Tata CNG: ಕೇವಲ 1 ಲಕ್ಷಕ್ಕೆ ಮನೆಗೆ ತನ್ನಿ 26 KM ಮೈಲೇಜ್ ಹೊಸ ಟಾಟಾ ಕಾರ್, ವರಮಹಾಲಕ್ಷ್ಮಿ ಹಬ್ಬದ ಆಫರ್.

ಇನ್ನುಮುಂದೆ ಟಿಯಾಗೋ ಕಾರ್ ಅನ್ನು ಸಿಎನ್ ಜಿ ಆಯ್ಕೆಯಲ್ಲಿ ಕೂಡ ಖರೀದಿಸಬಹುದಾಗಿದೆ.

Tata CNG Car In Cheap Price: ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ (Tata Motors) ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ. ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಇತ್ತೀಚೆಗಂತೂ ಕಚ್ಚಾ ತೈಲಗಳ ಬೆಲೆ ಏರಿಕೆಯಾಗುತ್ತಿದೆ. ಕಚ್ಚಾ ತೈಲಗಳ ಬೆಲೆಯ ಏರಿಕೆಯ ಕಾರಣ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೇ ಟಾಟಾ ಕಂಪನಿ ಟಿಯಾಗೊ ಎಲೆಕ್ಟ್ರಿಕ್ ಅನ್ನು ಪರಿಚಯಿಸಿತ್ತು. ಇದೀಗ ಪೆಟ್ರೋಲ್, ಡೀಸೆಲ್ ಖರ್ಚಿನ ಜೊತೆಗೆ ಬ್ಯಾಟರಿ ಖರ್ಚನ್ನು ಉಳಿಸಲು ಸಿಎನ್ ಜಿ ಮಾದರಿಯಲ್ಲಿ ಟಿಯಾಗೊ ಕಾರ್ ಅನ್ನು ಪರಿಚಯಿಸಲು ಸಿದ್ಧವಾಗಿದೆ. ಇನ್ನುಮುಂದೆ ಟಿಯಾಗೋ ಕಾರ್ ಅನ್ನು ಸಿಎನ್ ಜಿ ಆಯ್ಕೆಯಲ್ಲಿ ಕೂಡ ಖರೀದಿಸಬಹುದಾಗಿದೆ.

Bring home a new Tata car with 26 KM mileage for just 1 lakh
Image Credit: Abplive

ಟಾಟಾ ಟಿಯಾಗೊ ಸಿಎನ್ ಜಿ ಕಾರ್ (Tata Tiago CNG) 
ಇನ್ನು 19.2 kWh ಮತ್ತು 24 kWh ಎರಡು ಬ್ಯಾಟರಿ ಪ್ಯಾಕ್ ಹೊಂದಿರುವ ಟಿಯಾಗೊ ಎಲೆಕ್ಟ್ರಿಕ್ ಕಾರ್ ಅನ್ನು ಟಾಟಾ ಪರಿಚಯಿಸಿದ್ದು. ಇದೀಗ ಟಿಯಾಗೊ ಸಿಎನ್ ಜಿ ರೂಪಾಂತರದಲ್ಲಿ ಇನ್ನಷ್ಟು ಶಕ್ತಿಶಾಲಿ ಎಂಜಿನ್ ಅನ್ನು ನೀಡಿದೆ. ಈ ಕಾರಿನಲ್ಲಿ 1199 ಸಿಸಿ ನೀಡಿದ್ದು, 6000 rpm ನಲ್ಲಿ 72 bhp ಯ ಗರಿಷ್ಠ ಶಕ್ತಿಯನ್ನು ಮತ್ತು 3500 rpm ನಲ್ಲಿ 95 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಎಂಜಿನ್ ಈ ಸಿಎನ್ ಜಿ ಮಾದರಿಯು ಬರೋಬ್ಬರಿ ಪ್ರತಿ ಕೆಜಿಗೆ 26 ಕಿಲೋಮೀಟರ್ ಮೈಲೇಜ್ ನೀಡುವ ಕಾರ್ ಆಗಿದೆ.

ಈ ಕಾರನ್ನು ದೇಶದ ವಾಹನ ಮಾರುಕಟ್ಟೆಯಲ್ಲಿ ಆರಂಭಿಕ ಎಕ್ಸ್ ಶೋ ರೂಂ ಬೆಲೆ 6,49,900 ರೂ. ಆಗಿದ್ದು, 7,33,740 ರೂ. ಆನ್ ರೋಡ್ ವೆಚ್ಚ ಆಗಲಿದೆ. ಈ ಬೆಲೆ ನಿಮಗೆ ಅಧಿಕವೆನಿಸಿದರೆ ಕಂಪನಿಯು ನಿಮಗಾಗಿ ಆಕರ್ಷಕ ಹಣಕಾಸಿನ ಯೋಜನೆಯನ್ನು ನೀಡುತ್ತಿದೆ. ಕಡಿಮೆ ಡೌನ್ ಪೇಮೆಂಟ್ ನ ಮೂಲಕ ಈ ಕಾರ್ ಅನ್ನು ನಿಮ್ಮ ಮನೆಗೆ ತೆಗೆದುಕೊಂಡು ಹೋಗಬಹುದಾಗಿದೆ.

Tata Tiago CNG Car
Image Credit: Abplive

ಕೇವಲ 1 ಲಕ್ಷಕ್ಕೆ ಮನೆಗೆ ತನ್ನಿ 26 KM ಮೈಲೇಜ್ ಹೊಸ ಟಾಟಾ ಕಾರ್
ಟಾಟಾ ಟಿಯಾಗೊ ಸಿಎನ್‌ಜಿ ಕಾರಿನ ಹಳೆಯ ರೂಪಾಂತರವನ್ನು ಆನ್‌ ಲೈನ್ ಡೌನ್ ಪೇಮೆಂಟ್ ನ ಮೂಲಕ ಖರೀದಿಸಬಹುದು. ಬ್ಯಾಂಕ್ ವಾರ್ಷಿಕ ಶೇ.9.8 ಬಡ್ಡಿ ದರದಲ್ಲಿ ರೂ.6,33,740 ಸಾಲವನ್ನು ನೀಡುತ್ತದೆ. ನೀವು 5 ವರ್ಷಗಳ ಅವಧಿಗೆ ಈ ಸಾಲವನ್ನು ಪಡೆಯಬಹುದಾಗಿದೆ. ಕೇವಲ 1 ಲಕ್ಷ ರೂ.ಗಳ ಮುಂಗಡ ಪಾವತಿಯನ್ನು ಕಂಪನಿಗೆ ನೀಡಬೇಕಾಗುತ್ತದೆ. ನಂತರ 13,403 ಮಾಸಿಕ EMI ಪಾವತಿಸುವ ಮೂಲಕ ಬ್ಯಾಂಕ್‌ನಿಂದ ಸಾಲವನ್ನು ಪ್ರತಿ ತಿಂಗಳು ಮರುಪಾವತಿ ಮಾಡಬಹುದು.

Join Nadunudi News WhatsApp Group

Join Nadunudi News WhatsApp Group