Tata EV: ಬಂತು ಟಾಟಾ ಕಂಪನಿಯ ಇನ್ನೊಂದು ಎಲೆಕ್ಟ್ರಿಕ್ ಕಾರ್, 213 Km ಮೈಲೇಜ್ ಮತ್ತು ಕಡಿಮೆ ಬೆಲೆ.
ಬರೋಬ್ಬರಿ 213 ಕಿಲೋಮೀಟರ್ ಮೈಲೇಜ್ ನೀಡುವ ಟಾಟಾದ ಮತ್ತೊಂದು ಎಲೆಕ್ಟ್ರಿಕ್ ಕಾರ್.
Tata Xpress -T EV: ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಮೋಟಾರ್ಸ್ (Tata Motors) ತನ್ನ ಮಾರಾಟವನ್ನು ಹೆಚ್ಚಿಸಿಕೊಂಡಿದೆ. ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಇತ್ತೀಚೆಗಂತೂ ಕಚ್ಚಾ ತೈಲಗಳ ಬೆಲೆ ಏರಿಕೆಯಾಗುತ್ತಿದೆ. ಕಚ್ಚಾ ತೈಲಗಳ ಬೆಲೆಯ ಏರಿಕೆಯ ಕಾರಣ ಜನರು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಮುಖ ಮಾಡುತ್ತಿದ್ದಾರೆ.
ಇದೀಗ ಭಾರತೀಯ ಮಾರುಕಟ್ಟೆಗೆ ಟಾಟಾ ನೂತನ ಮಾದರಿಯ ಎಲೆಕ್ಟ್ರಿಕ್ ಕಾರ್ ಬಿಡುಗಡೆಗೆ ಸಜ್ಜಾಗಿದೆ. ಟಾಟಾ ಮೋಟಾರ್ಸ್ ಕಂಪನಿಯು ಇದೀಗ ಇತರ ಎಲೆರ್ಕ್ಟ್ರಿಕ್ ಕಾರ್ ಗಳಿಗೆ ಪೈಪೋಟಿ ನೀಡಲು ಹೊಸ ವಿನ್ಯಾಸದ ಕಾರ್ ಅನ್ನು ಪರಿಚಯಿಸಲಿದೆ.
ಪೆಟ್ರೋಲ್ ಡೀಸೆಲ್ ಬೆಲೆಯ ಏರಿಕೆಯ ಕಾರಣದಿಂದಾಗಿ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ಹಾಗೂ ಸಿಎನ್ ಜಿ ಕಾರ್ ಖರೀದಿಯತ್ತ ಗಮನ ಹರಿಸುತ್ತಿದ್ದಾರೆ. ಇನ್ನು ದೇಶದ ಪ್ರತಿಷ್ಠಿತ ಕಂಪನಿಯಾಗಿರುವ ಟಾಟಾ ಶೀಘ್ರದಲ್ಲೇ ತನ್ನ ಟಾಟಾ ಎಕ್ಸ್ ಪ್ರೆಸ್ ಟಿ ಎಲೆಟ್ರಿಕ್ ರೂಪಾಂತರವನ್ನು ಬಿಡುಗಡೆಗೊಳಿಸಲು ಸಂಪೂರ್ಣ ಸಿದ್ಧತೆ ನಡೆಸುತ್ತಿದೆ.
ಟಾಟಾ ಎಕ್ಸ್ ಪ್ರೆಸ್ ಟಿ ಎಲೆಟ್ರಿಕ್ ಕಾರ್
ಈ ಹೊಚ್ಚ ಹೊಸ ಎಕ್ಸ್ ಪ್ರೆಸ್ ಟಿ ಎಲೆಟ್ರಿಕ್ ಕಾರ್ ನಲ್ಲಿ ಶಕ್ತಿಯುತ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದೆ. ಈ ಎಲೆಕ್ಟ್ರಿಕ್ ಕಾರ್ 3994 ಎಂಎಂ ಉದ್ದ, ಎತ್ತರ 1537 ಎಂಎಂ, ಅಗಲ 1677 ಎಂಎಂ ಮತ್ತು ಕರ್ಬ್ ತೂಕ 1586 ಎಂಎಂ. ಇದರಲ್ಲಿ 205 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 350 ಲೀಟರ್ ಬೂಟ್ ಸ್ಪೇಸ್ ಸಿಗಲಿದೆ. ಇನ್ನು ಈ ಟಾಟಾ ಎಕ್ಸ್ ಪ್ರೆಸ್ ಟಿ ಎಲೆಟ್ರಿಕ್ ಕಾರ್ 5 ಆಸನಗಳನ್ನು ಹೊಂದಿದೆ.
ಟಾಟಾ ಎಕ್ಸ್ ಪ್ರೆಸ್ ಟಿ ಎಲೆಟ್ರಿಕ್ ವಿಶೇಷತೆ
ಕಂಪನಿಯು 14 ಇಂಚಿನ ಚಕ್ರಗಳ ಜೊತೆಗೆ ಚಾಲಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ನ ಆಯ್ಕೆಯನ್ನು ನೀಡಿದೆ. ಹೊಂದಾಣಿಕೆಯ ಸ್ಟೀರಿಂಗ್, ಮಲ್ಟಿಫಂಕ್ಷನ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಹೊಂದಾಣಿಕೆಯ ಹೆಡ್‌ರೆಸ್ಟ್, ಪವರ್ ವಿಂಡೋಗಳು, ಡಿಜಿಟಲ್ ಟ್ಯಾಕೋಮೀಟರ್, ಎರಡು ಡ್ರೈವ್ ಮೋಡ್‌ಗಳು, ಕ್ಲೈಮೇಟ್ ಕಂಟ್ರೋಲ್ ಮತ್ತು ಪ್ಯಾಡಲ್ ಶಿಫ್ಟರ್ ಸೇರಿದಂತೆ ಇನ್ನಿತರ ಹತ್ತು ಹಲವು ಫೀಚರ್ ಅನ್ನು ಅಳವಡಿಸಲಾಗಿದೆ.
ಒಂದೇ ಚಾರ್ಜ್ ನಲ್ಲಿ 213 KM ಮೈಲೇಜ್
ಟಾಟಾ ಎಕ್ಸ್ ಪ್ರೆಸ್ ಟಿ ಎಲೆಟ್ರಿಕ್ ಕಾರ್ 500rpm ನಲ್ಲಿ 30kW ಪವರ್ ಮತ್ತು 2500rpm ನಲ್ಲಿ 105Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರ್ ಅನ್ನು ಕೇವಲ 9 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಿಕೊಳ್ಳಬಹುದು. ಒಂದೇ ಚಾರ್ಜ್ ನಲ್ಲಿ ಈ ಎಲೆಕ್ಟ್ರಿಕ್ ಕಾರ್ ಬರೋಬ್ಬರಿ 213 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಈ ಟಾಟಾ ಎಕ್ಸ್ ಪ್ರೆಸ್ ಟಿ ಎಲೆಟ್ರಿಕ್ ಗೆ 13 ಲಕ್ಷ ಬೆಲೆಯನ್ನುಕಂಪನಿಯು ನಿಗದಿಪಡಿಸಿದೆ.