Tax Update: ಈ ಐದು ಆದಾಯಕ್ಕೆ ಯಾವುದೇ ತೆರಿಗೆ ಕಟ್ಟುವಂತಿಲ್ಲ, ಆದಾಯ ತೆರಿಗೆ ಕಟ್ಟುವವರಿಗೆ ಗುಡ್ ನ್ಯೂಸ್.
ತೆರಿಗೆ ಪಾವತಿದಾರರು ಈ 5 ಆದಾಯಕ್ಕೆ ತೆರಿಗೆ ಪಾವತಿಸುವ ಅಗತ್ಯ ಇಲ್ಲ.
Tax Exemption Update: ಇತ್ತೀಚಿನ ದಿನಗಳಲ್ಲಿ ತೆರಿಗೆಗೆ (Tax) ಸಂಬಂಧಿಸಿದಂತೆ ಅನೇಕ ನಿಯಮಗಳು ಬದಲಾಗಿವೆ. ಕೇಂದ್ರದ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ತೆರಿಗೆಯ ನಿಯಮದಲ್ಲಿ ಅನೇಕ ಬದಲಾವಣೆಯನ್ನು ಜಾರಿಗೊಳಿಸಿದ್ದಾರೆ. ಇನ್ನು ಜುಲೈ 31 ಆದಾಯ ತೆರಿಗೆ ರಿಟರ್ನ್ ಪಾವತಿಗೆ ಕೊನೆಯ ದಿನಾಂಕವಾಗಿದೆ. ಈ ದಿನಾಂಕದೊಳಗೆ ಆದಾಯ ರಿಟರ್ನ್ ಪಾವತಿಯನ್ನು ಕಡ್ಡಾಯಗೊಳಿಸಲಾಗಿದೆ.
ತೆರಿಗೆ ಪಾವತಿದಾರರಿಗೆ ತೆರಿಗೆ ವಿನಾಯಿತಿ ಲಭ್ಯ
ನಿಗದಿತ ಸಮಯದೊಳಗೆ ತೆರಿಗೆ ಪಾವತಿಯಾಗದಿದ್ದರೆ ಹೆಚ್ಚಿನ ದಂಡ ವಿಧಿಸಬೇಕಾಗುತ್ತದೆ. ಐಟಿಆರ್ ಸಲ್ಲಿಕೆಗೆ ಕೊನೆಯ ದಿನಾಂಕ ಹತ್ತಿರವಾಗುತ್ತಿದಂತೆ ಲಕ್ಷಾಂತರ ತೆರಿಗೆ ಪಾವತಿದಾರರು ಐಟಿಆರ್ ಅನ್ನು ಸಲ್ಲಿಸುತ್ತಿದ್ದಾರೆ. ಇನ್ನು ನಿರ್ಮಲ ಸೀತಾರಾಮನ್ ಅವರು ತೆರಿಗೆ ಪಾವತಿದಾರರಿಗೆ ಕೆಲವು ಮೂಲದ ಆದಾಯಗಳಿಗೆ ತೆರಿಗೆ ವಿನಾಯಿತಿಯನ್ನು ನೀಡಿದ್ದಾರೆ. ಆದಾಯ ತೆರಿಗೆ ಕಾಯ್ದೆಯ ನಿಯಮದ ಪ್ರಕಾರ ಈ ಐದು ಮೂಲಗಳಿಂದ ಬಂದ ಆದಾಯಕ್ಕೆ ತೆರಿಗೆ ವಿನಾಯಿತಿ ಲಭ್ಯವಿರುತ್ತದೆ.
