Tenant Tax: ಬಾಡಿಗೆದಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ, ಹೊಸ ತೆರಿಗೆ ನಿಯಮ ಜಾರಿಗೆ ತಂಡ ಸರ್ಕಾರ.
ಇದೀಗ ಬಾಡಿಗೆದಾರರಿಗೆ ತೆರಿಗೆ ವಿಚಾರವಾಗಿ ಸಿಹಿ ಸುದ್ದಿ.
Tax Exemption For Tenants: ಹಣಕಾಸು ಸಚಿವಾಲಯ ದೇಶದಲ್ಲಿ ಸಾಕಷ್ಟು ರೀತಿಯ ತೆರಿಗೆ ನಿಯಮವನ್ನು ಜಾರಿಗೊಳಿಸಿದೆ. ತೆರಿಗೆ ಪಾವತಿದಾರರು ಇಲಾಖೆಯ ನಿಯಮಾನುಸಾರ ತೆರಿಗೆ ಪಾವತಿ ಮಾಡಬೇಕಿದೆ. ಇನ್ನು 2022 -23 ರ ಐಟಿಆರ್ ಸಲ್ಲಿಕೆಯ ಕೊನೆಯ ದಿನಾಂಕ ಮುಗಿದಿದ್ದು ಇನ್ನು ಕೂಡ ITR ಬಾಕಿ ಇದ್ದವರಿಗೆ ಇಲಾಖೆ ಹೆಚ್ಚಿನ ದಂಡವನ್ನು ವಿದಿಸುತ್ತಿದೆ.
ಇನ್ನು Income Tax Department ಈಗಾಗಲೇ ಆಧಾಯ ತೆರಿಗೆ ಪಾವತಿಯಲ್ಲಿ ತಪ್ಪು ಮಾಡಿದವರಿಗೆ ನೋಟಿಸ್ ಕೂಡ ನೀಡಿದೆ. ಇನ್ನು ಇತ್ತೀಚೆಗಷ್ಟೇ Finance Minister Nirmala Sitharaman ಅವರು ತೆರಿಗೆ ವಿನಾಯಿತಿಯನ್ನು ಕೂಡ ಘೋಷಿಸಿದರು. ಎಲ್ಲ ಮೂಲದ ಆದಾಯಗಳಿಗೆ ತೆರಿಗೆ ಪಾವತಿ ಆಗ್ತಾ ಇಲ್ಲ ಎಂದಿದ್ದರು. ಇದೀಗ ಬಾಡಿಗೆದಾರರಿಗೆ ತೆರಿಗೆ ವಿಚಾರವಾಗಿ ಸಿಹಿ ಸುದ್ದಿ ಹೊರಬಿದ್ದಿದೆ.
ಬಾಡಿಗೆದಾರರಿಗೆ ಕೇಂದ್ರದಿಂದ ಸಿಹಿ ಸುದ್ದಿ
ಸದ್ಯ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಬಾಡಿಗೆ ಉಚಿತ ಮನೆಗಳಿಗೆ ಸಂಬಳ ಪಡೆಯುವ ಜನರಿಗೆ ದೊಡ್ಡ ಪರಿಹಾರವನ್ನು ನೀಡಿದೆ. ಇದರ ಅಡಿಯಲ್ಲಿ ತಮ್ಮ ಕಂಪನಿಯಿಂದ ಬಾಡಿಗೆ ರಹಿತ ವಸತಿ ಒದಗಿಸಿದ ಉದ್ಯೋಗಿಗಳು ಈಗ ಹೆಚ್ಚಿನ ಉಳಿತಾಯದೊಂದಿಗೆ ಹೆಚ್ಚಿನ ಸಂಬಳವನ್ನು ಪಡೆಯಲು ಸಾಧ್ಯವಾಗುತ್ತದೆ. ಬಾಡಿಗೆದಾರರು ಇನ್ನುಮುಂದೆ ತೆರಿಗೆ ಪಾವತಿಯಲ್ಲಿ ಕಡಿತವನ್ನು ಪಡೆಯಬಹುದಾಗಿದೆ.
ಬಾಡಿಗೆ ರಹಿತ ವಸತಿ ನಿಯಮಗಳಲ್ಲಿ ಬದಲಾವಣೆ
ಸದ್ಯ IT ಇಲಾಖೆ ಬಾಡಿಗೆ ರಹಿತ ವಸತಿ ನಿಯಮಗಳಲ್ಲಿ ಬದಲಾವಣೆ ತಂದಿದೆ. ಸೆಪ್ಟೆಂಬರ್ 1 ರಿಂದಲೇ ದೇಶದಲ್ಲಿ ಈ ಹೊಸ ನಿಯಮ ಜಾರಿಯಾಗಲಿದೆ. CBDT ಹೊಸ ನಿಯಮದ ಪ್ರಕಾರ, ಕಂಪನಿಯ ಒಡೆತನದ ಮನೆಗಳಲ್ಲಿ ವಾಸಿಸುವ ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರನ್ನು ಹೊರತುಪಡಿಸಿ ಇತರ ಉದ್ಯೋಗಿಗಳ ಮೌಲ್ಯಮಾಪನದಲ್ಲಿ ಬದಲಾವಣೆ ಆಗಿದೆ.
ಉದ್ಯೋಗಿಗಳಿಗೆ ಉದ್ಯೋಗದಾತರಿಂದ ಸುಸಜ್ಜಿತವಲ್ಲದ ವಸತಿ ನೀಡಲಾಗುತ್ತದೆ ಮತ್ತು ಅಂತಹ ವಸತಿಗಳ ಮಾಲೀಕತ್ವವು ಕಂಪನಿಯದ್ದಾಗಿದೆ, ಅದರ ಮೌಲ್ಯಮಾಪನವನ್ನು ಈಗ ವಿಭಿನ್ನವಾಗಿ ಮಾಡಲಾಗುತ್ತದೆ. ಪ್ರಸ್ತುತ ದೇಶದಲ್ಲಿ 2011 ರ ಜನಗಣತಿಯ ಪ್ರಕಾರ 40 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಪ್ರದೇಶಗಳಲ್ಲಿ HRA ಸಂಬಳದ ಶೇಕಡಾ 10 ರಷ್ಟು ಇರುತ್ತದೆ. 2001 ರ ಜನಗಣತಿಯ ಪ್ರಕಾರ ಸದ್ಯ 15 ಪ್ರತಿಶತದಷ್ಟಿದೆ. ಇನ್ನುಮುಂದೆ ಬಾಡಿಗೆದಾರರು ಹೆಚ್ಚಿನ ತೆರಿಗೆಗೆ ಒಳಪಡುವ ಅಗತ್ಯವಿಲ್ಲ.