Insurance Tax: LIC ಪಾಲಿಸಿ ಮಾಡಿದವರಿಗೆ ಕೇಂದ್ರದಿಂದ ಹೊಸ ರೂಲ್ಸ್, ಇನ್ನುಮುಂದೆ ಈ ಹಣಕ್ಕೆ ಕಟ್ಟಬೇಕು ಟ್ಯಾಕ್ಸ್.
LIC ಪಾಲಿಸಿ ಮಾಡಿದವರು ಈ ಹಣಕ್ಕೆ ಕಡ್ಡಾಯವಾಗಿ ತೆರಿಗೆ ಕಟ್ಟಬೇಕು ಎಂದು ಕೇಂದ್ರ ತಿಳಿಸಿದೆ.
Tax In Life Insurance Policy: ಭಾರತೀಯ ಜೀವ ವಿಮೆ ಜನಸಾಮಾನ್ಯರಿಗೆ ಜೀವದ ಭದ್ರತೆಗಾಗಿ ಜೀವ ವಿಮಾ ಯೋಜನೆಯನ್ನು ಪರಿಚಯಿಸಿದೆ. ದೇಶದ ಲಕ್ಷಾಂತರ ಜನರು LIC ವಿಮಾ ಯೋಜನೆಯಲ್ಲಿ ಹೂಡಿಕೆದಾರರಾಗಿದ್ದಾರೆ.
ಜೀವ ವಿಮಾ ಪಾಲಿಸಿ ಪಡೆಯುವ ಸಮಯದಲ್ಲಿ ಸಾಕಷ್ಟು ನಿಯಮವನ್ನು ಅನುಸರಿಸಬೇಕಾಗುತ್ತದೆ. ಇದೀಗ ಜೀವ ವಿಮಾ ಪಾಲಿಸಿದಾರರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ನೀವು ವಿಮಾ ಪಾಲಿಸಿದಾರರಾಗಿದ್ದರೆ ಈ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
LIC ಪಾಲಿಸಿದಾರರಿಗೆ ಕೇಂದ್ರದಿಂದ ಹೊಸ ರೂಲ್ಸ್
LIC ಪಾಲಿಸಿದಾರರಿಗೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿಯನ್ನು ನೀಡಿದೆ. ಜೀವ ವಿಮಾ ಪಾಲಿಸಿಯಿಂದ ಪಡೆದ ಆದಾಯದ ಮೇಲೆ ತೆರಿಗೆಗೆ ಸಂಬಂಧಿಸಿದ ಹೊಸ ನಿಯಮಗಳು ಬರಲಿದೆ. ಈ ಹೊಸ ನಿಯಮಗಳು 5 ಲಕ್ಷ ರೂ. ಗಿಂತ ಹೆಚ್ಚು ವಾರ್ಷಿಕ ಪ್ರೀಮಿಯಂ ಹೊಂದಿರುವ ಪಾಲಿಸಿಗಳಿಗೆ ಅನ್ವಯಿಸಲಿದೆ. ವಾರ್ಷಿಕ ಪ್ರೀಮಿಯಂ ಐದು ಲಕ್ಷ ರೂಪಾಯಿಗಿಂತ ಹೆಚ್ಚಿದ್ದರೆ ಜೀವ ವಿಮಾ ಪಾಲಿಸಿಯಿಂದ ಪಡೆದ ಆದಾಯವನ್ನು ಲೆಕ್ಕಾಚಾರ ಮಾಡಲು ಆದಾಯ ತೆರಿಗೆ ಇಲಾಖೆ ನಿಯಮಗಳನ್ನು ರೂಪಿಸಿದೆ.
ಜೀವ ವಿಮಾ ಪಾಲಿಸಿಯ ಮೊತ್ತಕ್ಕೆ ಕಟ್ಟಬೇಕು ತೆರಿಗೆ
ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT ) ಆದಾಯ ತೆರಿಗೆ ಕಾಯಿದೆ 2023 ಅನ್ನು ಸೂಚಿಸಿದೆ. ಲೈಫ್ ಇನ್ಶೂರೆನ್ಸ್ ಪಾಲಿಸಿಯ ಮೆಚ್ಯೂರಿಟಿಯಲ್ಲಿ ಪಡೆದ ಮೊತ್ತಕ್ಕೆ ಸಂಬಂಧಿಸಿದಂತೆ ಆದಾಯವನ್ನು ಲೆಕ್ಕಾಚಾರ ಮಾಡಲು ನಿಯಮ 11UACA ಅನ್ನು ಸೂಚಿಸಲಾಗಿದೆ. ಪ್ರೀಮಿಯಂ ಮೊತ್ತವು ಐದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಇರುವ ವಿಮಾ ಪಾಲಿಸಿಗಳಿಗೆ ಈ ತೆರಿಗೆ ನಿಯಮ ಅನ್ವಯವಾಗಿಲಿದೆ.
ತೆರಿಗೆ ವಿನಾಯಿತಿ ಯಾವಾಗ ಲಭ್ಯವಿದೆ
ತಿದ್ದುಪಡಿ ನಿಯಮದ ಪ್ರಕಾರ, ಏಪ್ರಿಲ್ 1 , 2023 ರಂದು ಅಥವಾ ನಂತರ ನೀಡಲಾದ ಪಾಲಿಸಿಗಳಿಗೆ, ಸೆಕ್ಷನ್ 10 (10D) ಅಡಿಯಲ್ಲಿ ಮೆಚ್ಯುರಿಟಿ ಪ್ರಯೋಜನಗಳ ಮೇಲಿನ ತೆರಿಗೆ ವಿನಾಯಿತಿಯು ಅನ್ವಯಿಸುತ್ತದೆ. ಒಬ್ಬ ವ್ಯಕ್ತಿಯು ವಾರ್ಷಿಕವಾಗಿ ಪಾವತಿಸುವ ಒಟ್ಟು ಪ್ರೀಮಿಯಂಗಳು ಐದು ಲಕ್ಷ ರೂ. ಈ ಮಿತಿಯನ್ನು ಮೀರಿದ ಪ್ರಿಯಂ ಮೊತ್ತಕ್ಕೆ ತೆರಿಗೆ ವಿಧಿಸಲಾಗುತ್ತದೆ. ಇನ್ನು ಜೀವ ವಿಮಾ ಪಾಲಿಸಿದಾರರ ಮರಣದ ನಂತರ ಪಡೆದ ಮೊತ್ತಕ್ಕೆ ಯಾವುದೇ ತೆರಿಗೆ ಅನ್ವಯಿಸುವುದಿಲ್ಲ.