುಕಟ್ಟೆಯಲ್ಲಿ ಆರಂಭಿಕ ಎಕ್ಸ್ ಶೋ ರೂಂ ಬೆಲೆ 5.60 ರೂ. ಆಗಿದ್ದು, 8.20 ರೂ. ಆನ್ ರೋಡ್ ವೆಚ್ಚ ಆಗಲಿದೆ. ಈ ಬೆಲೆ ನಿಮಗೆ ಅಧಿಕವೆನಿಸಿದರೆ ಕಂಪನಿಯು ನಿಮಗಾಗಿ ಆಕರ್ಷಕ ಹಣಕಾಸಿನ ಯೋಜನೆಯನ್ನು ನೀಡುತ್ತಿದೆ. ಕಡಿಮೆ ಡೌನ್ ಪೇಮೆಂಟ್ ನ ಮೂಲಕ ಈ ಕಾರ್ ಅನ್ನು ನಿಮ್ಮ ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ.
ಬರೋಬ್ಬರಿ 32 ಕಿಲೋಮೀಟರ್ ಮೈಲೇಜ್ ನೀಡಲಿದೆ Tiago CNG
ಇನ್ನು 19.2 kWh ಮತ್ತು 24 kWh ಎರಡು ಬ್ಯಾಟರಿ ಪ್ಯಾಕ್ ಹೊಂದಿರುವ ಟಿಯಾಗೊ ಎಲೆಕ್ಟ್ರಿಕ್ ಕಾರ್ ಅನ್ನು ಟಾಟಾ ಪರಿಚಯಿಸಿದ್ದು. ಇದೀಗ ಟಿಯಾಗೊ ಸಿಎನ್ ಜಿ ರೂಪಾಂತರದಲ್ಲಿ ಇನ್ನಷ್ಟು ಶಕ್ತಿಶಾಲಿ ಎಂಜಿನ್ ಅನ್ನು ನೀಡಿದೆ.
ಈ ಕಾರಿನಲ್ಲಿ 1199 ಸಿಸಿ ನೀಡಿದ್ದು, 6000 rpm ನಲ್ಲಿ 72 bhp ಯ ಗರಿಷ್ಠ ಶಕ್ತಿಯನ್ನು ಮತ್ತು 3500 rpm ನಲ್ಲಿ 95 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು Tiago Petrol ರೂಪಾಂತರವು ಪ್ರತಿ ಲೀಟರ್ ಗೆ 22 ಕಿಲೋಮೀಟರ್ ಮೈಲೇಜ್ ನೀಡಿದರೆ, ಈ ಸಿಎನ್ ಜಿ ಮಾದರಿಯು ಬರೋಬ್ಬರಿ ಪ್ರತಿ ಕೆಜಿಗೆ 32 ಕಿಲೋಮೀಟರ್ ಮೈಲೇಜ್ ನೀಡುವ ಕಾರ್ ಆಗಿದೆ.