Tax Update: ಅವಧಿಗೂ ಮುನ್ನವೇ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ, ಇಷ್ಟು ಆದಾಯಕ್ಕೆ ತೆರಿಗೆ ಕಟ್ಟಬೇಡಿ.
ಇಷ್ಟು ಆದಾಯಗಳಿಗೆ ಯಾವುದೇ ರೀತಿಯ ತೆರಿಗೆ ಪಾವತಿ ಮಾಡುವ ಅಗತ್ಯ ಇಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
Tax Exemption Update: ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಯಲ್ಲಿ ಕೂಡ ಹೊಸ ನಿಯಮಗಳು ಜಾರಿಯಾಗಿವೆ. ಇತ್ತೀಚಿಗೆ ನಿರ್ಮಲ ಸೀತಾರಾಮನ್ ಅವರು ತೆರಿಗೆ ಪಾವತಿಯಲ್ಲಿ ಅನೇಕ ವಿನಾಯಿತಿಯನ್ನು ನೀಡುತ್ತಿದ್ದಾರೆ. ಇನ್ನು 2023-24 ರ ಹಣಕಾಸು ವರ್ಷದ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಹಲವು ಘೋಷಣೆಗಳನ್ನು ಮಾಡಿದ್ದಾರೆ.
ಆದಾಯ ಇಲಾಖೆ ಐಟಿಆರ್ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿ ಮಾಡಿದೆ. ಜುಲೈ 31 ರೊಳಗೆ ಆದಾಯ ರಿಟರ್ನ್ ಪಾವತಿಯನ್ನು ಕಡ್ಡಾಯಗೊಳಿಸಲಾಗಿದೆ. ಇನ್ನೇನು ಕೇವಲ ಆರು ದಿನಗಳು ಬಾಕಿ ಇರುವ ಕಾರಣ ಕೋಟ್ಯಂತರ ಸಂಖ್ಯೆಯಲ್ಲಿ ತೆರಿಗೆ ಪಾವತಿಯಾಗುತ್ತಿದೆ.
ಇನ್ನು ಹೊಸ ಆದಾಯ ತೆರಿಗೆ ಪದ್ದತಿಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಹೊಸ ಆದಾಯ ತೆರಿಗೆ ಆಡಳಿತದ ಅಡಿಯಲ್ಲಿ ತೆರಿಗೆಯನ್ನು ಸಲ್ಲಿಸಿದರೆ ನೀವು 30% ಯನ್ನು ಪಾವತಿಸಬೇಕಾಗಬಹುದು.
ಹೊಸ ತೆರಿಗೆ ಪದ್ಧತಿ
2023 -24 ಹಣಕಾಸು ವರ್ಷದಲ್ಲಿ ತೆರಿಗೆದಾರರು ಹೊಸ ತೆರಿಗೆ ಪದ್ದತಿಯ ಪ್ರಕಾರ ತೆರಿಗೆ ಪಾವತಿಸಬೇಕು. ಹೊಸ ತೆರಿಗೆ ಪದ್ದತಿಯ ಪ್ರಕಾರ, ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯವು 15 ಲಕ್ಷ ರೂ.ಗಿಂತ ಹೆಚ್ಚಿದ್ದರೆ, ಅಂತಹ ಜನರು 30 ಪ್ರತಿಶತ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಹಳೆಯ ತೆರಿಗೆ ಪದ್ಧತಿ
2023 -24 ಹಣಕಾಸು ವರ್ಷದಲ್ಲಿ ತೆರಿಗೆದಾರರು ಹಳೆಯ ತೆರಿಗೆ ಪದ್ದತಿಯ ಪ್ರಕಾರ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಬೇಕು. ಹಳೆಯ ತೆರಿಗೆ ಪದ್ದತಿಯ ಪ್ರಕಾರ, ಒಬ್ಬ ವ್ಯಕ್ತಿಯ ವಾರ್ಷಿಕ ಆದಾಯವು 10 ಲಕ್ಷ ರೂ.ಗಿಂತ ಹೆಚ್ಚಿದ್ದರೆ, ಅಂತಹ ಜನರು 30 ಪ್ರತಿಶತ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ಕೆಲವು ಆದಾಯಗಳು ತೆರಿಗೆ ಮುಕ್ತವಾಗಿರುತ್ತದೆ
*ನಿಮ್ಮ ಆದಾಯವು 2 .5 ಲಕ್ಷಕ್ಕಿಂತ ಕಡಿಮೆ ಇದ್ದರೆ ನೀವು ತೆರಿಗೆ ಪಾವತಿಸುವ ಅಗತ್ಯವಿರುವುದಿಲ್ಲ.
*ಗ್ರಾಚುಟಿಯ (Gratuity) ಮೇಲಿಯ ಆದಾಯವು ತೆರಿಗೆ ಮುಕ್ತವಾಗಿದೆ. 5 ವರ್ಷಗಳ ನಂತರ ವ್ಯಕ್ತಿಯು ಕಂಪನಿಯನ್ನು ತೊರೆದರೆ ಈ ಸಮಯದಲ್ಲಿ ಉದ್ಯೋಗಸ್ಥನೂ ಗ್ರಾಚುಟಿಯ ಪ್ರಯೋಜನವನ್ನು ಪಡೆಯುತ್ತಾರೆ. ಈ ಗ್ರಾಚುಟಿಯ ಮೊತ್ತದ ಮೇಲಿನ ಆದಾಯವು ತೆರಿಗೆ ಮುಕ್ತವಾಗಿದೆ.
*ಇನ್ನು ಸರ್ಕಾರಿ ನೌಕರರ (Government Workers) 20 ಲಕ್ಷದ ವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ. ಖಾಸಗಿ ಉದ್ಯೋಗಿಗಳ (Private Workers) 10 ಲಕ್ಷದ ವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ.
*ಪಿಪಿಎಫ್ (PPF) ಮತ್ತು ಇಪಿಎಸ್ (EPS) ಗಳ ಮೇಲೆ ತೆರಿಗೆ ಇರುವುದಿಲ್ಲ. ಉದ್ಯೋಗಿ 5 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದ ನಂತರ ತನ್ನ ಇಪಿಎಫ್ ಅನ್ನು ಹಿಂಪಡೆದರೆ ಆ ಮೊತ್ತಕ್ಕೆ ಯಾವುದೇ ತೆರಿಗೆ ಪಾವತಿಸಬೇಕೆಗಿಲ್ಲ.
*ಕುಟುಂಬದವರಿಂದ, ಪೋಷಕರಿಂದ ಉಡುಗೊರೆಯಾಗಿ ಹಣ, ಆಸ್ತಿ, ಆಭರಣಗಳನ್ನು ಪಡೆದಿದ್ದರೆ ಅದು ತೆರಿಗೆ ಮುಕ್ತವಾಗುತ್ತದೆ.