Tax Deduction: ನಿಮ್ಮ ಆದಾಯದಲ್ಲಿ ಎಷ್ಟು ಹಣವನ್ನು ಟ್ಯಾಕ್ಸ್ ಡಿಡಕ್ಷನ್ ಆಗಿ ಪಡೆಯಬಹುದು, ಇಲ್ಲಿದೆ ಡೀಟೇಲ್ಸ್.

ನಿಮ್ಮ ಆದಾಯದಲ್ಲಿ ಎಷ್ಟು ಹಣವನ್ನು ಟ್ಯಾಕ್ಸ್ ಡಿಡಕ್ಷನ್ ಆಗಿ ಪಡೆಯಬಹುದು..?

Tax Deduction New Update: ಆದಾಯ ಇಲಾಖೆಯು ಯಾವುದೇ ವ್ಯಕ್ತಿಯು ಮಿತಿಗಿಂತ ಹೆಚ್ಚಿನ ಆದಾಯವನ್ನು ಗಳಿಸಿದರೆ ಅದಕ್ಕೆ ತೆರಿಗೆಯನ್ನು ವಿಧಿಸುತ್ತದೆ. ವ್ಯಕ್ತಿಯು ಗಳಿಸುವಂತಹ ಎಲ್ಲ ಮೂಲದ ಆದಾಯದ ಬಗ್ಗೆ ಆದಾಯ ಇಲಾಖೆ ಗಮನ ಹರಿಸುತ್ತದೆ. ಇನ್ನು ಜನರು ತಮ್ಮ ಭವಿಷ್ಯಕ್ಕಾಗಿ ಉಳಿತಾಯ ಹೂಡಿಕೆಯನ್ನು ಮಾಡಿರುತ್ತಾರೆ. ಹೆಚ್ಚಿನ ಉಳಿತಾಯಕ್ಕೆ ಕೂಡ ತೆರಿಗೆ ಅನ್ವಯವಾಗುತ್ತದೆ.

ಇನ್ನು ನೀವು ಕೆಲವು ಸಂದರ್ಭದಲ್ಲಿ ತೆರಿಗೆಯನ್ನು ಉಳಿಸಿಕೊಳ್ಳಬಹುದು. ಅದಕ್ಕಾಗಿಯೇ ತೆರಿಗೆ ಉಳಿಸುವಂತಹ ಅನೇಕ ಯೋಜನೆಗಳಿವೆ. ತೆರಿಗೆ ಉಳಿತಾಯ ಯೋಜನೆಗಳ ಹೊರತಾಗಿಯೂ ಹಳೆಯ ತೆರಿಗೆ ಪದ್ಧತಿಯಲ್ಲಿ ತೆರಿಗೆ ಕಡಿತಕ್ಕೆನಿಮ್ಮಾ ಆದಾಯದಲ್ಲಿ ಎಷ್ಟು ಹಣವನ್ನು ಟ್ಯಾಕ್ಸ್ ಡಿಡಕ್ಷನ್ ಆಗಿ ಪಡೆಯಬಹುದು..? ಹಲವು ಅವಕಾಶಗಳಿವೆ. ಹೆಚ್ಚಿನ ಹೂಡಿಕೆಗಳು ಸೆಕ್ಷನ್ 80 ಸಿ ಅಡಿಯಲ್ಲಿ ಬರುತ್ತವೆ.  ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Tax Deduction
Image Credit: Informalnewz

