Tax Free Income: ಇನ್ನುಮುಂದೆ ಈ 5 ಆದಾಯಗಳಿಗೆ ಯಾವುದೇ ತೆರುಗೆ ಕಟ್ಟುವ ಅಗತ್ಯ ಇಲ್ಲ, ಕೇಂದ್ರದ ಆದೇಶ.
ಯಾವ ಯಾವ ಆದಾಯಕ್ಕೆ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ ಎನ್ನುವ ಬಗ್ಗೆ ಮಾಹಿತಿ.
Tax Free Income: ಹೊಸ ಹಣಕಾಸು ವರ್ಷ (Financial Year) ಆರಂಭವಾದ ಬೆನ್ನಲ್ಲೇ ಅನೇಕ ನಿಯಮಗಳಲ್ಲಿ ಬಾರಿ ಬದಲಾವಣೆ ಆಗಿದೆ. ತೆರಿಗೆ ಪಾವತಿಯಲ್ಲಿ ಸಾಕಷ್ಟು ರೀತಿಯ ವಿನಾಯಿತಿಗಳು ಲಭ್ಯವಿದೆ. ವ್ಯಾಪಾರ ಅಥವಾ ಉದ್ಯೋಗದಿಂದ ಬಂದ ಆದಾಯದ ಮೂಲಗಳಿಗೆ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
ವ್ಯಕ್ತಿಯ ಆದಾಯದ ಶೇಕಡಾವಾರು ಮೇಲೆ ಆತನಿಗೆ ನೀಡಲಾಗುವ ತೆರಿಗೆ ಅವಲಂಭಿಸಿರುತ್ತದೆ. ಇನ್ನೂ ತೆರಿಗೆ ವಿಧಿಸದ ಕೆಲವು ಗಳಿಕೆಗಳಿವೆ. ಇಲಾಖೆಯು ಕೆಲ ಮೂಲದ ಆದಾಯಕ್ಕೆ ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ಇದೀಗ ಯಾವ ಆದಾಯಕ್ಕೆ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.
ಕೃಷಿ ಮೇಲಿನ ಆದಾಯ
ಭಾರತ ಕೃಷಿ ಪ್ರಧಾನ ದೇಶವಾಗಿದೆ. ಕೃಷಿ ಚಟುವಟಿಕೆಗಳಿಂದ ಗಳಿಸಿದ ಆದಾಯವು ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 10(1) ಅಡಿಯಲ್ಲಿ ಆದಾಯ ತೆರಿಗೆಯಿಂದ ಮುಕ್ತವಾಗಿದೆ. ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕೃಷಿ ಕ್ಷೇತ್ರವನ್ನು ಬೆಂಬಲಿಸುವುದು ಮತ್ತು ಉತ್ತೇಜಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಉಡುಗೊರೆಗಳು ಹಾಗೂ ಪರಂಪರೆ
ಭಾರತದಲ್ಲಿ ಉಡುಗೊರೆಗಳನ್ನು ತೆಗೆದುಕೊಳ್ಳುದು ಹಾಗೂ ನೀಡುವುದು ಪದ್ಧತಿಯಾಗಿದೆ. ವ್ಯಕ್ತಿಗಳು ಸ್ವೀಕರಿಸುವ ಉಡುಗೊರೆಗಳು ಸಾಮಾನ್ಯವಾಗಿ ತೆರಿಗೆ ಮುಕ್ತವಾಗಿರುತ್ತದೆ. ಹಾಗೆ ಪಿತ್ರಾರ್ಜಿತ ಆಸ್ತಿ ಆದಾಯ ತೆರಿಗೆಗೆ ಒಳಪಡುವುದಿಲ್ಲ ಉಡುಗೊರೆಗಳು ಮತ್ತು ಉತ್ತರಾಧಿಕಾರಗಳ ಮೇಲೆ ತೆರಿಗೆ ವಿಧಿಸುವುದರಿಂದ ಕುಟುಂಬದ ಆರ್ಥಿಕ ಬೆಂಬಲ ಹೆಚ್ಚಾಗುವುದಿಲ್ಲ ಮತ್ತು ತಲೆಮಾರುಗಳ ನಡುವೆ ಹಣ ವರ್ಗಾವಣೆಗೆ ಅಡ್ಡಿಯಾಗುವುದರಿಂದ ಈ ವಿನಾಯಿತಿ ನೀಡಲಾಗಿದೆ.
PPF ಹಾಗೂ EPF ಮೇಲಿನ ಬಡ್ಡಿ
ಸಾರ್ವಜನಿಕ ಭವಿಷ್ಯ ನಿಧಿ ಹಾಗೂ ಉದ್ಯೋಗಿಗಳ ಭವಿಷ್ಯ ನಿಧಿಯ ಹೂಡಿಕೆ ಮೇಲೆ ಗಳಿಸಿದ ಬಡ್ಡಿ ತೆರಿಗೆ ಮುಕ್ತವಾಗಿರುತ್ತದೆ. ದೀರ್ಘಾವಧಿಯ ಉಳಿತಾಯ ಮತ್ತು ಆರ್ಥಿಕ ಭದ್ರತೆಯನ್ನು ನೀಡುವ ಈ ಹೂಡಿಕೆಗಳನ್ನು ಉತ್ತೇಜಿಸಲಾಗುತ್ತದೆ. ಗಳಿಸಿದ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ನೀಡುವ ಮೂಲಕ ಈ ಯೋಜನೆಗಳಿಗೆ ಕೊಡುಗೆ ನೀಡುವಂತೆ ಸರ್ಕಾರವು ನಾಗರಿಕರನ್ನು ಪ್ರೋತ್ಸಾಹಿಸುತ್ತದೆ.
ದೀರ್ಘಾವಧಿಯ ಹೂಡಿಕೆಯಲ್ಲಿನ ಲಾಭ
ಈಕ್ವಿಟಿ ಷೇರುಗಳು ಮತ್ತು ಮ್ಯೂಚುವಲ್ ಫಂಡ್‌ಗಳಂತಹ ಕೆಲವು ಆಸ್ತಿಗಳ ಮಾರಾಟದಿಂದ ಬರುವ ದೀರ್ಘಾವಧಿಯ ಬಂಡವಾಳ ಲಾಭಗಳು ಕೆಲವು ಮಾನದಂಡಗಳನ್ನು ಪೂರೈಸಿದರೆ ಅವು ತೆರಿಗೆ ಮುಕ್ತವಾಗಿರುತ್ತವೆ. ಈ ವಿನಾಯಿತಿಯನ್ನು ನೀಡುವ ಮೂಲಕ ಬಂಡವಾಳ ಮಾರುಕಟ್ಟೆಯಲ್ಲಿ ದೀರ್ಘಾವಧಿಯ ಹೂಡಿಕೆಯನ್ನು ಪ್ರೋತ್ಸಹಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಆದರೆ ಅಲ್ಪಾವಧಿಯ ಬಂಡವಾಳ ಲಾಭದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ.
ಮನೆ ಬಾಡಿಗೆ ಭತ್ಯೆ
ಮನೆ ಬಾಡಿಗೆ ಭತ್ಯೆ ತೆರಿಗೆ ಮುಕ್ತವಾಗಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುವ ಜನರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು ಈ ವಿನಾಯಿತಿಯ ಹಿಂದಿನ ಉದ್ದೇಶವಾಗಿದೆ.