ಈ ಐದು ಆದಾಯಕ್ಕೆ ಯಾವುದೇ ತೆರಿಗೆ ಕಟ್ಟುವಂತಿಲ್ಲ
*ಸರ್ಕಾರೀ ನೌಕರರ ಮರಣದ ನಂತರ ಪಡೆದ ಗ್ರಾಚುಟಿಯ (Gratuity) ಮೇಲಿಯ ಆದಾಯವು ತೆರಿಗೆ ಮುಕ್ತವಾಗಿದೆ. 5 ವರ್ಷಗಳ ನಂತರ ವ್ಯಕ್ತಿಯು ಕಂಪನಿಯನ್ನು ತೊರೆದರೆ ಈ ಸಮಯದಲ್ಲಿ ಉದ್ಯೋಗಸ್ಥನೂ ಗ್ರಾಚುಟಿಯ ಪ್ರಯೋಜನವನ್ನು ಪಡೆಯುತ್ತಾರೆ. ಈ ಗ್ರಾಚುಟಿಯ ಮೊತ್ತದ ಮೇಲಿನ ಆದಾಯವು ತೆರಿಗೆ ಮುಕ್ತವಾಗಿದೆ.
*ಇನ್ನು ಸರ್ಕಾರಿ ನೌಕರರ 20 ಲಕ್ಷದ ವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ. ಖಾಸಗಿ ಉದ್ಯೋಗಿಗಳ 10 ಲಕ್ಷದ ವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ. ಪಿಪಿಎಫ್ (PPF) ಮತ್ತು ಇಪಿಎಸ್ (EPS) ಗಳ ಮೇಲೆ ತೆರಿಗೆ ಇರುವುದಿಲ್ಲ. ಉದ್ಯೋಗಿ 5 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದ ನಂತರ ತನ್ನ ಇಪಿಎಫ್ ಅನ್ನು ಹಿಂಪಡೆದರೆ ಆ ಮೊತ್ತಕ್ಕೆ ಯಾವುದೇ ತೆರಿಗೆ ಪಾವತಿಸಬೇಕೆಗಿಲ್ಲ.
*ಕುಟುಂಬದವರಿಂದ, ಪೋಷಕರಿಂದ ಉಡುಗೊರೆಯಾಗಿ ಹಣ, ಆಸ್ತಿ, ಆಭರಣಗಳನ್ನು ಪಡೆದಿದ್ದರೆ ಅದು ತೆರಿಗೆ ಮುಕ್ತವಾಗುತ್ತದೆ. ಕೇಂದ್ರ ಸರ್ಕಾರ 1961 RA ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಕೃಷಿಯೇತರ ಆದಾಯಗಳಿಗೆ ತೆರಿಗೆ ವಿಧಿಸಿಲ್ಲ.
*ದೇಶದ ರೈತರು ಕೃಷಿಯಿಂದ ಗಳಿಸಿದ ಆದಾಯಗಳು ತೆರಿಗೆ ಮುಕ್ತವಾಗಿರುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 10 (2 ) ಅಡಿಯಲ್ಲಿ, ಹಿಂದೂ ಅವಿಭಜಿತ ಕುಟುಂಬದಿಂದ ಪಿತ್ರಾರ್ಜಿತ ರೂಪದಲ್ಲಿ ಪಡೆದ ಆದಾಯವು ತೆರಿಗೆ ಮುಕ್ತ ಆಗಿರುತ್ತದೆ.
*ಇನ್ನು ಉಳಿತಾಯ ಖಾತೆಯ ಹೂಡಿಕೆಯ ಬಡ್ಡಿಯಿಂದ ಗಳಿಸಿದ ಹಣಕ್ಕೆ ಯಾವುದೇ ರೀತಿಯ ತೆರಿಗೆ ಕಟ್ಟಬೇಕಿಲ್ಲ. ಇನ್ನು 5 ಲಕ್ಷಕ್ಕಿಂತ ಹೆಚ್ಚಿನ VRS ನಲ್ಲಿ ಪಡೆದ ಮೊತ್ತದ ಮೇಲೆ ತೆರಿಗೆ ವಿನಾಯಿತಿ ಲಭ್ಯವಿದೆ.ಇನ್ನು ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನದ ಮೊತ್ತ ಅಥವಾ ಪ್ರಶಸ್ತಿಯ ಮೊತ್ತಕ್ಕೆ ತೆರಿಗೆ ವಿನಾಯಿತಿ ಲಭ್ಯವಿದೆ.