ನಿಮ್ಮಾ ಆದಾಯದಲ್ಲಿ ಎಷ್ಟು ಹಣವನ್ನು ಟ್ಯಾಕ್ಸ್ ಡಿಡಕ್ಷನ್ ಆಗಿ ಪಡೆಯಬಹುದು, ಇಲ್ಲಿದೆ ಡೀಟೇಲ್ಸ್
ನೀವು ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ ಐಟಿ ರಿಟರ್ನ್ಸ್ ಸಲ್ಲಿಸುತ್ತಿದ್ದರೆ, ನೀವು ತೆರಿಗೆ ಕಡಿತಕ್ಕೆ ಅರ್ಹರಾಗಿದ್ದೀರಿ ಎಂದು ನೀವು ಕಂಡುಕೊಳ್ಳಬಹುದು. ಒಂದೂವರೆ ಲಕ್ಷ ರೂಪಾಯಿವರೆಗೆ ತೆರಿಗೆ ವಿನಾಯಿತಿ ಇದೆ ಅನ್ನುವುದು ಬಹುತೇಕರಿಗೆ ಗೊತ್ತು. ಹೆಚ್ಚಿನ ಪ್ರಮಾಣದ ಕಡಿತವನ್ನು ಅನುಮತಿಸಲಾಗಿದೆ. ನೀವು NPS, ವೈದ್ಯಕೀಯ ವಿಮೆಯಲ್ಲಿ ಮಾಡಿದ ಹೂಡಿಕೆಗೆ ಸ್ವಲ್ಪ ಕಡಿತವನ್ನು ಪಡೆಯಬಹುದು. ಒಟ್ಟಾರೆ ಮೂರರಿಂದ ನಾಲ್ಕು ಲಕ್ಷದವರೆಗೆ ಕಡಿತ ಪಡೆಯುವ ಅವಕಾಶಗಳಿವೆ. ಆದರೆ, ಇಷ್ಟೊಂದು ತೆರಿಗೆ ಉಳಿಸಲು ಅನಗತ್ಯ ಹೂಡಿಕೆ ಮಾಡುವುದು ಸಮಂಜಸವಲ್ಲ.

ನಿಮ್ಮ ಒಟ್ಟು ಆದಾಯದಲ್ಲಿ ತೆರಿಗೆ ವಿಧಿಸಬಹುದಾದ ಆದಾಯದ ಮೇಲೆ ಮಾತ್ರ ತೆರಿಗೆ ಅನ್ವಯಿಸುತ್ತದೆ. ಈ ಕಡಿತಗಳು ತೆರಿಗೆಯ ಆದಾಯದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಉದಾಹರಣೆಗೆ ನಿಮ್ಮ ಒಂದು ವರ್ಷದ ಆದಾಯ 10 ಲಕ್ಷ ರೂ. ಆಗಿದ್ದರೆ, ಸೆಕ್ಷನ್ 80 ಸಿ ಅಡಿಯಲ್ಲಿ, ಪಿಪಿಎಫ್ ಮತ್ತು ಇತರ ಯೋಜನೆಗಳಲ್ಲಿ ನಿಮ್ಮ ವಾರ್ಷಿಕ ಹೂಡಿಕೆಯ ಮೇಲೆ ಒಂದೂವರೆ ಲಕ್ಷ ರೂಪಾಯಿಗಳವರೆಗೆ ತೆರಿಗೆ ವಿನಾಯಿತಿ ಇದೆ.

New Income Tax Rules
Image Credit: Times Now News

ಸೆಕ್ಷನ್ 80 ಸಿ ಅಡಿಯಲ್ಲಿ, 1.5 ಲಕ್ಷ ರೂ., NPS ಅಡಿಯಲ್ಲಿ ರೂ. 50,000 ,ಆರೋಗ್ಯ ವಿಮೆ ಯೋಜನೆಯಡಿ ರೂ 25,000 ರಿಂದ ರೂ. 1,25,000 ಕಡಿತವನ್ನು ಪಡೆಯಲು ಸಾಧ್ಯವಿದೆ. ಇನ್ನು PPF, ಜೀವ ವಿಮೆ, ಗೃಹ ಸಾಲದ ಮೂಲ ಮರುಪಾವತಿ, ಸುಕನ್ಯಾ ಸಮೃದ್ಧಿ ಯೋಜನೆ, ELSS, ULIP, ಪಿಂಚಣಿ ನಿಧಿ ಇತ್ಯಾದಿಗಳು ಸೆಕ್ಷನ್ 80C ಅಡಿಯಲ್ಲಿ ಬರುತ್ತವೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಮಾಡಿದ ಹೂಡಿಕೆಗೆ ವಾರ್ಷಿಕ ರೂ. 50,000 ವರೆಗೆ ಕಡಿತವನ್ನು ಪಡೆಯಬಹುದು. ಅಂದರೆ ನೀವು ಒಂದು ವರ್ಷದಲ್ಲಿ 50,000 ರೂಪಾಯಿಗಳನ್ನು NPS ನಲ್ಲಿ ಹೂಡಿಕೆ ಮಾಡಿದರೆ, ತೆರಿಗೆ ಆದಾಯವು ಆ ಮೊತ್ತದಲ್ಲಿ ಕಡಿಮೆಯಾಗುತ್ತದೆ.

Join Nadunudi News WhatsApp Group

Tax Deduction New Update
Image Credit: Livemint

Join Nadunudi News WhatsApp Group